Home ಜಿಲ್ಲೆಅಬ್ಳಿ ಹೆಗಡೆ ಅವರ ಉತ್ಸಾಹ ಎಲ್ಲರಿಗೂ ಮಾದರಿಯಾಗಲಿ

ಅಬ್ಳಿ ಹೆಗಡೆ ಅವರ ಉತ್ಸಾಹ ಎಲ್ಲರಿಗೂ ಮಾದರಿಯಾಗಲಿ

ಅಮ್ನೋರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಗಜಾನನ ಶರ್ಮಾ

by News Desk
0 comments

ಎಪ್ಪತ್ತರ ವಯಸ್ಸಿನ ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರು, ಅವರ ಎಳವೆಯ ಏರು ತಾರುಣ್ಯದಲ್ಲಿ ಬರೆದ ಕಾದಂಬರಿಗಳನ್ನು ಒಂದರ ಮೇಲೆ ಒಂದರಂತೆ ಪ್ರಕಟಿಸುತ್ತಿದ್ದಾರೆ. ಶೋಷಿತರ ಪರವಾಗಿ ಇಷ್ಟು ಆರ್ದ್ರ ವಾಗಿ ಬರೆದವರು ಅಪರೂಪ. ಅಬ್ಳಿ ಹೆಗಡೆ ಅವರ ಉತ್ಸಾಹ ಎಲ್ಲರಿಗೂ ಮಾದರಿಯಾಗಲಿ ಎಂದು ಚಿಂತಕ, ಕಾದಂಬರಿಕಾರ ಡಾ. ಗಜಾನನ ಶರ್ಮಾ ಹೇಳಿದರು.

 

ಅವರು ಹೊನ್ನಾವರ ತಾಲೂಕಿನ ಬೀರನಗೋಡಿನ ಅಬ್ಳಿ ಹೆಗಡೆಯವರ ಮನೆಂಗಳದಲ್ಲಿ ಕಣಿವೆ ಪ್ರಕಾಶನ ಬೆಂಗಳೂರು ಮತ್ತು ಕಲರ್ ಫುಲ್ ಪಿಕ್ಸ್ ಇವರ ಸಹಯೋಗದಲ್ಲಿ ನಡೆದ ಅಮ್ನೋರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಅತಿಥಿಗಳಾದ ವಿಮರ್ಶಕ ಮಹಾಬಲಮೂರ್ತಿ ಕೊಡ್ಲಕೆರೆ ಮಾತನಾಡಿ, ಅರ್ಧ ಶತಮಾನದ ಹಿಂದೆ ಬರೆದ ಕೃತಿಯಾದರೂ ಇಂದಿಗೂ ಪ್ರಸ್ತುತವೆನಿಸುವ ಕೃತಿ ಅಮ್ನೋರು. ಈ ಕೃತಿ ಕಾಡನ್ನು, ನಾಡನ್ನು, ಹಲವರ ಒಳ ಸಂಘರ್ಷವನ್ನು, ಉನ್ಮತ್ತರ ಲಂಪಟತನವನ್ನು ಚೆನ್ನಾಗಿ ನಿರೂಪಿಸಿದೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತ್ರಿ ಮಾತನಾಡಿ ಹೆಗಡೆಯವರಲ್ಲಿರುವ ಬಂಡಾಯ ಮನೋಧರ್ಮವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.

 

ಹಿರಿಯ ಸಾಹಿತಿ ಉದಯಕುಮಾರ್ ಹಬ್ಬು, ಕೃಷ್ಣಮೂರ್ತಿ ಹೆಬ್ಬಾರ, ಕಲ್ಲಚ್ಚು ಪ್ರಕಾಶನದ ಮಹೇಶ ನಾಯಕ ಮೊದಲಾದವರು ಅಬ್ಳಿ ಹೆಗಡೆಯವರ ಸರಳ ಸಹೃದಯ ವ್ಯಕ್ತಿತ್ವ ಮತ್ತು ಕೃತಿಯ ವೈಶಿಷ್ಟ್ಯಗಳ ಕುರಿತು ಪ್ರಸ್ತಾಪಿಸಿದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".