ಸಿದ್ದಾಪುರ: ಪಟ್ಟಣದ ಪ್ರಶಾಂತಿ ವಿದ್ಯಾಕೇಂದ್ರದ ಸಭಾಭವನದಲ್ಲಿ ರಂಗಸೌಗಂಧ ತಂಡದವರು ಮಾಯದ ಕೊಡಲಿ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದರು. ಇದಕ್ಕೂ ಪೂರ್ವದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಶಿವಾನಂದ ಕಳವೆ ಮಾತನಾಡಿದರು.

ನಿಸರ್ಗದ ಸಾಕ್ಷಗಳನ್ನು ಹಿರಿಯರು ಗುರುತಿಸಿದ್ದಾರೆ. ಪುರಾಣಗಳು ಪರಿಸರ ಪ್ರೀತಿಯನ್ನು ಹೇಳಿವೆ. ಕಡಿಯುವ ಕಾಡನ್ನು ಬೆಳೆಸುವ ನೀತಿ ಬ್ರಿಟಿಷರದ್ದಾಗಿದ್ದು ನಾವೂ ಅದನ್ನೇ ಅನುಸರಿಸುತ್ತಿದ್ದೇವೆ. ಅರಣ್ಯ,ಪರಿಸರ ಸಂರಕ್ಷಿಸುವ ಜವಾಬ್ದಾರಿ ಇಲಾಖೆ ಮಾತ್ರ ಅಲ್ಲ. ಜನತೆಯದ್ದೂ ಆಗಿದೆ ಎಂದರು.

RELATED ARTICLES  ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ಭೂಮಿ ಇರುವದೇ ತನಗಾಗಿ ಎನ್ನುವ ಮನಷ್ಯನ ಧೋರಣೆಯಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ. ಪರಿಸರದ ಕುರಿತಾಗಿ ಅರಿವು ಮೂಡಿಸುವಲ್ಲಿ ಮಾತು ಸೋತಿದ್ದು ಬೇರೆ ಬೇರೆ ರೂಪದಲ್ಲಿ ಜಾಗೃತಗೊಳಿಸಬೇಕಾಗಿದೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ಆರ್‍ಎಫ್‍ಒ ಲೋಕೇಶ ಪಾಟಣಕರ ಮಾತನಾಡಿ ಅರಣ್ಯ ತೆರೆದಿಟ್ಟ ಖಜಾನೆಯಂತಾಗಿರುವದರಿಂದ ನಾಶಕ್ಕೆ ಕಾರಣವಾಗಿದೆ. ಕಾನೂನಿಂದ ಅದನ್ನು ರಕ್ಷಿಸಲು ಸಾಧ್ಯವಾಗದು, ಪ್ರಕೃತಿಯ ಮೇಲಿನ ಒತ್ತಡ ಅದರ ಅಸಮತೋಲನಕ್ಕೆ ಕಾರಣವಾಗಿದೆ ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಉಪಸ್ಥಿತರಿದ್ದರು. ಪ್ರಶಾಂತಿ ಆದರ್ಶ ಸೇವಾ ಶಿಕ್ಷಣ ಸಂಸ್ಥೆ ಪ್ರಧಾನ ಟ್ರಸ್ಟಿ ಆರ್.ಜಿ.ಪೈ.ಮಂಜೈನ್ ಅಧ್ಯಕ್ಷತೆವಹಿಸಿದ್ದರು.

RELATED ARTICLES  ಉತ್ತರ ಕನ್ನಡದಲ್ಲಿ ಆರು ಜನರಿಗೆ ಇಂದು ಕೊರೋನಾ : ಬೆಚ್ಚಿ ಬೀಳಿಸಿದೆ ಕೆಲವು ಪ್ರಕರಣ

ರಂಗಸೌಗಂಧದ ಸಂಚಾಲಕ ಗಣಪತಿ ಹೆಗಡೆ ಹುಲಿಮನೆ, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. ನಂತರ ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರದ ಸಹಕಾರದಲ್ಲಿ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ಮಾಯದ ಕೊಡಲಿ ನಾಟಕ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿತು.