Home ಮಾಹಿತಿರಾಜ್ಯಕ್ಕೆ‌ ಮುಂಗಾರು ಪ್ರವೇಶ ? ಹವಾಮಾನ ಇಲಾಖೆ ಹೇಳಿದ್ದು ಏನು?

ರಾಜ್ಯಕ್ಕೆ‌ ಮುಂಗಾರು ಪ್ರವೇಶ ? ಹವಾಮಾನ ಇಲಾಖೆ ಹೇಳಿದ್ದು ಏನು?

by News Desk
0 comments

ಮಹಾರಾಷ್ಟ್ರದ ಕರಾವಳಿ ತಲುಪಿರುವ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದರೂ ಅಲ್ಪ ಪ್ರಮಾಣದಲ್ಲಿ ತಿರುಗುತ್ತಿದ್ದು, ಭೂ ಪ್ರವೇಶಿಸಿ ಮಧ್ಯಪ್ರದೇಶ ತನಕ ಸಾಗುವ ನಿರೀಕ್ಷೆ ಇದೆ.

ಇದರ ಪರಿಣಾಮದಿಂದ ಮುಂಗಾರು ಕೇರಳದಿಂದ ಮಹಾರಾಷ್ಟ್ರ ತನಕವೂ ಒಮ್ಮೆಲೇ ಆರಂಭವಾಗಿದೆ.
ರಾಜ್ಯದಾದ್ಯಂತ ಅಬ್ಬರಿಸಲಿರುವ ಮುಂಗಾರು ಮಳೆಯು ಈ ತಿಂಗಳ ಕೊನೆಯ ತನಕ ಮುಂದುವರಿದು, ವಾಯುಭಾರ ಕುಸಿತವು ಸಂಪೂರ್ಣ ಶಿಥಿಲಗೊಳ್ಳುತ್ತಿದ್ದಂತೆಯೇ ಅಂದರೆ ಜೂನ್ 2 ಅಥವಾ 3ರಿಂದ ಅಲ್ಪ ಅವಧಿಯ ಬಿಡುವು ಪಡೆಯುವ ಸಾಧ್ಯತೆಗಳಿವೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸಲು ಅವಕಾಶ ಸಿಗಬಹುದು.
ರಾಜ್ಯದ ಕರಾವಳಿ ಜಿಲ್ಲೆಗಳಾದ್ಯಂತ ಹಾಗೂ ಮಲೆನಾಡು ಭಾಗಗಳಲ್ಲಿ ಮೇ 25ರಿಂದ 30ರ ತನಕ ಭಾರಿ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3 ದಿನಗಳ ಕಾಲ Red alert ಘೋಷಣೆಯ ಸಾಧ್ಯತೆ ಇದೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".