ಬೆಂಗಳೂರು: “ಚಿತ್ರಸಂತೆ” ಸಿನಿಮಾ ಪತ್ರಿಕೆ ಕಳೆದ ಹದಿಮೂರು ವರ್ಷಗಳಿಂದ ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಸ್ಟಾರ್ ಗಳು ಚಿತ್ರರಂಗದ ಅನೇಕ ಗಣ್ಯರು ನಟ ನಟಿ ಸಂಗೀತ ರಂಗದ ಪ್ರತಿಭಾನ್ವಿತರನ್ನು ಗುರುತಿಸಿ ಉತ್ತಮ ನಟನಟಿ ಪೋಷಕ ನಟ ಹೀಗೆ ಅನೇಕ ವಿಧಗಳಲ್ಲಿ ಅವರನ್ನು ಗುರುತಿಸಿ ಗೌರವಿಸಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿಕೊಂಡು ಬರುತ್ತಿದ್ದು ಜೊತೆಗೆ ರಾಜ್ಯದಲ್ಲಿ ಬೇರೆ ಬೇರೆ ರಂಗಗಳಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತರನ್ನು ಗುರುತಿಸಿ ಇದೇ ವೇದಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡುತ್ತಾ ಬರುತ್ತಿದೆ.
೨೦೨೫ ರ “”ವರ್ಷದ ಕನ್ನಡಿಗ”” ಪ್ರಶಸ್ತಿ ಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಬರಹಗಾರ ಲೇಖಕ ,ಸ್ವರ ಸಂಯೋಜಕ ಗಾಯಕ ಉಮೇಶ ಮುಂಡಳ್ಳಿ ಅವರನ್ನು ಆಯ್ಕೆ ಮಾಡಿದೆ.
ಎಂದು ಚಿತ್ರಸಂತೆ ಪತ್ರಿಕೆ ಮುಖ್ಯಸ್ಥ ಪ್ರಧಾನ ಸಂಪಾದಕ ಗಿರೀಶಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯವರಾದ ಉಮೇಶ ಮುಂಡಳ್ಳಿ ಅವರು ಕಳೆದ ಇಪ್ಪತೈದು ವರ್ಷಗಳಿಂದ ಸಾಹಿತ್ಯ ಸಂಗೀತ ಸೇವೆಯನ್ನು ಜೊತೆಜೊತೆ ನಡೆಸಿಕೊಂಡು ಬರುತ್ತಿದ್ದು ಮೌನಗೀತೆ, ಭಾವಸುಮ, ಕರುನಾಡ ಕುಡಿಗಳು,ನಾನೂ ಶಿಲ್ಪವಾಗಬೇಕು, ಹಾಗೂ ತಿಂಗಳ ಬೆಳಕು ( ಹನಿಕವನ) ಎನ್ನುವ ಕವನ ಸಂಕಲನಗಳನ್ನು, ಬೆಂಕಿ ಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, ಉತ್ತರ ಕನ್ನಡಕ್ಕೆ ಒಂದು ಸುತ್ತು ಪ್ರವಾಸಿ ಲೇಖನ, ಮಾತಾ ಮಹಿಮಾ ಹಾಗೂ ಹನುಮಾಮೃತ ಎನ್ನುವ ಭಕ್ತಿ ಪ್ರಧಾನ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುತ್ತಾರೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅನೇಕ ಮೌಲ್ಯಭರಿತ ಲೇಖನಗಳನ್ನು ಬರೆಯುತ್ತಾ ಬರುತ್ತಿದ್ಸಾರೆ.

ಸಂಗೀತ ಕ್ಷೇತ್ರದಲ್ಲಿಯೂ ಇವರ ಸಾದನೆ ವಿಶಿಷ್ಟ ವಾದದ್ದು, ತಮ್ಮದೇ ಸ್ವರಚಿತ ಭಾವಗೀತೆ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಗಳ ಜೊತೆ ರಾಜ್ಯದ ಅನೇಕ ಹಿರಿ ಹಿರಿಯ ಕವಿತೆಗಳ ನ್ನು ಇವರು ಸ್ವತಃ ಸ್ವರ ಸಂಯೋಜನೆ ಮಾಡಿ ಹಾಡಿರುತ್ತಾರೆ.
ಇವರ ಮೊದಲ ಧ್ವನಿಸುರುಳಿ “ಭರವಸೆಯ ಛಾಯೆ” ೨೦೧೧ ರಲ್ಲಿ ಹಿರಿಯ ಸಾಹಿತಿ ಪಾಟಿಲ್ ಪುಟ್ಟಪ್ಪನರು ಲೋಕಾರ್ಪಣೆ ಮಾಡಿದ್ದರು. ಇದುವರೆಗೆ ಮುಂಡಳ್ಳಿ ಅವರು ಸುಮಾರು ಮೂವತ್ತೈದಕ್ಕೂ ಹೆಚ್ಚಿನ ಗೀತೆಗಳಿಗೆ ಸ್ವರ ಸಙಯೋಜನೆ ಮಾಡಿ ತಾವು ಮತ್ತು ಇತರೆ ಗಾಯಕರಿಂದ ಹಾಡಿಸಿರುತ್ತಾರೆ. ನಿನಾದ ಯೂಟ್ಯೂಬ್ ಚಾನೆಲ್ ನಲ್ಲಿ ಅವುಗಳನ್ನು ನೋಡಬಹುದಾಗಿದೆ.
ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಸಂಗೀತ ಸಾಹಿತ್ಯ ಒಟ್ಟಿಗೆ ಮೇಳೈಸಿರುವ ಜಿಲ್ಲೆಯ ಅಪ್ಪಟ ಗ್ರಾಮೀಣ ಪ್ರತಿಭೆ ಉಮೇಶ ಮುಂಡಳ್ಳಿಯವರನ್ನು ಬೆಂಗಳೂರಿನ ಸ್ಯಾಂಡಲ್ ವುಡ್ ಪತ್ರಿಕೆ ಚಿತ್ರಸಂತೆ ಗುರುತಿಸಿ ವರ್ಷದ ಕನ್ನಡಿಗ ಪ್ರಶಸ್ತಿ ನೀಡುತ್ತಿದೆ.
ಕನ್ನಡ ಚಿತ್ರರಂಗದ ಅನೇಕ ಗಣ್ಯರ ಉಪಸ್ಥಿತಿ ಯಲ್ಲಿ ಮೇ ೩೧ ರಂದು ಬೆಂಗಳೂರು ಅರಮನೆ ನಗರದಲ್ಲಿರುವ ಹೈಡ್ ಪಾರ್ಕ್ ಹೊಟೆಲ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಚಿತ್ರಸಂತೆಯ ಮುಖ್ಯಸ್ಥ ಗಿರೀಶ್ ವಿ ಗೌಡ ತಿಳಿಸಿದ್ದಾರೆ.