ಯಲ್ಲಾಪುರ; ಭಾರಿ ಕೂತುಹಲ ಕೆರಳಿಸಿದ್ದ ಯಲ್ಲಾಪುರ ಪ.ಪಂ. ಚುಣಾವಣೆಯಲ್ಲಿ ಕಾಂಗ್ರೇಸ್ ೧೨, ಬಿಜೆಪಿ ೫ ,ಜೆಡಿಎಸ್ ೧, ಪಕ್ಷೇತರ ೧ ಸ್ಥಾನಗಳಿಸಿಕೊಂಡಿದೆ. ಅದರಂತೆ ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆಗಳು ಬಲು ಜೋರಾಗಿಯೆ ಇತ್ತು. ಕೆಲವರು ದೇವಸ್ಥಾನಗಳಿಗೆ ತೆರಳಿ ಸಂಭ್ರಮಿಸಿದರೆ ಇನ್ನು ಕೆಲವರು ಸಿಹಿ ಹಂಚಿ , ಸಲ್ಪ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಕೆಲ ಜನಪ್ರತಿನಿಧಿಗಳು ಪಟ್ಟಣದ ಕೆಲವು ಕಡೆಗಳಲ್ಲಿ ಸುಮಾರು ೫ ಲಕ್ಷ ರೂ. ನ ಪಟಾಕಿ ಸಿಡಿಸಿದ್ದಾರೆ ಎಂದು ಶಾರದಾಗಲ್ಲಿಯ ಬಳಿ ರಾಜಕೀಯ ಪಕ್ಷದ ಕಾರ್ಯಕರ್ತನೊಬ್ಬ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ. ಪಟಾಕಿ ಸಿಡಿಯುತ್ತಿದ್ದ ಪೊಟೊ ತೆಗೆಯಲು ಹೊರಟ ಮಾಧ್ಯಮ ಪ್ರತಿನಿಧಿ ಬಳಿ ಪಟ್ಟಣದ ಹಲವಾರು ಕಡೆ ಪಟಾಕಿ ಸಿಡಿಸುತ್ತಿದ್ದೆವೆ. ಅದರಲ್ಲಿ ಶಾರದಾಗಲ್ಲಿಯಲ್ಲಿ ೩ ಲಕ್ಷದ ಪಟಾಕಿ ಸಿಡಿಸಿದ್ದೆವೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾನೆ.

ಇಂತವರಾ ನಮ್ಮನ್ನಾಳುವವರು ಸ್ವಾಮಿ?

ಯಾವತ್ತು ಜನರ ಸೇವೆ ಮಾಡುವುದು, ಪಟ್ಟಣದಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸುದಾಗಿ ಓಟು ಕೆಳಲು ತೆರಳುತ್ತಾರೆ. ಗೆದ್ದ ತಕ್ಷಣ ಲಕ್ಷಾನುಗೆಟ್ಟಲೆ ಪಟಾಕಿ ಸಿಡಿಸಿ ಸುತ್ತಮುತ್ತಲಿನ ಪರಿಸರ ಹಾಳು ಮಾಡುದಲ್ಲದೆ ಶಬ್ದ ಮಾಲಿನ್ಯ ವಾಯುಮಾಲಿನ್ಯ ಉಂಟಾಗುತ್ತದೆ. ಮಳೆಗಾಲವಾಗಿದ್ದರಿಂದ ಪಟಾಕಿಯಲ್ಲಿರುವ ವಿಷ ನೀರನ್ನು ಸೇರಿ ಕೆರೆಯನ್ನೊ ಬಾವಿಯನ್ನೊ ಸೇರಿ ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಅಷ್ಟೆ ಅಲ್ಲದೆ ನೀರಿನೊಂದಿಗೆ ಬೆರೆತು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಇಂತಹ ಅಪಾಯಕಾರಿ ಸಂಭ್ರಮಾಚರಣೆ ಎಷ್ಟು ಸರಿ. ಸಂಭ್ರಮಾಚರಣೆ ಅಗತ್ಯವಿದ್ದರೆ ಸಂಭ್ರಮಿಸಲಿ . ಆದರೆ ೪ ಲಕ್ಷದಷ್ಟು ಪಟಾಕಿ ಸಿಡಿಸಿದರೆ ಪರಿಸರದ ಸ್ಥಿತಿಯೆನು. ವಾಸಿಸುವ ಜನರ ಪಾಡೆನು ಎಂದು ಪ್ರಜ್ಞಾವಂತ ನಾಗರಿಕರು ಆಡಿಕೊಳ್ಳುತ್ತಿದ್ದಾರೆ.

