ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಕಾರಣದಿಂದಾಗಿ, ಬೆಳಗಾವಿ ಜಿಲ್ಲೆಯ ‌ರಾಯಬಾಗ ತಾಲೂಕಿನ ನಸಲಾಪುರದಲ್ಲಿ ಸೋಮವಾರ ಗಲಾಟೆ ನಡೆದಿದೆ. ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ನಸಲಾಪುರ ಗ್ರಾಮದಲ್ಲಿ‌ ಸವರ್ಣೀಯರು ಮತ್ತು ದಲಿತರು ಕೈ ಕೈ ಮಿಲಾಯಿಸಿ ಹೊಡೆದಾಡಿರುವ ಘಟನೆ ನಡೆದಿದೆ.

RELATED ARTICLES  ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಬಿಡುಗಡೆ: ವಿನೂತನ ಗಣಪನನ್ನು ಪರಿಚಯಿಸಿದ ವೀರೇಂದ್ರ ಹೆಗ್ಗಡೆ

ಪರಿಶಿಷ್ಟ ಜಾತಿಯ ಜನರು ಹಾಗೂ ಸರ್ವಣಿಯರ ನಡುವೇ ತೀವ್ರ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

RELATED ARTICLES  ದೇಶದಲ್ಲಿ ಇನ್ನೂ ಏರಲಿದೆ ಅಕ್ಕಿಯ ದರ