ಕುಮಟಾ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಹಂದಿಗೋಣ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಂದಿಗೋಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಂಕಣ ಎಜ್ಯುಕೇಶನ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿರುತ್ತಾರೆ. ಹಿರಿಯ ಹಾಗೂ ಕಿರಿಯರ ವಿಭಾಗದಲ್ಲಿ ನಡೆದ ಒಟ್ಟೂ 48 ಸ್ಪರ್ಧೆಗಳಲ್ಲಿ 43ರಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ರಜತ ಮಹೋತ್ಸವದ ವರ್ಷದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದನೆಗಳು ಹರಿದು ಬಂದಿವೆ. ಹಿಂದಿನ ವರ್ಷ 39 ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು ಸಾಧನೆ ತೋರಿದ್ದ ವಿದ್ಯಾರ್ಥಿಗಳು ಈ ಬಾರಿ 14 ವಿವಿಧ ಶಾಲಾ ಸ್ಪರ್ಧಿಗಳನ್ನು ಸೋಲಿಸಿ 43 ಸ್ಪರ್ಧೆಯಲ್ಲಿ ಬಹುಮಾನ ಪಡೆದು ಅಮೋಘ ಸಾಧನೆ ತೋರಿದ್ದಾರೆ.

ಕಿರಿಯರ ವಿಭಾಗ:- (ಒಂದರಿಂದ ನಾಲ್ಕನೇ ತರಗತಿಯರಿಗಾಗಿ ನಡೆದ ಸ್ಪರ್ಧೆಗಳು)

ಕನ್ನಡ ಕಂಠಪಾಠ, ಸಂಸ್ಕøತ ಕಂಠಪಾಠ, ಲಘು ಸಂಗೀತ ಹಾಗೂ ಭಕ್ತಿಗೀತೆಯಲ್ಲಿ ಶ್ರೇಯಾ ಹೆಬ್ಬಾರ ಪ್ರಥಮ, ಹಿಂದಿ ಕಂಠಪಾಠ ಸ್ನೇಹಾ ನಾಯ್ಕ ಪ್ರಥಮ, ತುಳು ಕಂಠಪಾಠ ಪಲ್ಲವಿ ಶಾನಭಾಗ ಪ್ರಥಮ, ಸಂಸ್ಕøತ ಧಾರ್ಮಿಕ ಪಠಣ ಕೃತಿಕಾ ಭಟ್ಟ ಪ್ರಥಮ, ಕೊಂಕಣಿ ಕಂಠಪಾಠ ಶ್ರೇಯಸ್ ಜಾಲಿಸತ್ಗಿ ತೃತೀಯ, ಛದ್ಮ ವೇಶದಲ್ಲಿ ಸುಮುಖ ಭಟ್ಟ ಪ್ರಥಮ, ಚಿತ್ರಕಲೆಯಲ್ಲಿ ನಿಖಿಲ ಪಟಗಾರ ಪ್ರಥಮ, ಕಥೆ ಹೇಳುವುದು ಸ್ನೇಹಾ ನಾಯ್ಕ ಪ್ರಥಮ, ಆಶುಭಾಷಣ ಸ್ನೇಹಾ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಮೂಹಿಕ ವಿಭಾಗದ ಜಾನಪದ ನೃತ್ಯ, ದೇಶಭಕ್ತಿಗೀತೆ, ಕೋಲಾಟ, ಕವ್ವಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ಅಮೋಘ ಸಾಧನೆ ಮಾಡಿರುತ್ತಾರೆ.

RELATED ARTICLES  ಭಟ್ಕಳ ಮಲ್ಲಿಗೆಗೆ ಲಾಕ್ ಡೌನ್ ಕರಿನೆರಳು : ಅತಂತ್ರವಾಯ್ತು ಬೆಳೆಗಾರರ ಬದುಕು.!

ಹಿರಿಯ ವಿಭಾಗದಲ್ಲಿ – (ಐದರಿಂದ ಏಳನೇ ವರ್ಗದ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಗಳು)

ಕನ್ನಡ ಕಂಠಪಾಠ ಸಂಜನಾ ಭಟ್ಟ ಪ್ರಥಮ, ಇಂಗ್ಲೀಷ ಕಂಠಪಾಠ ಸೃಜನಾ ನಾಯ್ಕ ಪ್ರಥಮ, ಹಿಂದಿ ಕಂಠಪಾಠ ಅನನ್ಯಾ ಭಟ್ಟ ಪ್ರಥಮ, ಸಂಸ್ಕøತ ಕಂಠಪಾಠ ಭೂಮಿಕಾ ಭಟ್ಟ ಪ್ರಥಮ, ಮರಾಠಿ ಕಂಠಪಾಠ ಅಕ್ಷತಾ ಶಾನಭಾಗ ಪ್ರಥಮ, ತಮಿಳು ಅಕ್ಷತಾ ಶಾನಭಾಗ ಪ್ರಥಮ, ಧಾರ್ಮಿಕ ಪಠಣ ಹರ್ಷಿತಾ ಭಟ್ಟ ಪ್ರಥಮ, ಲಘುಸಂಗೀತ ಅನನ್ಯಾ ಭಟ್ಟ ಪ್ರಥಮ , ಛದ್ಮವೇಷದಲ್ಲಿ ಸಿಂಚನಾ ದೇವಾಡಿಗ ಪ್ರಥಮ, ಚಿತ್ರಕಲೆ ಸೋನಾಲಿ ಶೇಟ ಪ್ರಥಮ, ಕಥೆ ಹೇಳುವುದು ಕವನಾ ಶೆಟ್ಟಿ ಪ್ರಥಮ, ಅಭಿನಯ ಗೀತೆ ಸೃಜನಾ ನಾಯ್ಕ ಪ್ರಥಮ, ಆಶುಭಾಷಣ ಚಂದನ ಹೆಗಡೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಸಾಮೂಹಿಕ ವಿಭಾಗದಲ್ಲಿ ಜಾನಪದ ನೃತ್ಯ, ದೇಶಭಕ್ತಿ ಗೀತೆ, ಕೋಲಾಟ,ಕವಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.

RELATED ARTICLES  "ಸಿಂಧುಮಾತಾ ಕ್ಲಿನಿಕ್" ಕುಮಟಾದಲ್ಲಿ ಉಚಿತ ಕಿವಿಯ ಶ್ರವಣ ಪರೀಕ್ಷಾ ಶಿಬಿರ

ಭಾಗವಹಿಸಿದ ಎಲ್ಲಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸುವ ಜೊತೆಗೆ ಅತೀ ಹೆಚ್ಚು ಪ್ರಥಮ ಬಹುಮಾನ ಗಳಿಸಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಹುಮಾನ ಪಡೆದ ಶಾಲೆ ಎಂಬ ಕೀರ್ತಿ ಪಡೆದು ಸಾಧನೆ ಮಾಡಿರುತ್ತಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸದಸ್ಯರುಗಳು, ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ನಾಯ್ಕ , ಹಾಗೂ ಶಿಕ್ಷಕ ವೃದದವರು ಶುಭಾಶಯ ಕೋರಿದ್ದಾರೆ. ಮುಂಬರುವ ತಾಲೂಕಾ ಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆದಿದೆ.