ಕುಮಟಾ : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಅನುಪಮ ಸಾಧನೆಯ ಪರಂಪರೆಯನ್ನು ಮುಂದುವರೆಸಿದ್ದಾರೆ. ಶೇಕಡಾ ನೂರರ ಫಲಿತಾಂಶದೊಂದಿಗೆ ರಾಜ್ಯದ ಟಾಪ್ 10 ರ‍್ಯಾಂಕ್ ನಲ್ಲಿ 18 ವಿದ್ಯಾರ್ಥಿಗಳು ಗುರುತಿಸಿಕೊಳ್ಳುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. ಪರೀಕ್ಷೆ ಬರೆದ ಒಟ್ಟೂ 169 ವಿದ್ಯಾರ್ಥಿಗಳಲ್ಲಿ, 54 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು ಅಂಕ ಪಡೆದರೆ, ಶೇ. 90 ಕ್ಕಿಂತ ಅಧಿಕ 108 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಒಟ್ಟೂ 132 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಹಾಗೂ ಪರೀಕ್ಷೆ ಬರೆದ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ.
ಸಮೀರ ರವಿ ದಿವಾನ 625 ಕ್ಕೆ 623 (ಶೇ. 99.68) ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ, ಕೃತಿಕಾ ಮಹೇಶ ಭಟ್ಟ 625 ಕ್ಕೆ 622 (ಶೇ. 99.52) ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ಗುರುಪ್ರಿಯಾ ಟಿ. ಪಟಗಾರ 625 ಕ್ಕೆ 621 (ಶೇ. 99.36) ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ, ರಾಹುಲ್ ಎಂ.ಭಟ್ 625 ಕ್ಕೆ 620 (ಶೇ. 99.20) ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ, ದಿಶಾ ದೀಪಕ ನಾಯ್ಕ 625 ಕ್ಕೆ 620 (ಶೇ. 99.20) ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ, ಪ್ರಥಮ ದೀಪಕ ಪೈ 625 ಕ್ಕೆ 620 (ಶೇ. 99.20) ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ, ಮನಿಶಾ ಪಿ. ಮೂಡಂಗಿ 625 ಕ್ಕೆ 619 (ಶೇ. 99.04) ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ, ಧನ್ಯಾ ಕಿರಣ ಹೊಸ್ಮನೆ, ಶ್ರೇಯಾ ಗಿರೀಶ ಹೆಬ್ಬಾರ್, ಕೆ. ಶ್ರೀಕೃಪಾ, ಅನಿರುದ್ಧ ಅಶೋಕ ಶಾನಭಾಗ, ಸಾತ್ವಿಕ್ ಜಿ.ಎನ್ ಇವರುಗಳು 625 ಕ್ಕೆ 618 (ಶೇ. 98.88) ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ, ಸ್ನೇಹಾ ಉದಯ ನಾಯ್ಕ, ಪ್ರಥ್ವಿ ಗಣೇಶ ವರ್ಣೇಕರ, ಪ್ರತಿಮಾ ಗೋವಿಂದ ಶಾನಭಾಗ, ಶಾಂಭವಿ ನಾರಾಯಣ ಪೈ ಇವರುಗಳು 625 ಕ್ಕೆ 617 (ಶೇ. 98.72) ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ. ಸಾಕ್ಷಿ ಕೆ.ಎಸ್, ಸೃಷ್ಟಿ ರೋಹಿದಾಸ ನಾಯ್ಕ 625 ಕ್ಕೆ 616 (ಶೇ. 98.56) ಅಂಕ ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಪ್ರಥಮ ಭಾಷೆಯಲ್ಲಿ 31, ದ್ವಿತೀಯ ಭಾಷೆಯಲ್ಲಿ 22, ತೃತೀಯ ಭಾಷೆಯಲ್ಲಿ 43, ಗಣಿತದಲ್ಲಿ 16, ವಿಜ್ಞಾನದಲ್ಲಿ 6, ಸಮಾಜ ವಿಜ್ಞಾನದಲ್ಲಿ 12 ಮಂದಿ ವಿದ್ಯಾರ್ಥಿಗಳು ಪೂರ್ಣಾಂಕದ ಸಾಧನೆ ಮಾಡಿದ್ದಾರೆ. ಅಂತೆಯೇ, 7 ವಿದ್ಯಾರ್ಥಿಗಳು 99% ಕ್ಕಿಂತ ಅಧಿಕ, 23 ವಿದ್ಯಾರ್ಥಿಗಳು 98% ಕ್ಕಿಂತ ಅಧಿಕ, 54 ವಿದ್ಯಾರ್ಥಿಗಳು 95% ಕ್ಕಿಂತ ಅಧಿಕ, 108 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅಂಕಗಳ ಸಾಧನೆಗೈದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರು, ಶೈಕ್ಷಣಿಕ ಸಲಹೆಗಾರು, ಮುಖ್ಯೋಪಾಧ್ಯಾಯಿನಿ ಸುಮಾ ಪ್ರಭು ಹಾಗೂ ಶಿಕ್ಷಕ ವೃಂದ, ಅಂಗ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, ಬೋಧಕೇತರ ಸಿಬ್ಬಂದಿಗಳು, ಪಾಲಕವರ್ಗ, ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.