ಕುಮಟಾ : ಇತ್ತೀಚಿಗೆ ಗದಗ ಜಿಲ್ಲೆಯ ಲಕ್ಷೀಶ್ವರದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಶ್ರೀ ಅರವಿಂದ ನಾಯ್ಕ ಹಾಗೂ ವಿನೋದ M. ರವರ ತರಬೇತಿಯಲ್ಲಿ ದಿನಕರ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಫ್ರೌಢ ಶಾಲೆ, ಧಾರೇಶ್ವರ ,ಕುಮಟಾ ಶಾಲೆಯಿಂದ ಸುಮಾರು 29 ವಿದ್ಯಾರ್ಥಿಗಳು ಭಾಗವಹಿಸಿದ್ದು, ಭಾಗವಹಿಸಿದ, ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನವನ್ನು 11 ವಿದ್ಯಾರ್ಥಿಗಳು ಮತ್ತು ದ್ವಿತೀಯ ಸ್ಥಾನವನ್ನು 08 ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ.
ಅಪೂರ್ವ ಸಾಧನೆಗೆ ಅಭಿನಂದನೆಗಳು ಹರಿದುಬಂದಿದೆ. ಆಯೋಜಕರು ದೇಶದಲ್ಲಿಯೇ ಪ್ರಥಮ ಬಾರಿಗೆ ಕರಾಟೆ ಸ್ಪರ್ಧೆಯಲ್ಲಿ ಶುದ್ಧ ಬೆಳ್ಳಿ ಪದಕವನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ.
ಅಲ್ಲದೇ, ವಿದ್ಯಾರ್ಥಿಗಳ ಈ ಸಾಧನೆಗೆ ಕೆನರಾ ವೇಲ್ ಫೆರ್ ಟ್ರಸ್ಟ್ , ಶಾಲಾಭಿವೃದ್ದಿ ಸಮಿತಿ, ಮುಖ್ಯಾಧ್ಯಾಪಕರು ಮತ್ತು ಶಿಕ್ಷಕಿಯರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ವಿದ್ಯಾರ್ಥಿಗಳು ಈ ಸಾಧನೆಯ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಸತ್ವಾಧಾರ ಬಳಗದವರು ಶುಭ ಹಾರೈಸಿದ್ದಾರೆ.