ಗೋಕರ್ಣ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ,೦೨-೦೯-೨೦೧೮ ರವಿವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ನೈವೇದ್ಯ ಪೂಜೆ ನೆರವೇರಿಸಲಾಯಿತು . ಸಾಯಂಕಾಲ ಶ್ರೀ ದೇವರ ಸಲಾಮು ಕೋಟಿತೀರ್ಥದ ಸಮೀಪವಿರುವ ಕೃಷ್ಣಾಪುರ ದೇವಾಲಯಕ್ಕೆ ಮತ್ತು ವೆಂಕಟರಮಣ ದೇವಾಲಯಕ್ಕೆ ತೆರಳಿ ಹಿಂದಿರುಗಿತು .

RELATED ARTICLES  ಸಂಪನ್ನಗೊಂಡ ಹೆಗಡೆ ವಲಯ ಸಭೆ.

‘ದಧಿ ಶಿಕ್ಯೋತ್ಸವ’

ಸಂಜೆ ಐದು ಘಂಟೆಗೆ ಶ್ರೀ ದೇವರ ಉತ್ಸವವು ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ
ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳುತ್ತದೆ .
ಅಲ್ಲಲ್ಲಿ ನಿಗದಿತ ಸ್ಥಳದಲ್ಲಿ 19 ಮೊಸರು ಗಡಿಗೆ ಹಾಗು ತೆಂಗಿನ ಕಾಯಿ ಒಡೆಯುವುದು ಈ ಉತ್ಸವದ ವಿಶೇಷ .
ಈ ಉತ್ಸವಕ್ಕೆ ‘ದಧಿ ಶಿಕ್ಯೋತ್ಸವ’ ಎಂದು ಕರೆಯುತ್ತಾರೆ .
ನಂತರ ಕೋಟಿತೀರ್ಥವನ್ನು ಸುತ್ತುವರಿದು ಕೃಷ್ಣಾಪುರ ದೇವಾಲಯ ಹಾಗೂ ವೆಂಕಟರಮಣ ದೇವಾಲಯಗಳ ಮೂಲಕ ಶ್ರೀ ದೇವರ ಉತ್ಸವವು ಮರಳಿ ಬಂದಿತು .

RELATED ARTICLES  Signs and symptoms of a Healthy Relationship