ಮುಂಬೈ: ರುಪಾಯಿ ಮೌಲ್ಯ ಕುಸಿತ ಬೆನ್ನಲ್ಲೇ ತೈಲ ದರ ಕೂಡ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ.
ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸತತ 10ನೇ ದಿನವೂ ಏರಿಕೆ ಕಂಡು ಬಂದಿದ್ದು, ತೈಲೋತ್ಪನ್ನಗಳ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಪೆಟ್ರೋಲ್ ದರದಲ್ಲಿ ಇಂದಿನ ದರದಂತೆ ಬರೊಬ್ಬರಿ 39 ಪೈಸೆಯಷ್ಟು ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 32 ಪೈಸೆಗಳಷ್ಟು ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ತೈಲ ದರ ಏರಿಕೆಯಾಗಿರುವುದು ಮತ್ತು ಡಾಲರ್ ಎದರು ರೂಪಾಯಿ ಮೌಲ್ಯ ತಳಮಟ್ಟಕ್ಕೆ ಕುಸಿದಿರುವುದೇ ತೈಲ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

RELATED ARTICLES  ನಕಲಿ ರೇಷನ್ ಕಾರ್ಡ ಹಾಗೂ ಇತರ ಪ್ರಮಾಣ ಪತ್ರ ತಯಾರಿ ಆರೋಪ : ಓರ್ವ ಅರೆಸ್ಟ್

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 79.40 ರೂ. ಹಾಗೂ ಡೀಸೆಲ್ ದರ 71.34 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 82.31 ರೂ. ಮತ್ತು ಡೀಸೆಲ್ ಬೆಲೆ 74.27 ರೂ. ಗಳಾಗಿವೆ.ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 81.98 ರೂ. ಮತ್ತು ಡೀಸೆಲ್ ದರ 73.72 ರೂ. ಇದೆ.

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 86.80 ರೂ. ಮತ್ತು ಡೀಸೆಲ್ ಬೆಲೆ 75.82 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82.51 ರೂ., ಡೀಸೆಲ್ ಬೆಲೆ 75.48 ರೂ. ಆಗಿದೆ.

RELATED ARTICLES  ಕೃಷಿಯ ಬಗ್ಗೆ ದೂರದೃಷ್ಟಿ ಯೋಜನೆ ಅಗತ್ಯ : ಉದ್ಯಮಿ ವಾಳ್ಕೆ ಅಭಿಪ್ರಾಯ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಈ ವರ್ಷದ ಆರಂಭದಿಂದ ಈವರೆಗೂ ಕ್ರಮವಾಗಿ ಶೇಕಡ 13 ಮತ್ತು ಶೇಕಡ 19ರಷ್ಟು ಹೆಚ್ಚಿದೆ. ಇದಕ್ಕೆ ಕಾರಣ ಅಮೆರಿಕದಲ್ಲಿ ತೈಲಕ್ಷೇತ್ರದಲ್ಲಿ ಕುಸಿಯುತ್ತಿರುವ ಹೂಡಿಕೆ, ಇರಾನ್ ಮೇಲಿನ ದಿಗ್ಭಂಧನ ಮತ್ತಿತರ ಕಾರಣಗಳಿಂದ ತೈಲಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ತೆರಿಗೆ ಪ್ರಮಾಣ 37% ಹಾಗೂ 47% ಇದ್ದು, ಡೀಲರ್ ಕಮಿಷನ್ 3.8% ಹಾಗೂ 4.8% ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಒಂದು ರೂಪಾಯಿ ಕಡಿತಗೊಳಿಸಿದರೆ, ಬೊಕ್ಕಸಕ್ಕೆ 13 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ.