Home ಜಿಲ್ಲೆಹಿಂದುಗಳ ವಿರುದ್ಧ ಷಡ್ಯಂತ್ರ ವಿರೋಧಿಸಿ ಕುಮಟಾದಲ್ಲಿ ಬ್ರಹತ್ ಪ್ರತಿಭಟನೆ.

ಹಿಂದುಗಳ ವಿರುದ್ಧ ಷಡ್ಯಂತ್ರ ವಿರೋಧಿಸಿ ಕುಮಟಾದಲ್ಲಿ ಬ್ರಹತ್ ಪ್ರತಿಭಟನೆ.

ಹಿಂದೂ ಸಂಪ್ರದಾಯವನ್ನು, ಸಂಸ್ಕೃತಿಯನ್ನು ಹಾಳು ಮಾಡಿ, ಸಂಪೂರ್ಣ ಧರ್ಮದ ಅವನತಿಗೆ ಹುನ್ನಾರ ನಡೆದಿದೆ ಎಂದು ಗಣ್ಯರು.

by News Desk
0 comments

ಕುಮಟಾ : ಹಿಂದುಗಳು ಒಂದಾಗದಿದ್ದರೆ ಮುಂದೆ ಉಳಿಗಾಲವಿಲ್ಲ. ಅದೆಷ್ಟೋ ಕೃತ್ಯಗಳ ಮೂಲಕ ಹಿಂದುಗಳ ಸಂಸ್ಕೃತಿ, ಸಂಪ್ರದಾಯಕ್ಕೆ ಧಕ್ಕೆಯನ್ನು ಉಂಟುಮಾಡುತ್ತಿದ್ದಾರೆ. ಇದು ಹಿಂದುಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಸಮಯ. ಇಲ್ಲದಿದ್ದರೆ ಹಿಂದುಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಲೇ ಹೋಗುತ್ತದೆ. ನಮ್ಮನ್ನು ಒಡೆಯುವುದರ ಮೂಲಕ ಹಾಗೂ ಹಿಂದೂ ಸಂಸ್ಕೃತಿ ಸಂಪ್ರದಾಯವನ್ನು, ಸಂಸ್ಕೃತಿಯನ್ನು ಹಾಳು ಮಾಡಿ ಸಂಪೂರ್ಣ ಧರ್ಮದ ಅವನತಿಗೆ ಹುನ್ನಾರ ನಡೆದಿದೆ ಅದನ್ನು ತಡೆಯಲೇ ಬೇಕು ಎಂದು ಹೋರಾಟಗಾರ ಎಂ.ಜಿ ಭಟ್ಟ ಹೇಳಿದರು. ಅವರು ರಾಜ್ಯದ ವಿವಿದೆಡೆ ಹಿಂದುಗಳ ಸಂಪ್ರದಾಯ, ಸಂಸ್ಕೃತಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ, ಕುಮಟಾದ ತಾಲೂಕಾ ಆಡಳಿತ ಸೌಧದ ಎದುರು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ಹಿಂದೂ ಸಂಸ್ಕೃತಿ, ಸಂಸ್ಕಾರ ಮುರಿಯಬೇಕು ಎಂಬ ಉದ್ದೇಶಕ್ಕೆ ಬೀದರ್, ಧಾರವಾಡ, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಜನಿವಾರ ತೆಗೆಸುವಂತಹ ವರ್ತನೆ ನಡೆಯುತ್ತಿರುವುದರ ಹಿಂದೆ ಯಾವುದೋ ಬಲವಾದ ಕಾಣದ ಕೈಗಳ ಕೈವಾಡವಿದೆ. ಪಶ್ಚಿಮ ಬಂಗಾಳ, ಬಾಂಗ್ಲಾ, ಪಾಕಿಸ್ಥಾನದಲ್ಲಿ ಹಿಂದೂಗಳ ಕಗ್ಗೊಲೆ, ಅತ್ಯಾಚಾರ ನಡೆಯುತ್ತಿದೆ. ಅಂತಹ ಪರಿಸ್ಥಿತಿ ಎಲ್ಲಾ ಕಡೆ ಬರುವ ವರೆಗೆ ಕಾಯುತ್ತಿರಬೇಡಿ, ಧರ್ಮ ರಕ್ಷಣೆಗೆ ನಾವೆಲ್ಲರೂ ಒಂದಾಗಿ ಹೋರಾಡಬೇಕಾಗಿದೆ.

