ಭಟ್ಕಳ: ಶಿಕ್ಷಕನಾಧವನಿಗೆ ತನ್ನ ವೃತ್ತಿಯ ಬಗೆಗೆ ವಿದ್ಯಾರ್ಥಿಗಳ ಬಗೆಗೆ ಪ್ರೀತಿಯಿರಬೇಕು. ಬರಿ ಉದ್ಯೋಗವೆಂದು ತಿಳಿದುಕೊಳ್ಳದೇ ಸೇವಾ ಮನೋಭಾವದಿಂದ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ನಿರಂತರ ಕಲಿಯಲು ಸಿದ್ಧನಿರುವವನು ಮಾತ್ರ ಶಿಕ್ಷಕನಾಗಬಲ್ಲ ಎಂದು ದಿ ನ್ಯೂ ಇಂಗ್ಲೀಷ್ ಶಾಲೆಯ ಶಿಕ್ಷಕ ಎಂ.ಎಚ್. ನಾಯ್ಕ ನುಡಿದರು.

ಅವರು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್. ನರಸಿಂಹ ಮೂರ್ತಿ ಮಾತನಾಡಿ ಮಗುವಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಅವನ ಬದುಕನ್ನು ರೂಪಿಸುವ ಶಿಕ್ಷಣ ವೃತ್ತಿ ಅತ್ಯಂತ ಶ್ರೇಷ್ಠವಾದುದು. ನಿರಂತರ ಅಧ್ಯಯನ ಅಧ್ಯಾಪನದಿಂದ ಜ್ಞಾನವಂತನಾಗಿ ಮಕ್ಕಳಿಗೆ ಶಿಕ್ಷಣ ನೀಡಿ ವಿಧ್ಯಾರ್ಥಿಗಳು ಸದಾಕಾಲ ನೆನಪಿಡುವಂತಹಾ ಶಿಕ್ಷಕರಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಕು.ಚಂದ್ರಪ್ರಭಾ ಹಾಗೂ ಕು.ಜೆಸ್ಸಿಕಾ ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಚಾಲನೆ ನೀಡಲಾಯಿತು, ಕಾಲೇಜಿನ ವತಿಯಿಂದ ಶಿಕ್ಷಕ ಎಮ್.ಎಚ್. ನಾಯ್ಕ ಅವರನ್ನು ಸನ್ಮಾನಿಸಲಾಯಿತು.

RELATED ARTICLES  ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶದ ನಿವಾಸಿಗಳ ಪತ್ತೆಗೆ ಮನವಿ

ಕಾರ್ಯಕ್ರಮದಲ್ಲ ಉಪನ್ಯಾಸಕ ಗಂಗಾಧರ ನಾಯ್ಕ ಅತಿಥಿಗಳಾದ ಎಮ್.ಎಚ್, ನಾಯ್ಕ ಅವರನ್ನು ಪರಿಚಯಿಸಿದರು. ಪ್ರಶಿಕ್ಷಣಾರ್ಥಿ ಕು.ತಬಿತಾ ಎಲ್ಲರನ್ನು ಸ್ವಾಗತಿಸಿದರೆ ಕು.ಚೈತನ್ಯಾ ಹಾಗೂ ದೀಪಾ ರಾಥೋಡ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ಪ್ರಶಿಕ್ಷಣಾರ್ಥಿಗಳು
ಉಪಸ್ಥಿತರಿದ್ದರು.

RELATED ARTICLES  ಅಂಗಡಿಗೆ ಬೆಂಕಿ, ಲಕ್ಷಕ್ಕೂ ಅಧಿಕ ಹಾನಿ