Home ಜಿಲ್ಲೆಕೆಸಿಇಟಿಯಲ್ಲಿ ಅಗ್ರ ಶ್ರೇಯಾಂಕಗಳಿಸಿದ ಕೆನರಾ ಎಕ್ಸಲೆನ್ಸ್ ಕಾಲೇಜು

ಕೆಸಿಇಟಿಯಲ್ಲಿ ಅಗ್ರ ಶ್ರೇಯಾಂಕಗಳಿಸಿದ ಕೆನರಾ ಎಕ್ಸಲೆನ್ಸ್ ಕಾಲೇಜು

by News Desk
0 comments

ಕುಮಟಾ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ ಕೆಸಿಇಟಿಯಲ್ಲಿ ತಾಲೂಕಿನ ಕೆನರಾ ಎಕ್ಸಲೆನ್ಸ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸಿದ್ದು, ಒಬ್ಬ ವಿದ್ಯಾರ್ಥಿ 1000 ದ ಒಳಗಿನ, 4 ವಿದ್ಯಾರ್ಥಿಗಳು 5000 ದೊಳಗಿನ, 7 ವಿದ್ಯಾರ್ಥಿಗಳು 10000 ದೊಳಗಿನ ಅಗ್ರ ಶ್ರೇಣಿಯೊಂದಿಗೆ ರ್ಯಾಂಕ್ ಗಳಿಸುವುದರೊಂದಿಗೆ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಣವ ಎಮ್ ಭಟ್ಟ 938 ನೇ ರ್ಯಾಂಕ್, ಶ್ರದ್ಧಾ ಆರ್ ಭಟ್ಟ 1785, ಸೌರವ ಗಾಂವ್ಕರ 2172, ಆದರ್ಶ ಎಮ್ 2818, ಗಣೇಶ ಗೌಡ 7092, ಸುಜಿತ್ ಭಾಸ್ಕರ ಭಟ್ಟ 7908, ನಿತ್ಯಾನಂದ ಭಟ್ಟ 10587, ಅಪೂರ್ವಾ ಜಿ. ಭಟ್ಟ 10787 ನೇ ರ್ಯಾಂಕ್ ಗಳಿಸಿದ್ದು ಬಿಎನ್‍ವೈಎಸ್ ವಿಭಾಗದಲ್ಲಿ ಸಿಂಚನಾ ಭಟ್ಟ 7167 ನೇ ರ್ಯಾಂಕ್ ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ.

ಈ ಎಲ್ಲಾ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಹೆಸರಾಂತ ವೈದ್ಯರೂ ಆಗಿರುವ ಡಾ. ಜಿ ಜಿ ಹೆಗಡೆ, ಆಡಳಿತ ಮಂಡಳಿಯ ವಿಶ್ವಸ್ಥ ಡಿ ಎನ್ ಭಟ್ಟ, ಪ್ರಾಚಾರ್ಯ ನಾಗರಾಜ ಜಿ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".