Home ಜಿಲ್ಲೆವೆಪನ್ಸ್ ಆರ್ ಮೇಡ್ ಇನ್ ಭಾರತ್, ಟೆಸ್ಟೆಡ್ ಇನ್ ಪಾಕಿಸ್ತಾನ’ ಎಂಬಂತಾಗಿದೆ..!

ವೆಪನ್ಸ್ ಆರ್ ಮೇಡ್ ಇನ್ ಭಾರತ್, ಟೆಸ್ಟೆಡ್ ಇನ್ ಪಾಕಿಸ್ತಾನ’ ಎಂಬಂತಾಗಿದೆ..!

ಕುಮಟಾದಲ್ಲಿ ಗಮನ ಸೆಳೆದ ತಿರಂಗಾ ಯಾತ್ರೆ : ಸೈನಿಕರಿಗೆ ಅಭಿನಂದನೆ

by News Desk
0 comments
ಕುಮಟಾ : ಭಾರತೀಯ ಸೈನಿಕರು ಭಯೋತ್ಪಾದನೆ ವಿರುದ್ಧ ಆಪರೇಶನ್ ಸಿಂಧೂರ ಕಾರ್ಯಚರಣೆ ನಡೆಸಿ ಭಯೋತ್ಪಾದಕರ ಹತ್ಯೆಗೈದು ಮೇಲುಗೈ ಸಾಧಿಸಿದ ಬಗ್ಗೆ ದೇಶದ ಸೈನಿಕನ್ನು ಪ್ರೇರೇಪಿಸುವ ಹಾಗೂ ಸೈನಿಕರಿಗೆ ಪ್ರೆರಣೆಯಾಗಿ ನಿಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ನಡೆದ ಉ.ಕ ಜಿಲ್ಲಾ ಮಟ್ಟದ ತಿರಂಗಾ ಯಾತ್ರೆಯು ಬುಧವಾರ ಕುಮಟಾ ಪಟ್ಟಣದಾದ್ಯಂತ ಸಂಚರಿಸಿತು.

ರಾಷ್ಟ್ರೀಯ ಸುರಕ್ಷತೆಗೆ ನಾಗರಿಕರು ಶೀರ್ಷಿಕೆ ಅಡಿಯಲ್ಲಿ ಭಾರತದ ಸೇನೆಯೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಸಾರುವ ನಿಟ್ಟಿನಲ್ಲಿ ಪಕ್ಷಾತೀತವಾಗಿ, ದೇಶದ ಐಕ್ಯತೆ ಪ್ರದರ್ಶನಕ್ಕಾಗಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಯಾತ್ರೆಯು ಪಟ್ಟಣದ ಶ್ರೀ ಮಹಾಸತಿ ದೇವಸ್ಥಾನದಿಂದ ಬಸ್ತಿಪೇಟೆ ಮೂಲಕ ಸಾಗಿ ರಥಬೀದಿಯಲ್ಲಿರುವ ಗಾಂಧಿ ಚೌಕದಲ್ಲಿ ಸಮಾವೇಶಗೊಂಡಿತು.

ಖ್ಯಾತ ವಾಗ್ಮಿ, ಲೇಖಕ ಆದರ್ಶ ಗೋಖಲೆ ಸೈನಿಕರ ಕುರಿತಾಗಿ ಆಪರೇಷನ್ ಸಿಂಧೂರಿನ ಕುರಿತಾಗಿ ಹೃದಯ ಸ್ಪರ್ಶಿ ಮಾತುಗಳನ್ನಾಡಿ, ಯಾವುದೇ ದೇಶ ತಾನೊಂದು ವಸ್ತುವನ್ನು ಸಿದ್ಧಪಡಿಸಿದರೆ ಅದು ಪ್ರಯೋಗ ಮಾಡುವುದು ಮೊದಲು ತನ್ನ ದೇಶದಲ್ಲಿಯೇ, ಆದರೆ ಇಡಿಯ ಜಾಗತಿಕ ಇತಿಹಾಸದಲ್ಲಿ ಇದೇ ಮೊದಲು ಎನ್ನುವಂತೆ ‘ವೆಪನ್ಸ್ ಆರ್ ಮೇಡ್ ಇನ್ ಭಾರತ್, ಟೆಸ್ಟೆಡ್ ಇನ್ ಪಾಕಿಸ್ತಾನ’ ಎಂದು ಹೊಸ ವಾಕ್ಯವನ್ನು ಮೋದಿ ಜಗತ್ತಿಗೆ ಪರಿಚಯಿಸಿದ್ದಾರೆ. ಆಪರೇಷನ್ ಸಿಂಧೂರ್ ಎನ್ನುವುದು ಕೇವಲ ನಾಲ್ಕು ದಿನದ ಸಣ್ಣ ಕಾರ್ಯಾಚರಣೆ ಅಲ್ಲ. ಅದು ಜಗತ್ತಿನಲ್ಲಿ ಬೀರಿದ ಪ್ರಭಾವ ನಾಲ್ಕು ಶತಮಾನಗಳ ಕಾಲ ಅಚ್ಚಳಿಯದೆ ಉಳಿಯುವಂತದ್ದು. ನಾವು ಪಾಕಿಸ್ತಾನದ ಜೊತೆಗೆ ಉಳಿದ 4 ದೇಶಗಳನ್ನು ಜಗತ್ತಿನೆದುರಿಗೆ ಬಟ್ಟೆ ಹಾಕಿಕೊಂಡೆ ಬೆತ್ತಲೆ ಮಾಡಿದ್ದೇವೆ. ಅಮೇರಿಕಾ, ಚೀನಾ, ಟರ್ಕಿ, ಬಾಂಗ್ಲಾದೇಶ ಭಾರತದ ವಿರುದ್ಧದ ನಡೆಯನ್ನು ಕಾಣುವಂತಾಗಿದೆ. ಮುಂದೊಂದು ದಿನ ಭಾರತ ಎನ್ನುವ ಜಗತ್ತಿನ ಹಿಂದೂ ರಾಷ್ಟ್ರದ ಮೇಲೆ ಯಾವುದೇ ಒಂದು ದೇಶ ಅಕ್ರಮಣ ಮಾಡಿದಾಗ ಭಾರತದ ಜೊತೆಗೆ ನಿಲ್ಲಬಲ್ಲ ದೇಶ ಎಂದರೆ ರಷ್ಯಾ ಮತ್ತು ಇಸ್ರೇಲ್ ಎಂಬುದನ್ನು ಈ ಕಾರ್ಯಾಚರಣೆ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು.

