Home ಜಿಲ್ಲೆಅಮೃತಾ ಹರೀಶ್ ಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ

ಅಮೃತಾ ಹರೀಶ್ ಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ

by News Desk
0 comments

ಕುಮಟಾ : ಚಿತ್ರ ನಟ, ನಿರ್ದೇಶಕ, ಬರಹಗಾರ ಹರೀಶ್ ಭಟ್ಟ ನೀನಾಸಂ ಅವರ ಪತ್ನಿ ಮೂಲತಃ‌ ಕುಮಟಾದ ಅಮೃತಾ ಹರೀಶ್ 20025ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉದ್ಯಮಿ‌ ಆಗಿರವ ಅಮೃತಾ ಹರೀಶ್ ಅವರ ಸಾಮಾಜಿಕ ಕೈಂಕರ್ಯಗಳಿಗೆ ಈ‌ ಪ್ರಶಸ್ತಿ ಬಂದಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ‌ ಸ್ವೀಕರಿಸಿದರು.
ವಿಲ್‌ ಕ್ರಿಯೇಶನ್ಸ ಕಂಪನಿಯ ಸ್ಥಾಪಕಿ ಆಗಿರುವ ಅಮೃತಾ, ಕಂಟೆಂಟ್ ಕ್ರಿಯೇಟರ್, ಬರಹಗಾರ್ತಿ ಕೂಡ ಹೌದು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕುರಿತು ಪ್ರಮಾಣಿತ ತರಬೇತುದಾರರು ಆಗಿರುವ ಇವತು ಕರ್ನಾಟಕ ಮಾಧ್ಯಮ ಕಾರ್ಮಿಕ ಸಂಘದ ಡಿಜಿಟಲ್ ವಿಭಾಗದ ವಿಭಾಗೀಯ ಅಧ್ಯಕ್ಷರಾಗಿದ್ದಾರೆ.

ಅಮೃತಾರ ಡ್ರಾಮಾಯಣ ಎಂಬ ಪ್ರಸಿದ್ಧ ಹಾಸ್ಯ ಸ್ಕಿಟ್ ಜನಪ್ರಿಯವಾಗಿದೆ. ಜತೆಗೆ ಕಿರುಚಿತ್ರಗಳು ಮತ್ತು ಫೀಚರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜಾಹೀರಾತುಗಳು ಮತ್ತು ಸಿನಿಮಾಗಳಿಗೆ ಧ್ವನಿಯನ್ನೂ ನೀಡಿದ್ದಾರೆ. ಪೋಲಿಸರೊಂದಿಗೆ ಕೈಜೋಡಿಸಿ “ಸುರಕ್ಷಾ ಆಪ್” ಜಾಗೃತಾ ಅಭಿಯಾನಗಳಲ್ಲಿ ಭಾಗವಹಿಸಿದ್ದಾರೆ. ಮಹಿಳಾ ಉದ್ಯಮಿಗಳ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ.

ಇವರಿಗೆ‌ ಗೋಲ್ಡನ್ ಸ್ಟಾರ್ ವುಮನ್ ಅವಾರ್ಡ್, ಮಹಿಳಾ ರತ್ನ ಪ್ರಶಸ್ತಿಗಳು ಸೇರಿದಂತೆ ಅನೇಕ‌ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".