ಕಾರವಾರ: ಸೆ.01ರಂದು ನಡೆದಿರುವ ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಯು ಸಂಪೂರ್ಣವಾಗುತ್ತಿದ್ದು, ಫಲಿತಾಂಶ ಪ್ರಕಟವಾಗುತ್ತಲಿದೆ.
ಕಾರವಾರ, ಶಿರಸಿ, ದಾಂಡೇಲಿ ನಗರಸಭೆ, ಹಳಿಯಾಳ, ಅಂಕೋಲಾ, ಕುಮಟಾ ಪುರಸಭೆ, ಮುಂಡಗೋಡ ಹಾಗೂ ಯಲ್ಲಾಪುರ ಪಟ್ಟಣ ಪಂಚಾಯತಿಗಳ 250 ವಾರ್ಡ್ ಗಳಿಗೆ 753 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ 198, ಕಾಂಗ್ರೆಸ್ ನಿಂದ 194, ಜೆಡಿಎಸ್ ನಿಂದ 145, 216 ಪಕ್ಷೇತರರು ಕಣದಲ್ಲಿದ್ದಾರೆ.
ಕುಮಟಾದಲ್ಲಿ ಬಿಜೆಪಿ.
ಈ ಬಾರಿ ಕುಮಟಾದಲ್ಲಿ ಬಿಜೆಪಿ ಪುರಸಭೆಯ ಹೆಚ್ಚಿನ ಸ್ಥಾನ ಗೆದ್ದು ಸಾಧನೆ ಮಾಡಿದೆ.
ಬಿಜೆಪಿ-೧೬ ,ಕಾಂಗ್ರೆಸ್ – ೬,ಜೆಡಿಎಸ್-೧
ಪಕ್ಷೇತರ-೦
ಒಟ್ಟು ೨೨ ಸ್ಥಾನಗಳ ಮತೆಣಿಕೆ ಅಂತ್ಯ ವಾಗಿ ಬಿಜೆಪಿ -೧೯ ಸ್ಥಾನಗಳನ್ನು ಪಡೆದು ಗೆಲುವು.
೨೨ ವಾರ್ಡ ಗಳಲ್ಲಿ ೭೦ ಅಭ್ಯಾರ್ಥಿ ಗಳು ಈ ಬಾರಿ ಕಣದಲ್ಲಿದ್ದರು.
ವಾರ್ಡ ನಂಬರ್ ೨ ರಲ್ಲಿ ಲಕ್ಷ್ಮಿಗೊಂಡ ಕಾಂಗ್ರೆಸ್ ನವರು ಈ ಹಿಂದೆ ಅವಿರೋಧವಾಗಿ ಆಯ್ಕೆ ಆಗಿದ್ದರು.
ಶಿರಸಿಯಲ್ಲಿ ಬಿಜೆಪಿ.
ಶಿರಸಿ ಸ್ಥಳೀಯ ೧೭ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ನಗರಸಭಯೆನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ೯, ಪಕ್ಷೇತರ ೪, ಜೆಡಿಎಸ್ ೧ ಸ್ಥಾನಗಳನ್ನು ಪಡೆದುಕೊಂಡಿದೆ.
ಕಾರವಾರದಲ್ಲಿ ಸಮ ಬಲ
ನಗರಸಭೆಯ ೩೧ ವಾರ್ಡ್ ಗಳಿಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್, ಬಿಜೆಪಿ ಸಮಬಲ ಕಾಯ್ದುಕೊಂಡಿದೆ.
ಅಂತಿಮವಾಗಿ ಬಿಜೆಪಿ ೧೧, ಕಾಂಗ್ರೆಸ್ ೧೧ ಜೆಡಿಎಸ್ ೪, ಪಕ್ಷೇತರ ೫ ಮಂದಿ ಗೆಲುವು ಸಾಧಿಸಿದ್ದಾರೆ.
ಅಂಕೋಲಾದಲ್ಲಿ ಅತಂತ್ರ
ಅಂಕೋಲಾದಲ್ಲಿ ಕಾಂಗ್ರೆಸ್ ೧೦, ಬಿಜೆಪಿ ೮, ಪಕ್ಷೇತರ ೫ ಮಂದಿ ಗೆಲುವು ಸಾಧಿಸಿದ್ದಾರೆ. ಆದರೆ ಯಾವುದೇ ಪಕ್ಷ ಬಹುಮತ ಪಡೆದಿಲ್ಲ.
ಯಲ್ಲಾಪುರದಲ್ಲಿ ಕಾಂಗ್ರೆಸ್.
ಕಾಂಗ್ರೆಸ್ ೧೨, ಬಿಜೆಪಿ – ೫, ಜೆಡಿಎಸ್ – ೧
ಇತರೆ – ೧ ಸ್ಥಾನವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಸಾಧನೆ ಮಾಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಮುಂಡಗೋಡದಲ್ಲಿ ಬಿಜೆಪಿ ಮುಂದು.
ಮುಂಡಗೋಡು ಪಟ್ಟಣಪಂಚಾಯ್ತಿಯಲ್ಲಿ
ಬಿಜೆಪಿ-೧೦
ಕಾಂಗ್ರೆಸ್-೯
ಒಟ್ಟು ಸ್ಥಾನಗಳು ೧೯ ಆಗಿದ್ದು ೭೦ ಅಭ್ಯರ್ಥಿಗಳು ಕಣದಲ್ಲಿದ್ದರು.