ಗೋಕರ್ಣದ ಬೇಲೆಹಿತ್ಲದ ದಂಡೆಭಾಗ ಹೋಬಳಿಯಲ್ಲಿ ರೇಶನ್ ಕಾರ್ಡ್ ಸಿಗದೇ ಸರಕಾರದ ದಿನಸಿ ಪಡಿತರ ದೊರೆಯದೇ ಬಿಕ್ಷೆ ಬೇಡಿ ಹಸಿವನ್ನು ನೀಗಿಸಿಕೊಳ್ಳಲೂ ಆಗದೇ ಕಂಗಾಲಾಗಿ ಅನಾರೋಗ್ಯದಿಂದ ಬಳಲಿ ಒಂದೇ ಕುಟುಂಬದ ಮೂವರ ದುರ್ಮರಣ ಇತ್ತೀಚೆಗೆ ಸಂಭವಿಸಿದ್ದು “ ಜನಮಾದ್ಯಮ” ಪತ್ರಿಕೆಯಲ್ಲಿ ವರದಿಯಾಗಿ ಬಂದಿತ್ತು. ಹಾಗು ನಿರ್ಗತಿಕರಾಗಿ ವಾಸಿಸುತ್ತಿರುವ ನಾಗಮ್ಮಾ ಮುಕ್ರಿ ಮನೆಯ ದುಸ್ತಿತಿ ಕುರಿತು ಸಮಗ್ರ ವರದಿ ಪತ್ರಿಕೆಯಲ್ಲಿ ಬಂದ ತಕ್ಷಣ ವರದಿ ಓದಿ ಸ್ಪಂದಿಸಿ ಗೋಕರ್ಣಕ್ಕೆ ಆಗಮಿಸಿ ನಾಗಮಾ ಮುಕ್ರಿ ಮನೆಗೆ ಈ ಭಾಗದ ಶಾಸಕರು ಹಾಗು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ರಾಜ್ಯ ಅದ್ಯಕ್ಷರಾದ ಶಾರದಾ ಶೆಟ್ಟಿ ಬೇಟಿಯಾಗಿ ಸತ್ಯದ ಅರಿವನ್ನು ಮಾಡಿಕೊಂಡರು.

ಗೋಕರ್ಣ ಕಂದಾಯಾಧಿಕಾರಿ ಹಾಗು ಗ್ರಾ.ಪಂ ಅಧಿಕಾರಿ ಸಿಬ್ಬಂದಿಗಳನ್ನು ಕರೆದು ತಕ್ಷಣ ಪಡಿತರ ಚೀಟಿ ಹಾಗು ಸೂರಿಲ್ಲದ ನಾಗಮ್ಮಳಿಗೆ ಮನೆ ಕಟ್ಟಿಕೊಡಲು ಸೂಚಿಸಿದರು ಜತೆಗೆ ತಮ್ಮ ಕೈಯ್ಯಿಂದ 5,000 ರೂ ಗಳನ್ನು ನಾಗಮ್ಮ ಮಾರು ಮುಕ್ರಿ(70) ಎಂಬ ಹಿರಿಯಳಿಗೆ ನೀಡಿದರು. ನಾಗಮ್ಮ ಮುಕ್ರಿ ಜತೆಗೆ ಹಾಲಿ ಇದ್ದ ಮಗ ಗಣಪತಿ ಮುಕ್ರಿ ( ಗ್ರಾ.ಪಂ. ಸದಸ್ಯೆ ನಾಗಮ್ಮ ಮುಕ್ರಿ ಗಂಡ ) ಶಾಸಕರು ಮನೆ ಬೇಟಿ ಸಂದರ್ಬದಲ್ಲಿ ಹಾಜರಿದ್ದು ತಮ್ಮ ಸಮಸ್ಯೆ ಹೇಳಿಕೊಂಡನು. ಶಾಸಕರು ನಾಗಮ್ಮ ಮುಕ್ರಿ ವಾಸಿಸುವ ಮನೆ ಸುತ್ತಲ ಕುರುಚಲ ಗಿಡದ ರಾಷಿ, ಪ್ಲಾಸ್ಟಿಕ್ ಹೊದೆಸಿ 10 ಅಡಿ 12 ಅಡಿ ವ್ಯಾಸದ ಸೂರು, ಅರ್ದಮ್ಮರ್ದ ಕಟ್ಟಿ ಬಾಗಿಲು ಇಲ್ಲದ ಛಾವಣಿ ಜೀರ್ಣಾವಸ್ತೆ ತಲುಪಿದ ಗ್ರಾ.ಪಂ. ಕಾಟಾಚಾರಕ್ಕೆ ಕಟ್ಟಿಸಿಕೊಟ್ಟ ಮನೆ ವೀಕ್ಷಿಸಿ ಮರ್ಮಲ ಮರುಗಿ ತೀವೃ ಖೇಧ ವ್ಯಕ್ತಪಡಿಸಿದರು.
