Home ಜಿಲ್ಲೆಕೆ.ಸಿ.ಇ.ಟಿ. ಯಲ್ಲಿ ಅತ್ಯಮೋಘ ಸಾಧನೆಮಾಡಿದ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

ಕೆ.ಸಿ.ಇ.ಟಿ. ಯಲ್ಲಿ ಅತ್ಯಮೋಘ ಸಾಧನೆಮಾಡಿದ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

265 ನೇ ಸ್ಥಾನದೊಂದಿಗೆ ಕೆ.ಸಿ.ಇ.ಟಿ. - 2025 ರಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿ

by News Desk
0 comments

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ.ಎನ್.ವಾಯ್. ಎಸ್., ಬಿ. ಫಾರ್ಮಾ, ಡಿ.ಫಾರ್ಮಾ, ಮುಂತಾದ ಕೋರ್ಸಗಳ ಪ್ರವೇಶಾತಿಗಾಗಿ ಕೆ.ಇ.ಎ. ನಡೆಸುವ ಕೆ.ಸಿ.ಇ.ಟಿ. – 2025 ರ ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಥಾನ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.

ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವಿಧಾತ್ರಿ ಅಕಾಡೆಮಿಯು ನುರಿತ ಉಪನ್ಯಾಸಕರುಗಳ ಮೂಲಕ ಕೆ.ಸಿ.ಇ.ಟಿ. ಪರೀಕ್ಷೆಗೆ ತರಬೇತಿಗೊಳಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿತ್ತು. ಕು. ಚಿರಂಜೀವಿ ಎಸ್. ನಾಯ್ಕ್ ಪಶುವೈದ್ಯಕೀಯದಲ್ಲಿ 265 ನೇ ಸ್ಥಾನ ಹಾಗೂ ಕೃಷಿ ವಿಜ್ಞಾನದಲ್ಲಿ 710 ನೇ ಸ್ಥಾನ ಪಡೆದಿರುತ್ತಾನೆ. ಕು. ಸ್ವಾತಿ ವಿ. ಗಾಯತೊಂಡೆ ಕೃಷಿ ವಿಜ್ಞಾನ ದಲ್ಲಿ 858 ನೇ ಸ್ಥಾನ ಗಳಿಸಿರುತ್ತಾಳೆ. ಇಂಜಿನಿಯರಿಂಗ್ ವಿಭಾಗದಲ್ಲಿ ಕು. ಸಾಗರ್ ನಾಯ್ಕ್ 1917 ನೇ ಸ್ಥಾನ, ಕು. ಸ್ವಾತಿ ಗಾಯತೊಂಡೆ 2180 ನೇ ಸ್ಥಾನ, ಕು. ಸ್ಪಂದನ ಎನ್ 3719 ನೇ ಸ್ಥಾನ, ಸೃಜನ್ ನಾಯಕ 3179 ನೇ ಸ್ಥಾನ, ಭೂಮಿಕಾ ಭಟ್ಟ 3835 ನೇ ಸ್ಥಾನ, ಕು. ಸ್ವಿಜಲ್ 4823 ನೇ ಸ್ಥಾನ, ಕು. ತೇಜಸ್ವಿ ಹೆಗಡೆ 5646 ನೇ ಸ್ಥಾನ, ಕು. ಅನನ್ಯ ಭಾಗ್ವತ್ 6058 ನೇ ಸ್ಥಾನ, ಕು. ಸಿಂಚನಾ ಎಂ. ನಾಯ್ಕ 6570 ನೇ ಸ್ಥಾನ, ಕು. ಉನ್ನತಿ 7107 ನೇ ಸ್ಥಾನ, ಕು. ಚಿರಾಗ್ ಕವರಿ 7380 ನೇ ಸ್ಥಾನ, ಕು. ದೀಪಿಕಾ ಶೆಟ್ಟಿ 7381 ನೇ ಸ್ಥಾನ, ಕು. ಆಯುಷ ಕವರಿ 7385 ನೇ ಸ್ಥಾನ, ಕು. ಸ್ವರಾಜ 7565 ನೇ ಸ್ಥಾನ, ಕು. ಪ್ರೀತಿ ಶೇಟ್ 9015 ನೇ ಸ್ಥಾನ, ಕು. ಅದಿತಿ ವೈದ್ಯ 9254 ನೇ ಸ್ಥಾನ, ಕು. ವಿಠ್ಠಲ ಶಾನಭಾಗ 9452 ನೇ ಸ್ಥಾನ, ಕು. ಚಿನ್ಮಯ ಎನ್. ಹೆಗಡೆ 9662 ನೇ ಸ್ಥಾನ, ಕು. ಚಿರಂಜೀವಿ 9845 ನೇ ಸ್ಥಾನ ಗಳಿಸಿದ್ದಾರೆ, ಹಾಗೆಯೇ ಇನ್ನೂ ಇಪ್ಪತ್ತೈದಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ.ಎನ್.ವಾಯ್. ಎಸ್., ಇಂಜಿನಿಯರಿಂಗ್, ಬಿ. ಫಾರ್ಮಾ, ಡಿ.ಫಾರ್ಮಾ, ಮುಂತಾದ ಕೋರ್ಸಗಳ ಪ್ರವೇಶಾತಿಗಾಗಿ ಕೆ.ಇ.ಎ. ನಡೆಸುವ ಕೆ.ಸಿ.ಇ.ಟಿ. – 2025ರಲ್ಲಿ ಹತ್ತು ಸಾವಿರದೊಳಗಿನ ಸ್ಥಾನ ಗಳಿಸಿ ಅತ್ಯುತ್ತಮ ಸಾಧನೆಗೈದು ಕಾಲೇಜಿನ ಗರಿಮೆಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಕಿರಣ ಭಟ್ಟ, ಉಪಪ್ರಾಂಶುಪಾಲರಾದ ಸುಜಾತಾ ಹೆಗಡೆ, ಸಂಯೋಜಕರಾದ ಪ್ರಸನ್ನ ಹೆಗಡೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭವನ್ನು ಹಾರೈಸಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".