RELATED ARTICLES  ಕುಮಟಾದಲ್ಲಿ ಮಹಾಸಂತ, ಚಿಂತಕ ಶ್ರೀ ಸೇವಾಲಾಲರ 283 ನೇ ಜಯಂತಿ ಆಚರಣೆ.

ಇಲ್ಲೊಂದೆ ಕಸವಿಲ್ಲ . ಮತ್ತು ಹಲವು ಕಡೆಗಳಲ್ಲಿ ಕಸವಿದೆ ಅಲ್ಲಿ ಹೋಗಿ ನೋಡಿ ಎಂದು ಮಾಧ್ಯಮ ಪ್ರತಿನಿಧಿಗೆ ತಿಳಿಸಿದ ಕಾಂಗ್ರೇಸ್ ಕಾರ್ಯಕರ್ತ.

ಶಾರದಾಗಲ್ಲಿ ವಿಪರೀತ ಪಟಾಕಿ ಸುಡುತ್ತಿರುವುದರ ಬಗ್ಗೆ ಸ್ಥಳಿಯರು ಮಾಧ್ಯಮ ಪ್ರತಿನಿಧಿಯೋರ್ವರಿಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ತೆರಳಿ ಪೊಟೊ ತೆಗೆಯುವ ಸಂದರ್ಭದಲ್ಲಿ ೪ ಲಕ್ಷ ರೂ. ಪಟಾಕಿ ಹೊಡೆದಿದ್ದೆವೆ. ಇನ್ನು ಹೊಡೆಯುತ್ತೆವೆ. ಪರಿಸರ ಹಾಳಾದ್ರೆ ನಮಗೆನು. ಪಟ್ಟಣದಲ್ಲಿ ಬೆರೆ ಕಡೆ ಕಸ ಗಳಿವೆ ಅದರ ಪೊಟೊ ಹೊಡೆಯಿರಿ ಎಂದು ಕಾಂಗ್ರೇಸ್ ಕಾರ್ಯಕರ್ತನೊಬ್ಬ ಮಾಧ್ಯಮದವರಿಗೆ ಬುದ್ದಿ ಹೆಳಿದ ಘಟನೆಯೂ ನಡೆಯಿತು.

RELATED ARTICLES  ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ

ಲಕ್ಷಗೆಟ್ಟಲೆ ಹಣ ಖರ್ಚು ಮಾಡಿದರೆ ಗಳಿಸುವುದು ಹೇಗೆ?

ಓರ್ವ ಪ.ಪಂ ಸದಸ್ಯನಾಗಿ ವಿಜಯಶಾಲಿಯಾಗಿ ಸಂಭ್ರಮಾಚರಣೆಗೆ ೪ ಲಕ್ಷ ರೂ. ಮೊತ್ತದ ಪಟಾಕಿ ಸುಡುತ್ತಾನೆ ಎಂದರೆ ಪ.ಪಂ ನಲ್ಲಿ ಅಷ್ಟೆಲ್ಲಾ ಲಾಭವಿದೆಯಾ? ಅಥವಾ ಮನೆ ದುಡ್ಡನ್ನು ರಾಜಕೀಯಕ್ಕೆ ಚೆಲ್ಲುತ್ತಾರಾ? ಎನ್ನುವ ಜಿಜ್ಞಾಸೆ ಹಲವರದ್ದು. ಏನೆ ಆಗಲಿ ಪ.ಪಂ ಸ್ವಚ್ಛತೆ ಬಗ್ಗೆ ಗಮನಹರಿಸಿ ಸರಿಪಡಿಸಲು ಪ್ರಯತ್ನಿಸಬೇಕಾದ ಜನಪ್ರತಿನಿಧಿಗಳೆ ಇಷ್ಟೆಲ್ಲಾ ಪ್ರಮಾಣದ ಕಸಕ್ಕೆ ಯಜಮಾನರಾದರೆ ಪಟ್ಟಣದ ಸ್ವಚ್ಛತೆ ಮರಿಚಿಕೆಯೆ.

ವರದಿ; ಗಣಪತಿ ವಾಗಳ್ಳಿ.