ಭಟ್ಕಳ: ಕಲ್ಲು ಕ್ವಾರಿಯನ್ನು ಬಂದ್ ಮಾಡಿಸುವಲ್ಲಿ ಮುಟ್ಟಳ್ಳಿ ಗ್ರಾಮ ಪಂಚಾಯತ್ ಮೊದಲ ಹೆಜ್ಜೆ ಇಟ್ಟಿದೆ. ಇದು ಎಲ್ಲರಿಗೂ ಮಾದರಿ ಆಯ್ತಾ ಎಂಬ ಮಾತುಗಳು ಕೇಳಿ ಬರುತ್ತಿದೆ.
ತಾಲ್ಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಲಾಂದ್ ನಲ್ಲಿ ಕೆಲವರು ಕಲ್ಲು ಕ್ವಾರಿಯನ್ನು ನಡೆಸುತ್ತಿದ್ದರು.
ಇಂದು ಕ್ವಾರಿಯಿಂದ ಲಾರಿಯಲ್ಲಿ ಕಲ್ಲನ್ನು ತುಂಬಿಸಿಕೊಂಡು ಬರುತ್ತಿರುವಾಗ ಮೂಢಭಟ್ಕಳ ಬೈಪಾಸ್ ನಲ್ಲಿ, ಮುಟ್ಟಳ್ಳಿ ವ್ಯಾಪ್ತಿಯ ಶಾನುಭೋಗರು ಲಾರಿಯನ್ನು ಹಿಡಿದಿದ್ದಾರೆ ಎಂದು ವರದಿಯಾಗಿದೆ.
ತದನಂತರ ರೂ.20,000 ದಂಡವನ್ನು ವಿಧಿಸಿ ಎಚ್ಚರಿಕೆಯನ್ನು ನೀಡಿದ್ದಾರಂತೆ. ಈ ನಿಲುವು ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಲಾಗಿದೆ.
ಇತ್ತೀಚಿಗೆ ನಡೆದ ಗ್ರಾಮ ಸಭೆಯಲ್ಲಿ ಕಲ್ಲು ಕ್ವಾರಿಯನ್ನು ಬಂದ್ ಮಾಡಿಸುವ ಬಗ್ಗೆ ಠರಾವು ಮಾಡಲಾಗಿತ್ತು.