796
ಕುಮಟಾ: ಗ್ರಾಮೀಣ ಜನತೆಯ ಶ್ರೇಯೋಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಜಿ.ಪಂ ಮಾಜಿ ಸದಸ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಅವರಿಗೆ ೨೦೨೪-೨೦೨೫ ನೇ ಸಾಲಿನ ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ವತಿಯಿಂದ ನೀಡಲಾಗುವ `ಕರ್ನಾಟಕ ಪಂಚಾಯತ್ ಐಕಾನ್ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗಜಾನನ ಪೈ ಅವರು ಗ್ರಾಮೀಣ ಜನತೆಯ ಶ್ರೇಯೋಭಿವೃದ್ದಿಗಾಗಿ, ಜನಸ್ನೇಹಿ ಆಡಳಿತ ನೀಡುವುದರೊಂದಿಗೆ ಗ್ರಾಮ ಪಂಚಾಯತದ ಸರ್ವಾಗೀಣ ಅಭಿವೃದ್ಧಿಗೆ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಪ್ರಾಮಾಣಿಕತೆಯಿಂದ ತಲುಪಿಸುವುದು, ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದವರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಕೆ.ಡಿ.ಸಿ.ಸಿ ಬ್ಯಾಂಕ್‌ನ ನಿರ್ದೇಶಕರಾಗಿರುವ ಗಜಾನನ ಪೈ ಅವರನ್ನು ರಾಷ್ಟ್ರೀಯ ಪಂಚಾಯತ್ ದಿವಸ್ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.