ಹೊಸದಿಲ್ಲಿ: ಮಿಗ್-27 ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಒಂದು ರಾಜಸ್ಥಾನದ ಜೋಧ್ಪುರ ಸಮೀಪ ದುರಂತಕ್ಕೀಡಾಗಿದೆ. ಪೈಲಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ದಿನ ನಿತ್ಯದ ಅಭ್ಯಾಸ ಹಾರಾಟ ನಡೆಸುತ್ತಿದ್ದಾಗ ವಿಮಾನ ದುರಂತಕ್ಕೀಡಾಗಿದೆ. ಈ ಕುರಿತಾಗಿ ತನಿಖೆಗೆ ವಾಯುಪಡೆ ಆದೇಶಿಸಿದೆ.
ವಾಯುಪಡೆಯಲ್ಲಿ ಇನ್ನೂ ಎರಡು ಸ್ಕ್ವಾಡ್ರನ್ಗಳಷ್ಟು ಮಿಗ್-27 ಯುದ್ಧ ವಿಮಾನಗಳಿದ್ದು, ಮುಂದಿನ ವರ್ಷ ಅವುಗಳಿಗೆ ನಿವೃತ್ತಿ ನೀಡಲಿದೆ.

RELATED ARTICLES  ಜನವರಿ 14 ರಿಂದ ಮಾರ್ಚ್​ 3 ರವರೆಗೆ ಅರ್ಧ ಕುಂಭಮೇಳ : ಈ ಬಾರಿಯ ಕುಂಭ ಮೇಳ ಹೊಸದೊಂದು ಇತಿಹಾಸಕ್ಕೆ ಸಾಕ್ಷಿ.

ಮೇಲ್ದರ್ಜೆಗೇರಿಸಿದ ಮಿಗ್-27 ವಿಮಾನವೊಂದು ಜೂನ್ನಲ್ಲಿ ಜೋಧ್ಪುರದ ಜನ ವಸತಿ ಪ್ರದೇಶದಲ್ಲಿ ಇದೇ ರೀತಿ ಪತನಗೊಂಡಿತ್ತು. ಆಗಲೂ ದುರಂತಕ್ಕೆ ಕೆಲವೇ ಕ್ಷಣಗಳ ಮೊದಲು ಪೈಲಟ್ ಹೊರಗೆ ಹಾರಿ ಸುರಕ್ಷಿತ ಪಾರಾಗಿದ್ದರು.

RELATED ARTICLES  ವಿದೇಶಿ ವಕೀಲರು ಮತ್ತು ಕಾನೂನು ಸಲಹಾ ಸಂಸ್ಥೆಗಳು ಭಾರತದಲ್ಲಿ ಕಾನೂನು ಸೇವೆ ಮತ್ತು ವಕೀಲಿ ವೃತ್ತಿಯಲ್ಲಿ ತೊಡಗುವಂತಿಲ್ಲ : ಸುಪ್ರೀಂ ಕೋರ್ಟ್‌