ಮಾಂಗಲ್ಯ, ಬಳೆ, ಜನಿವಾರ ತೆಗೆಸುವುದು, ಹಿಜಾಬ್ ಅಲೌಡ್ ಮಾಡಿರೋದು ಯಾವ ನ್ಯಾಯ? ಎಂದು ಪ್ರಶ್ನೆಮಾಡಿದ ಅವರು, ಓಪನ್ ಆಗಿ ನಾವು ಹಿಂದೂ ವಿರೋಧಿಗಳಿಗೆ ಸಪೋರ್ಟ್ ಮಾಡ್ತೇವೆ ನೀವೇನು ಮಾಡುತ್ತೀರಿ ಎಂದು ಚಾಲೆಂಜ್ ಮಾಡುತ್ತಿದ್ದಾರೆ. ನಾವು ಧರ್ಮ ಸಂಸ್ಕೃತಿ ರಕ್ಷಣೆಗೆ ಪ್ರತಿ ಮನೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಧರ್ಮರಕ್ಷಣೆಗೆ ಎಲ್ಲರೂ ಒಂದಾಗಿ ಕಾರ್ಯ ಮಾಡಬೇಕಾಗಿದೆ. ಧರ್ಮ ರಕ್ಷಣೆ ಕಾರ್ಯ ಇಂದಿನಿಂದ ಪ್ರಾರಂಭವಾಗಿದ್ದು ಇದು ಇನ್ನು ನಿರಂತರವಾಗಿ ನಡೆಯಬೇಕು. ಹಿಂದೂ ಸಂಸ್ಕಾರವನ್ನು ಬೆಳೆಸಿಕೊಂಡು ಹೋಗುವ ಕಾರ್ಯವೂ ನಮ್ಮಿಂದ ಆಗಬೇಕು. ಧರ್ಮವನ್ನು ಉಳಿಸುವುದಕ್ಕಾಗಿ ಜನಿವಾರವನ್ನು ತೆಗೆಯದೆ ಪರೀಕ್ಷೆಯನ್ನು ಬಿಟ್ಟ ವಿದ್ಯಾರ್ಥಿ ನಮಗೆಲ್ಲರಿಗೂ ಪ್ರೇರಣೆ. ಅಂತಹ ವಿದ್ಯಾರ್ಥಿಗಳ ಸ್ಪೂರ್ತಿ ನಮ್ಮೆಲ್ಲರಲ್ಲಿ ಬರಬೇಕು. ನಮಗೆ ತೊಂದರೆ ಕೊಟ್ಟು ನಮ್ಮ ಸಂಪ್ರದಾಯಗಳನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ. ಇದು ವ್ಯಕ್ತಿಯನ್ನು ಹೊಡೆದು ಹೊಡೆದು ಕೊಂದಂತೆ ಎಂದು ಅವರು ಉಲ್ಲೇಖಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾಲ್ಕು ದಿನಗಳ ಹಿಂದೆ‌ ಸಿಇಟಿ ಪರಿಕ್ಷೆ ವೇಳೆ ಜನಿವಾರ ತೆಗೆಸಿದ ದುರ್ಘಟನೆ ನಡೆದಿದೆ ಇದಕ್ಕೆ ಕಾರಣ ಸರ್ಕಾರ. ಒಂದು ಕಡೆ ಆಗಿದ್ದರೆ ಯಾವುದೋ ಒಬ್ಬ ದುಷ್ಟ ಅಧಿಕಾರಿ ಮಾಡಿದ ಎನ್ನಬಹುದಿತ್ತು, ಆದರೆ ಹಲವು ಕಡೆ ಈ ಘಟನೆ ನಡೆದಿದೆ. ಇದು ಸರಕಾರದ ಹಿಂದೂ ಧರ್ಮವನ್ನು ಕೆಣಕಿ ನೋಡಿ, ಹಂತಹಂತವಾಗಿ ನಾಶ ಮಾಡಲು ನಡೆಸಿದ ಸಂಚು. ಸರಕಾರದ ಈ ಕ್ರಮವನ್ನು ನಮ್ಮ ಪಕ್ಷ ಮತ್ತು ನಾವೆಲ್ಲಾ ವಿರೋಧಿಸುತ್ತಿದ್ದೇವೆ. ಇಂತಹ ಘಟನೆಯನ್ನು ನಾನು ಈ ಹಿಂದೆಯೂ ವಿರೋಧಿಸಿದ್ದು, ಮುಂದೆಯೂ ವಿರೋಧಿಸುತ್ತೇನೆ. ಇಂತಹ ಧರ್ಮವಿರೋಧಿ ಕಾರ್ಯ ಮಾಡುವವರನ್ನು ಎಡೆಮುರಿ ಕಟ್ಟಬೇಕಾದ ಅವಶ್ಯಕತೆ ಇದೆ ಎಂದರು.

