ಯಲ್ಲಾಪುರ: ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಪೀಠಾಧೀಶ ಸ್ವರ್ಣವಲ್ಲಿ ಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ರೀಮದ್ಭಗವದ್ಗೀತಾ ಅಭಿಯಾನವನ್ನು ನಾಡಿನಾದ್ಯಂತ ಯಶಸ್ವಿಯಾಗಿ ನಡೆಸಿದ್ದು, ಅದನ್ನು ಪ್ರತಿವರ್ಷವೂ ಪುನರ್ಮನನ ಮಾಡುವ ದೃಷ್ಟಿಯಿಂದ ಈ ವರ್ಷವೂ ಯಲ್ಲಾಪುರ ತಾಲೂಕಿನಲ್ಲಿಯೂ ಉತ್ತಮ ಸಂಘಟನೆಯೊಂದಿಗೆ ನಡೆಯುವುದಕ್ಕೆ ತಾಲೂಕಾ ಸಮಿತಿ ರಚಿಸಲು ಶ್ರೀ ಮಠದ ನಿರ್ದೇಶನದಂತೆ ಸೆ.3 ಸೋಮವಾರ ಸಂಜೆ 5 ಘಂಟೆಗೆ ಸಭೆ ಕರೆಯಲಾಗಿದೆ.
ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಸಭೆಯನ್ನು ಕರೆಯಲಾಗಿದೆ. ಸದ್ಭಕ್ತರು ಶ್ರೀಮಠದ ಕಾರ್ಯಕರ್ತರು, ಸೀಮಾ ಪರಿಷತ್ ಮಾತೃ ಮಂಡಳಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಲೂಕಾ ಸಮಿತಿ ರಚಿಸಲು ಸಹಕರಿಸುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ.