1.1K
ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮತ್ತೊಬ್ಬ ನಿವಾಸಿ ಸಾವಿಗೀಡಾಗಿದ್ದು, ಒಟ್ಟು ಮೂವರು ಮೃತಪಟ್ಟಿದ್ದಾರೆ.
ಆಂಧ್ರಮೂಲದ ಬೆಂಗಳೂರಿನ ನಿವಾಸಿ ಮಧುಸೂದನ ಸೋಮಿಶೆಟ್ಟಿ ಅವರು ಪಹ್ಲಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಪೈಶಾಚಿಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ ರಾವ್ ಹಾಗೂ ಬೆಂಗಳೂರಿನ ಮತ್ತಿಕೆರೆಯ ಪ್ರದೇಶದ ಭರತ ಭೂಷಣ (41) ಎಂಬ ಮೃತಪಟ್ಟಿದ್ದಾರೆ ಎಂದು ಈ ಮೊದಲು ಮಾಹಿತಿ ಲಭ್ಯವಾಗಿತ್ತು. ಈಗ ಮಧುಸೂದನ ಅವರು ಮೃತಪಟ್ಟ ಮಾಹಿತಿ ಲಭ್ಯವಾಗಿದೆ.

ಒಂದು ವಾರದ ಹಿಂದೆ ಜನ್ಮ ದಿನ ಆಚರಿಸಿಕೊಂಡಿದ್ದ ಭರತ ಭೂಷಣ ಅವರು ಮೂರು ವರ್ಷದ ಮಗು ಹಾಗೂ ಪತ್ನಿ ಸುಜಾತ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ಮೃತದೇಹವನ್ನು ನಗರಕ್ಕೆ ಕರೆತರುವ ಸಲುವಾಗಿ ಸಿದ್ದತೆ ನಡೆಸಲಾಗುತ್ತಿದೆ.