ಜಿ.ಐ.ಹೆಗಡೆ ಮೂರೂರು ರವರು ಮಾತನಾಡಿ, ಪರೀಕ್ಷೆ ಎದುರಿಸಿ, ಸಿಇಟಿಯಲ್ಲಿ ಉತ್ತಮ ಪಡೆಯುವ ಉದ್ದೇಶದಿಂದ ತೆರಳಿದ ವಿದ್ಯಾರ್ಥಿಗಳ ಮೇಲೆ ರಾಜ್ಯದ ವಿವಿದೆಡೆಗಳಲ್ಲಿ ಮಾನಸಿಕ ದೌರ್ಜನ್ಯ ನಡೆಸಿದ ಅಧಿಕಾರಿಗಳ ವರ್ತನೆಯ ಹಿಂದೆ ಸರ್ಕಾರದ ಕೈವಾಡವಿದೆ. ಸರ್ಕಾರದ ಮೌಖಿಕ ಆದೇಶದಂತೆ ಅಧಿಕಾರಿಗಳು ಈ ರೀತಿ ವರ್ತಿಸಿದಂತೆ ಭಾಸವಾಗುತ್ತಿದೆ.

ಹಿಂದೂ ಸಂಸ್ಕಾರ, ಸಂಸ್ಕೃತಿಯನ್ನು ವಿರೋಧಿಸುವ ಸರಕಾರದ ಜನಿವಾರ ತೆಗೆಸುವ, ಮೂಗುತಿ ತೆಗೆಸುವ ಕ್ರಮವನ್ನು ಖಂಡಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸದೃಢ ವಿರೋಧ ಪಕ್ಷ ಇರಬೇಕು ಈ ಬಗ್ಗೆ ವಿರೋಧಿಸಿ, ವಿರೋಧ ಪಕ್ಷದ ಯಾವುದೇ ಮುಖಂಡರು ಹೇಳಿಕೆ ನೀಡಿಲ್ಲ. ಎಲ್ಲಾ ಹಿಂದುಗಳೂ ಒಟ್ಟಾಗಿ ಈ ಘಟನೆಯ ವಿರುದ್ಧ ಹೋರಾಟ ಮಾಡಬೇಕು ಎಂದರು.

 

ಸಾಮಾಜಿಕ ಕಾರ್ಯಕರ್ತ ಮುರಳೀಧರ ಪ್ರಭು ಮಾತನಾಡಿ, ಹಿಂದುಗಳ ಮಾನಬಿಂಧುಗಳನ್ನು ಒಂದೊಂದಾಗಿ ಕಳಚುವ ಸರ್ಕಾರದ ನಿಲುವನ್ನು ವಿರೋಧಿಸುತ್ತೇವೆ. ಜನಿವಾರ ಕಳಚಬಾರದು ಎಂಬ ಕಾರಣಕ್ಕೆ ಪರೀಕ್ಷೆ ಬರೆಯದ ಆ ಬಾಲಕ ನಮಗೆ ಮಾದರಿ. ಗರ್ಭಸ್ಥ ಗೋಮಾತೆಯನ್ನು ಕೊಲ್ಲುವುದು, ಹಿಂದೂ ಮಾನಬಿಂಧುವನ್ನು ಕಳಚಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ ಇದನ್ನು ನಾವು ಒಟ್ಟಾಗಿ ಖಂಡಿಸಬೇಕು ಎಂದರು.

