ಭಟ್ಕಳ: ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರದ ಸಾಹಿತ್ಯ ಸಂಘದಿಂದ ವಿಶೇಷವಾಗಿ ಕಳೆದ ನಾಲ್ಕು ವರ್ಷದಿಂದ ರಕ್ಷಾಬಂಧನವನ್ನು ಪರಸ್ಪರ ರಕ್ಷೆ ಕಟ್ಟುವ ಮೂಲಕ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕಿ ರೇಷ್ಮಾ ನಾಯಕ ಅವರ ನೇತೃತ್ವದಲ್ಲಿ ಈ ಆಚರಣೆ ಶ್ರೀವಲ್ಲಿ ಶಾಲೆಯಲ್ಲಿ ಆರಂಭಗೊಂಡಿದ್ದು. ಇದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಭಟ್ಕಳ ಸಹಕಾರ ನೀಡಿದ ಪರಿಣಾಮ ಪ್ರತಿವರ್ಷ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ಆಚರಣೆಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸೋದರ ಭಾತೃತ್ವದ ಭಾವವನ್ನು ಗಟ್ಟಿಗೊಳಿಸಲು ಜಾಗೃತಗೊಳಿಸಲು ಸಾಧ್ಯ ಎನ್ನುತ್ತಾರೆ ಶಿಕ್ಷಕಿ ರೇಷ್ಮಾ ನಾಯಕ.
ಪ್ರತಿ ವರ್ಷ ಒಬ್ಬರು ಅತಿಥಿ ಗಳು ರಕ್ಷಾಬಂಧನ ಕುರಿತು ಮಾತನಾಡುತ್ತಾರೆ. ಈ ವರ್ಷ ಮುಖ್ಯ ಅತಿಥಿ ಗಳಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಈರಯ್ಯ ದೇವಾಡಿಗ ಉಪಸ್ಥಿತರಿದ್ದರು.
ಸುಮಾರು ನಾಲ್ಕು ನೂರು ವಿಧ್ಯಾರ್ಥಿಗಳು ರಕ್ಷೆ ಕಟ್ಟಿಕೊಂಡು ಶುಭ ಕೋರಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ರಕ್ಷೆ ಕಟ್ಟಿಕೊಂಡು ಶುಭಾಶಯ ಹಂಚಿಕೊಂಡರು.