ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರಾವಣ ಸೋಮವಾರ ದಿನವಾದ ಇಂದು ಭಕ್ತ ಸಾಗರವೇ ಹರಿದು ಬಂದಿತ್ತು .

ಸಾವಿರಾರು ಜನರು ಮಹಾಬಲೇಶ್ವರ ದೇವರನ್ನು ಅರ್ಚಿಸಿ, ಭಜಿಸಿ ಹಾಗೂ ಅಭಿಷೇಕ ಮಾಡಿ ಪುನೀತರಾದರು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಶ್ರಾವಣ ಸೋಮವಾರ ಪ್ರಯುಕ್ತ ವಿಶೇಷ ‘ಅಮೃತಾನ್ನ ‘ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇಡ್ಲಿ, ವಡೆ , ಸಾಬೂದಾನಿ , ಪಾಯಸ , ಅವಲಕ್ಕಿಯನ್ನು ಬಂದ ಭಕ್ತಾದಿಗಳಿಗೆ ವಿತರಿಸಲಾಯಿತು .

RELATED ARTICLES  ಹೊನ್ನಾವರ ಜಲವಳ್ಳಿ ವಿ.ಎಸ್.ಎಸ್.ನ ನೂತನ ನಿರ್ದೇಶಕರ ಆಯ್ಕೆ ಶಾಸಕರ ಬಣಕ್ಕೆ ಗೆಲುವು.