ಅಂಕೋಲಾ : ಹಿಂದೂ ಧರ್ಮದ ಪ್ರತಿಯೊಂದು ಆಚರಣೆ ವೈಜ್ಞಾನಿಕ ಕಾರಣ ಇದೆ. ಪ್ರಕೃತಿಯ ಜೊತೆ ಮನುಷ್ಯನಿಗೆ ನಿಕಟ ಸಂಪರ್ಕ ಇರುವುದರಿಂದ ಅದನ್ನು ಉಳಿಸಿ ರಕ್ಷಿಸುವ ಕಾಳಜಿಯನ್ನು ಹಿಂದೂ ಹಬ್ಬಗಳು ಹೊಂದಿವೆ. ಇವು ಬೌದ್ಧಿಕ ಥೆರಪಿಯಂತೆ ಕೆಲಸ ಮಾಡುತ್ತದೆ. ಸಂಗಿತ ಮ್ಯೂಸಿಕಲ್ ಥೆರಪಿಯಂತೆ ಕೆಲಸ ಮಾಡಿ ಮನಸ್ಸನ್ನು ಸಂತಸ ಗೊಳಿಸುತ್ತದೆ. ‘ನಾಗರ ಪಂಚಮಿ ಆಚರಣೆ ಅದು ಪ್ರಾಣಿ ಸಂತತಿ ರಕ್ಷಣೆಗಾಗಿ ಅದರ ಉಳಿವಿನ ಆಚರಣೆÉಯಾಗಿದೆ. ಶಂಖದಿಂದ ಸೇವಿಸುವ ತಿರ್ಥ, ಹಾರ ಚರ್ಮ ರೋಗವನ್ನು ನಿವಾರಿಸಬಹುದು. ಹೀಗೆ ಅರ್ಥ ಅರಿತು ಅನುಷ್ಠಾನ ಮಾಡಿದರೆ ನಮ್ಮ ಥಾರ್ಮಿಕ ವಿಧಿಗಳು ಉಪಯುಕ್ತ’ ಎಂದು ಹಿಮಾಲಯ ಪ.ಪೂ ಕಾಲೇಜಿನ ಸಂಸ್ಕøತ ಅಧ್ಯಾಪಕರಾದ ವಿದ್ವಾನ ದತ್ತಾತ್ರೇಯ ಹೆಗಡೆ ಅಭಿಪ್ರಾಯಪಟ್ಟರು.
ಅವರು ಕಾಕರಮಠದ ವಿಠೋಬ ದೇವಾಲಯದಲ್ಲಿ ಸಂಸ್ಕøತ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಉಪನ್ಯಾಸದಲ್ಲಿ ‘ಧಾರ್ಮಿಕ ವಿಧಿಗಳ ಹಿಂದಿರುವ ವೈಜ್ಞಾನಿಕ ಅಂಶಗಳು’ ಎಂಬ ವಿಷಯದ ಬಗ್ಗೆ ಹಲವು ಉದಾಹರಣೆಗಳ ಮೂಲಕ ವಿಸ್ತ್ರತವಾಗಿ ವಿವರಿಸಿದರು.
ನಿವೃತ್ತ ಅಧ್ಯಾಪಕರಾದ ಪ್ರೋ.ಡಾ.ಎಸ್.ಎನ್.ಭಟ್, ಕೆನರಾ ವೆಲಫೆರ್ ಟ್ರಸ್ಟಿನ ಟ್ರಸ್ಟಿಗಳಾದ ಕೃಷ್ಣಾನಂದ ಶೆಟ್ಟಿ, ನಿವೃತ್ತ ಪ್ರಾಚಾರ್ಯ ಪ್ರೋ. ಮೋಹನ ಹಬ್ಬು, ಡಾ.ದತ್ತಾತ್ರೇಯ ನಾಡಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿ.ಸಿ.ಕಾಲೇಜಿನ ಸಂಸ್ಕøತ ವಿಭಾಗದ ಮುಖ್ಯಸ್ಥೆ : ಪ್ರಾಧ್ಯಾಪಕಿ ಪ್ರೋ. ಶೈಲಜಾ ಭಟ್ ಅತಿಥಿಗಳನ್ನು ಪರಿಚಯಿಸಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮದ ಚೌಚಿತ್ಯವನ್ನು ತಿಳಿಸಿದರು. ಕು. ಸನ್ನಿಧಿ ಹಾಗೂ ಮಿಥಾಲಿಯವರ ಗಣೇಶಸ್ತೂತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಶಿಬಿರಾರ್ಥಿಗಳಾದ ಶ್ರೀಮತಿ ಜ್ಯೋತಿ ಕಾಮತ, ನಾಗಮ್ಮಾ ಕಣಗೀಲ್, ಶ್ರೀಮತಿ ಸಾಧನಾ ಕಾಕರಮಠ, ಶ್ರೀಮತಿ ಭಾಗಿರಥಿ ಹೆಗಡೆಕಟ್ಟೆ, ಶ್ರೀ ವಸಂತ ವೈದ್ಯ ಮತ್ತು ಜಿ.ಸಿ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಠೋಬ ದೇವಸ್ಥಾನದ ಅರ್ಚಕರಾದ ಸುರೇಶಚಂದ್ರ ಭಾಟೆ ಕೊನೆಯಲ್ಲಿ ಎಲ್ಲರ ಉಪಕಾರ ಸ್ಮರಿಸಿದರು.