Home ಜಿಲ್ಲೆಲಲಿತ ಕಲೆ ಮತ್ತು ರಂಗಭೂಮಿ ಶಿಕ್ಷಣದ ಕಾರ್ಯಾಗಾರ

ಲಲಿತ ಕಲೆ ಮತ್ತು ರಂಗಭೂಮಿ ಶಿಕ್ಷಣದ ಕಾರ್ಯಾಗಾರ

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ ಸಾಂಸೃತಿಕ ಸಂಘದ ಅಡಿಯಲ್ಲಿ ಕಾರ್ಯಕ್ರಮ

by News Desk
0 comments

ಕುಮಟಾ : ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ ಸಾಂಸೃತಿಕ ಸಂಘದ ಅಡಿಯಲ್ಲಿ ಹಮ್ಮಿಕೊಂಡ ೦೮ ದಿನಗಳ ಲಲಿತ ಕಲೆ ಮತ್ತು ರಂಗಭೂಮಿ ಶಿಕ್ಷಣದ ಕಾರ್ಯಾಗಾರವನ್ನು ರಂಗ ಕಲಾಶಿಕ್ಷಕ ಶ್ರೀಕಾಂತ ಕುಮಟಾ ಉದ್ಘಾಟಿಸಿ ರಂಗಭೂಮಿ ಮತ್ತು ಶಿಕ್ಷಣಕ್ಕೆ ಇರುವ ಸಹ ಸಂಬಂಧವನ್ನು ಹಲವಾರು ದ್ರಷ್ಟಾಂತಗಳೊಂದಿಗೆ ಮನೋಜ್ಞವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಜಿ.ಡಿ ಭಟ್ ಇವರು ಮಾತನಾಡಿ ಶಿಕ್ಷಕ ತರಬೇತಿಯಲ್ಲ್ಲಿ ನಾಟಕ ಕಲೆಯ ಪ್ರಮುಖ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಉಷಾ ಗೌಡ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಶ್ರೀಧರ ಬಳಗಾರ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ನಮ್ರತಾ ವಂದಿಸಿದರು. ಶಿಕ್ಷಕ ವಿದ್ಯಾರ್ಥಿಗಳಾದ ಸಂದೀಪ ಮರಾಠೆ ಹಾಗೂ ನಾಗಶ್ರೀ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".