ಕುಮಟಾ: ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ, ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆದರ್ಶ ಶಿಕ್ಷಕ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗೆ ಪ್ರತಿವರ್ಷದಂತೆ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮಂತ್ರಿಮಂಡಳವು ತಮ್ಮ ಶಾಲೆಯ ಗುರುವೃಂದದವರನ್ನು ವಿಶೇಷವಾಗಿ ಗೌರವಿಸುವುದರೊಂದಿಗೆ ಆಚರಿಸಿದರು.
ಈ ಪ್ರಯುಕ್ತ ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯ ಕುರಿತು ಕುಮಾರಿ ಮುಕ್ತಾ ಭಟ್ಟ ಮತ್ತು ರಕ್ಷಿತಾ ಪಟಗಾರ ಭಾಷಣ ಮಾಡಿದರು. ಶಿಕ್ಷಕವರ್ಗದವರಿಗೆ ಮೋಜಿನ ಆಟ ಆಡಿಸುವ ಮೂಲಕ ತಾವೂ ಆನಂದಿಸಿದರು. ಕೇಕ್ ಕತ್ತರಿಸಿ ತಮ್ಮ ನೆಚ್ಚಿನ ಗುರುಗಳಿಗೆ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಶಿಕ್ಷಕನೇ ಸರ್ವಸ್ವವೆನಿಸಿದ್ದ ಅಂದಿನ ಕಾಲಕ್ಕೂ ಇಂದಿನ ಬದಲಾದ ಕಾಲ ಘಟ್ಟದಲ್ಲಿ ಹೊಂದಿರುವ ಶಿಕ್ಷಕನ ವ್ಯಾಖ್ಯೆಗೂ ಇರುವ ಅಂತರದ ಸೃಷ್ಠಿಯಿಂದ ತನ್ನರಿವೇ ತನಗೆ ಗುರು ಎನ್ನುವುದು ಮಂತ್ರವಾಗಬೇಕೆಂದು, ಸರ್ವಪಲ್ಲಿ ರಾಧಾಕೃಷ್ಣನ್‍ರ ಭಾವಚಿತ್ರಕ್ಕೆ ದೀಪ ಬೆಳಗಿ ಮುಖ್ಯ ಗುರು ಎನ್.ಆರ್.ಗಜು ಅಭಿಪ್ರಾಯಿಸಿದರು.
ವಿದ್ಯಾರ್ಥಿ ಪ್ರತಿನಿಧಿ ಸುಪ್ರಸನ್ನ ಗುನಗಾ ಸ್ವಾಗತಿಸಿದರು. ವಿಶ್ವಾಸ್ ಪೈ ನಿರೂಪಿಸಿದರು. ಸೌಂದರ್ಯಾ ನಾಯ್ಕ ವಂದಿಸಿದರು. ಮುಖ್ಯ ಮಂತ್ರಿಗಳಾದ ಪ್ರಣೀತ ಕಡ್ಲೆ ಮತ್ತು ತನುಜಾ ಗೌಡ ಸಹಕರಿಸಿದರು.