ಬಿಜೆಪಿ ಪ್ರಮುಖ ವೆಂಕಟೇಶ ನಾಯಕ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ಸನಾತನ ವಿರೋಧಿ ನೀತಿ ನಡೆಸುತ್ತಿದ್ದು, ಕರ್ನಾಟಕದಲ್ಲಿ ಈ ರೀತಿ ಪ್ರಯೋಗ ಮಾಡುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಈ ದೇಶದಲ್ಲಿಯ ಸನಾತನ ಸಂಸ್ಕೃತಿ ಮೂಲೆಗುಂಪು ಮಾಡುವ ಉದ್ದೇಶವನ್ನು ನಾವೆಲ್ಲಾ ಒಂದಾಗಿ ವಿರೋಧಿಸುತ್ತಿದ್ದೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಏಕಕಾಲದಲ್ಲಿ ಹಲವು ಕಡೆ ಜನಿವಾರ ತೆಗೆಸುವ ಘಟನೆ ನಡೆದಿರುವುದರ ಹಿಂದೆ ಹಿಂದೂ ಧರ್ಮದ ನಂಬಿಕೆಗಳಿಗೆ ಅಪಚಾರ ಮಾಡುವ ಉದ್ದೇಶದಿಂದ ಮಾಡಲಾಗಿದ್ದು, ಇದರ ಮೂಲ ಎಲ್ಲಿದೆ ಪತ್ತೆಹಚ್ಚಬೇಕಾಗಿದೆ ಎಂದರು.

ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ
ಇಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಾಂಗ್ಲಾದೇಶದ ಸರಕಾರವಾಗಿದೆ. ಪಾಕಿಸ್ಥಾನದ ಸರಕಾರವಾಗಿದೆ. ಸಿದ್ದರಾಮಯ್ಯನವರು ಎಸ್.ಡಿ.ಪಿ.ಐ ಮುಖಂಡರ ಮೇಲಾದ ಎಲ್ಲಾ ಪ್ರಕರಣ ಹಿಂಪಡೆದಿರುವುದು, ಈ ಜನಿವಾರಕ್ಕೆ ಕತ್ತರಿ ಹಾಕಿರುವುದು ಕೂಡ ಅದರ ಹಿಂದಿನ ಹಿಡನ್ ಅಜೆಂಡಾ. ಈ ಸನಾತನ ಧರ್ಮ ವಿರೋಧಿ ಮುಸ್ಲಿಂ ಓಲೈಕೆಯ ಸರ್ಕಾರ ತೊಲಗುವ ವರೆಗೆ ನಾವೆಲ್ಲಾ ವಿಶ್ರಮಿಸದೇ ಹೋರಾಡಬೇಕಾಗಿದೆ ಎಂದರು.

ವೀಣಾ ಭಟ್ಟ ಹೊಲನಗದ್ದೆ ಮಾತನಾಡಿ, ಪರೀಕ್ಷೆ ಬರೆಯುವವರಿಗೆ ತಾಳಿ ತೆಗೆಯಬೇಕು, ಕಿವಿಯೋಲೆ ತೆಗೆಯಬೇಕು, ಎಂಬೆಲ್ಲ ರೀತಿಯಲ್ಲಿ ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿ. ಮಹಿಳೆಯರಿಗೆ ಕಟ್ಟಿದ ತಾಳಿಯನ್ನು ಸ್ವಂತ ಗಂಡನಿಗೂ ತೆಗೆಸುವ ಅಧಿಕಾರ ಇಲ್ಲ. ಅಂತದರಲ್ಲಿ ಇಂತಹ ಕಾನೂನುಗಳು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

ಎನ್.ಆರ್ ಮುಕ್ರಿ, ಮಂಜುನಾಥ ಭಟ್ಟ ಸುವರ್ಣಗದ್ದೆ ಹಾಗೂ ಇತರರು ನಡೆಯುತ್ತಿರುವ ಧರ್ಮ ವಿರೋಧದ ಚಟುವಟಿಕೆ ಬಗ್ಗೆ ಖಟುವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಸಿ.ಇ.ಟಿ ಪರೀಕ್ಷೆ ವೇಳೆಗೆ ಜನಿವಾರ ತೆಗೆಸಿದ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಹಿಂದೂ ಸಮಾಜದ ಮಕ್ಕಳಿಗೆ ಓಲೆ ತೆಗೆಸುವುದು, ಮೂಗುತಿ ತೆಗಿಸುವುದು, ಜನಿವಾರ ತೆಗಿಸುವುದು ಮುಂತಾದ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನಡೆಯನ್ನು ಖಂಡಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು. ಅರುಣ ಹೆಗಡೆ ಮನವಿಯನ್ನು ವಾಚಿಸಿದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".