ಭಟ್ಕಳ : ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರು, ನಾಮಧಾರಿ ಸಮಾಜದ ಹಿರಿಯ ರಾಜಕೀಯ ಮುತ್ಸದಿ, ಸದಾ ನಗುತ್ತಲೇ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಪ್ರೀತಿಯ ದಾಮಣ್ಣ. ದಾಮೋದರ್ ಎನ್ ಗರ್ಡಿಕರ್ ಮುಂಡಳ್ಳಿ ಇವರು ಇಂದು ನಮ್ಮನ್ನಗಲಿದ್ದಾರೆ.

ಮುಂಡಳ್ಳಿ ಯುವಕ ಮಂಡಳದ ಸಂಸ್ಥಾಪಕರಾದ ದಾಮಣ್ಣ. ಊರಿನ ಎಲ್ಲ ಜನಪರ ಕಾರ್ಯದಲ್ಲಿ ಮುಂಚೂಣಿಯಲ್ಲಿರುವವರಾಗಿದ್ದರು. ಮುಂಡಳ್ಳಿ ಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭಿಸುವ ಮೂಲಕ.ಊರಿನ ಒಗ್ಗಟ್ಟಿಗೆ ಧಾರ್ಮಿಕ ಶೃದ್ಧೆ ಕಾರಣವಾಗುತ್ತದೆ ಎಂದು ತೋರಿಸಿಕೊಟ್ಟವರು.

RELATED ARTICLES  ಕುಮಟಾದಲ್ಲಿ ಯಶಸ್ವಿಯಾಗಿ ಜರುಗಿದ ಕೊಂಕಣಿ ಭಾಷಾ ಮಾನ್ಯತಾ ದಿನಾಚರಣೆ.

ಸ್ವತಃ ಕ್ರೀಡಾಪಟು ಕಲಾವಿದರಾದ ದಾಮಣ್ಣ ನನ್ನಂತ ಅನೇಕ ಕಲಾವಿದರಿಗೆ ಸದಾ ಮಾರ್ಗದರ್ಶಕರಾದವರು. ಅವರು ಸ್ಥಾಪಿಸಿದ ಯುವಕ ಮಂಡಳ ಮುಂಡಳ್ಳಿ ವತಿಯಿಂದ ಯುವಜನಮೇಳಗಳಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮಂತ ಕಲಾವಿದರು ಭಾಗವಹಿಸುವಂತೆ ಉತ್ತೇಜನ ನೀಡಿದವರು.

RELATED ARTICLES  ಶ್ರೀ ಗುರುಕೃಪಾದಲ್ಲಿ ಫೇ 12 ರ ವರೆಗೆ ಜಾತ್ರಾ ಸಂಭ್ರಮ

ಭಗವಂತ ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎನ್ನುವ ಪ್ರಾರ್ಥನೆ ನಮ್ಮದು.

ಬರಹ : ಉಮೇಶ ಮುಂಡಳ್ಳಿ