ಗೋಕರ್ಣದಲ್ಲಿಯೂ ನಿರ್ಗತಿಕ ಕುಟುಂಬ ಇದೆಯೇ ಜತೆಗೆ ಹಸಿವಿನ ಸಾವು ಕಾಣುತ್ತಿದೆಯೇ ಎಂಬ ಕುರಿತು ಗ್ರಾ.ಪಂ ಅದ್ಯಕ್ಷ ಸದಸ್ಯರನ್ನೂ ತರಾಟೆಗೊಳಪಡಿಸಿ ಜತೆಗೆ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿ” ಒಂದು ವಾರದಲ್ಲಿ ನನಗಿಲ್ಲಿ ಉತ್ತಮ ಸ್ತಿತಿ ಕಾಣಬೇಕು ಎಂದು ಎಚ್ಚರಿಸಿದರು.” ಜತೆಗೆ ಮನೆಯ ಸುತ್ತ ಶೌಚಾಲಯವೂ ಇಲ್ಲದ ನಾಗಮ್ಮಳೆಂಬ ಮುಪ್ಪಿನ ಮಹಿಳೆಯನ್ನು ಕಂಡು ಇಲ್ಲಿನ ಪರಿಸರದ ಕುಲುಶಿತತೆ ಮಾಲಿನ್ಯ ವೀಕ್ಷಿಸಿ ಮರುಕ ವ್ಯಕ್ತ ಪಡಿಸಿದರು.
ಈ ಸಂದರ್ಬದಲ್ಲಿ ಈ ಸುದ್ದಿಯ ಪ್ರಮುಖ ರೂವಾರಿ ಇಲ್ಲಿನ ಮಹಾಗಣಪತಿ ಸಮಾಜ ಸೇವಾಸಂಘದ ಅದ್ಯಕ್ಷ ಪಾದಾಧಿಕಾರಿಗಳ ನಿಜವಾದ ಜನಸ್ಪಂದನ ಕಂಡು ಸಂತಸ ವ್ಯಕ್ತ ಪಡಿಸಿದರು.” ಒಂದು ವಾರದಲ್ಲಿ ನಾಗಮ್ಮಳಿಗೆ ಸಮರ್ಪಕ ವ್ಯವಸ್ತೆ ಕಲ್ಪಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುವದಾಗಿ ಸಮಾಜ ಸೇವಾ ಸಂಘ ಸರಕಾರಕ್ಕೆ ಎಚ್ಚರಿಕೆ ನೀಡಿದೆ.” ಶಾಸಕರ ಬೇಟಿ ಸಂದರ್ಬದಲ್ಲಿ ಸಂಘದ ಅದ್ಯಕ್ಷ ಕುಮಾರ ಗೌಡ, ಸತೀಶ ದೇಶ ಬಂಡಾರಿ, ಮದು ದೀವಟಗಿ ಬಾಲು ದೀವಟಗಿ, ಮಂಜುನಾಥ ಭಟ್ಕಳ, ಮಹಾಬಲೇಶ್ವರ ಗೌಡ ಮುಂತಾದವರಿದ್ದರು. ಶಾಸಕರ ಜತೆಗೆ ಗ್ರಾ.ಪಂ ನ ಅದ್ಯಕ್ಷೆ ಮಹಾಲಕ್ಷ್ಮಿ ಭಡ್ತಿ, ಸದಸ್ಯೆ ಸುವರ್ಣಾ ಅಡ್ಪೇಕರ, ಗಣಪತಿ ಗೌಡ ಭಟ್ಟಿ, ಮಾದೇವಿ ಅಂಬಿಗ ಪಾರ್ವತಿ ನಾಯ್ಕ ಹಾಗು ತಾ.ಪಂ. ಸದಸ್ಯ ಮಹೇಶ ಶೆಟ್ಟಿ ಹಾಗು ಮೋಹನ ನಾಯಕ, ಬ್ಲೊಕ್ ಕಾಂಗ್ರೆಸ್ ಅದ್ಯಕ್ಷ ಮಹಾಬಲೇಶ್ವರ ಗೌಡ ನಾಡು ಮಾಸ್ಕೇರಿ ಗ್ರಾ.ಪಂ ಅದ್ಯಕ್ಷ ಹನೀಫ್ ಸಾಬ್, ಹನೇಹಳ್ಳಿ ಗ್ರಾ.ಪಂ ಅದ್ಯಕ್ಷ ಅರುಣ ಗೌಡ ಮುಂತಾದ ನೂರಕ್ಕೂ ಹೆಚ್ಚಿನ ಜನರು ಹಸಿವಿನಿಂದ ಸಾವು ಕಂಡ ಮನೆಗೆ ಬೇಟಿ ನೀಡಿ ತಮ್ಮ ಮರುಕ ಹಾಗು ಸಾಂತ್ವನ ವ್ಯಕ್ತ ಪಡಿಸಿ ಕೂಡಲೇ ಕುಟುಂಬಕ್ಕೆ ಸ್ಪಂದಿಸಲು ಸರಕಾರವನ್ನು ಆಗ್ರಹಿಸಿದರು.

RELATED ARTICLES  "ನೇತ್ರದಾನ ಕುರಿತು ಜಾಗೃತಿ"ಯಶಸ್ವಿಯಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ಕಾರ್ಯಕ್ರಮ.