ಅಂಕೋಲ: ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಪುತ್ರ, ಕೆ ಪಿ ಸಿ ಸಿ ಸದಸ್ಯ, ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಟ್ರಸ್ಟಿಗಳಾದ ಪ್ರಶಾಂತ ದೇಶಪಾಂಡೆ ಯವರ 40 ನೇ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಮಾಡುವ ಮೂಲಕ ಆಚರಿಸಲಾಯಿತು..
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಪ್ರಶಾಂತ ದೇಶಪಾಂಡೆ ಯವರು ನಮ್ಮೆಲ್ಲರ ಯುವ ನಾಯಕರು. ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ಅವರು ಇಂದು ಜನಪ್ರತಿನಿಧಿ ಆಗದೇ ಇದ್ದರೂ ನಮ್ಮ ಉತ್ತರ ಕನ್ನಡ ಜನತೆಯ ಬಗ್ಗೆ ಅಪಾರ ಗೌರವ ಪ್ರೀತಿ ಇಟ್ಟುಕೊಂಡವರು.. ನಮ್ಮ ಜಿಲ್ಲೆಯಲ್ಲಿ ಯಾರು ತಾವು ಕಷ್ಟದಲ್ಲಿದ್ದೇವೆ ಎಂದು ಅಳಲು ತೋಡಿಕೊಂಡರೂ ಕೂಡಲೆ ನೆರವಾಗುವ ಮಹಾನುಭಾವರು.. ಅವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ ಆಚರಿಸುವುದರಿಂದ ಏನೂ ಪ್ರಯೋಜನ ಇಲ್ಲ ಏನಾದರೂ ಸಮಾಜಕ್ಕೆ ನೆರವಾಗುವಂತಿರಬೇಕು ಅಂತ ಒಂದು ಜೀವ ಉಳಿಸುವ ಶ್ರೇಷ್ಠ ದಾನ ರಕ್ತ ದಾನ ಮಾಡುವ ಮೂಲಕ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ ಇದು ಬಹಳ ಅರ್ಥಪೂರ್ಣವಾಗಿ ನೆರವೇರುತ್ತಿದೆ ನಮ್ಮ ಜಿಲ್ಲೆಯ ಅನೇಕರು ಪಕ್ಷಾತೀತವಾಗಿ, ಜಾತ್ಯತೀತ ವಾಗಿ ಈ ಪಾಲ್ಗೊಂಡಿದ್ದಾರೆ ಎಂದರು ಜೊತೆಗೆ ಪ್ರಶಾಂತ್ ರವರಿಗೆ ದೇವರು ಆಯುರಾರೋಗ್ಯ ರಾಜಕೀಯದಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನ ಭಗವಂತ ಕರುಣಿಸಲಿ ಎಂದು ಶುಭ ಹಾರೈಸಿದರು
ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ ರಾಜೇಂದ್ರ ನಾಯ್ಕರು ನಮ್ಮ ಯುವ ನಾಯಕ ಪ್ರಶಾಂತ್ ದೇಶಪಾಂಡೆ ಯವರ ಹುಟ್ಟುಹಬ್ಬ ವನ್ನು ರಕ್ತದಾನದ ಮೂಲಕ ಆಚರಿಸಲು ತಿರ್ಮಾನಿಸಿದ್ದು ಬಹಳ ಸಂತೋಷ ಇದಕ್ಕೆ ನಾವೆಲ್ಲ ತುಂಬು ಹೃದಯದಿಂದ ಸಹಕಾರ ನೀಡುತ್ತಿದ್ದೇವೆ ಜಿಲ್ಲೆಯ ಅನೇಕ ಭಾಗಗಳಿಂದ ರಕ್ತದಾನ ಮಾಡಲು ಯುವಕರು ಆಗಮಿಸಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದರು..
ನಂತರ 25 ಕ್ಕೂ ಹೆಚ್ಚಿನ ಜನ ರಕ್ತದಾನ ಮಾಡಿದರು
ವೇದಿಕೆ ಮೇಲೆ ತಾ. ಪಂ ಅಧ್ಯಕ್ಷೆ ಸುಜಾತಾ ಗಾಂವಕರ್, ksrtc ನಿರ್ದೇಶಕ ಜಿ ಎಂ ಶೆಟ್ಟಿ, ಪ್ರ ಪಂ ಅಧ್ಯಕ್ಷೆ ಅಂಜಲಿ ಐಗಳ್, ಕಾರವಾರ ರಕ್ತದಾನ ಕೇಂದ್ರದ ಮೇಲ್ವಿಚಾರಕಿ ರಿಜ್ವಾನಾ ಶೇಖ್,ಜಿ ಪಂ ಸದಸ್ಯ ಉದಯ್ ನಾಯ್ಕ ಆರ್ ಟಿ ಮಿರಾಶಿ ಇನ್ನಿತರರು ಉಪಸ್ಥಿತರಿದ್ದರು ಕಾರ್ಯಕ್ರಮ ದಲ್ಲಿ ಇನ್ನೂರುಕ್ಕೂ ಹೆಚ್ಚಿನ ಜನ ಉಪಸ್ಥಿತರಿದ್ದರು..

RELATED ARTICLES  ಮೂಡಭಟ್ಕಳ ಶಾಲೆಯಲ್ಲಿ ನಡೆಯಿತು ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಾಮಾಜಿಕ ಪರಿಶೋಧನೆ