ಉಗ್ರರ ಆಕ್ರಮಣ, ಬೀಸಿದರೆ ದಾಳಿಯಿಂದ ನಾವು ಗಟ್ಟಿಯಾಗಿ ನೆಲೆ ನಿಲ್ಲಬೇಕು ಎಂದರೆ ನಮಗಿರುವುದು ಸೈನಿಕರ ಆಸರೆ ಒಂದೇ, ಸೈನಿಕರ ಓಂಕಾರವೇ ನಮ್ಮನ್ನು ಬಲಿಷ್ಠವಾಗಿ ಸುತ್ತದೆ. ಎಲ್ಲಿಯವರೆಗೆ ಭಾರತೀಯ ಸೈನಿಕರ ತೋಳಿನಲ್ಲಿ ಹನುಮನ ಶಕ್ತಿ ಇರುತ್ತದೆಯೋ ಹೃದಯದಲ್ಲಿ ಸಾಕ್ಷಾತ್ ಕಾಳಿಯೇ ಅವತರಿಸುತ್ತಾಳೋ ಅಲ್ಲಿಯವರೆಗೆ ಮಾತ್ರ ಭಾರತಕ್ಕೆ ಗೆಲುವು ಎನ್ನುವ ಸತ್ಯವನ್ನು ನಾವು ಅರಿಯಬೇಕು. ಯಾವ ಮಹಿಳೆಯ ಸಿಂಧೂರವನ್ನು ಉಗ್ರಗಾಮಿಗಳು ಅಳಿಸಿದ್ದರು ಅಂತಹ ಉಗ್ರಗಾಮಿಗಳನ್ನು ಬಡಿದಟ್ಟಲು ಈ ಕ್ರಿಯಾಚರಣೆ ನಡೆಸಲಾಗಿದೆ. ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರಗಾಮಿಗಳು ಬೇರೆ ಬೇರೆ ಅಲ್ಲ. ಉಗ್ರಗಾಮಿಗಳು ಸತ್ತಾಗಲು ಪಾಕಿಸ್ತಾನದ ಧ್ವಜವನ್ನು ಅವರ ಎದೆಯ ಮೇಲಿಟ್ಟದ್ದನ್ನು ನಾವು ಕಂಡಿದ್ದೇವೆ. ಹೀಗಾಗಿ ಪಾರ್ಕ್ ಸೈನ್ಯ ಹಾಗೂ ಉಗ್ರಗಾಮಿಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಸ್ಪಷ್ಟವಾಗಿದೆ ಎಂದರು.

ಸಿಂಧೂರ್ ಕಾರ್ಯಾಚರಣೆ ಜಗತ್ತಿನ ಮುಂದೆ ಭಾರತದ ಹೊಸ ಆಯಾಮವನ್ನು ತೆರೆದಿಟ್ಟಿದೆ. ಇದು 48ರ ಭಾರತ ಅಲ್ಲ. ಇದು 1962ರ ಭಾರತ ಅಲ್ಲ. ಇದು 1965 ರ ತಗ್ಗುವ ಭಾರತವಲ್ಲ. ಇದು ಹೊಸ ಭಾರತ. ಈ ಭಾರತದಲ್ಲಿ ಯಾವುದೋ ಚಲನಚಿತ್ರ ನಟರೋ, ಕ್ರೀಡಾಪಟುವೋ ಮಕ್ಕಳ ಹೀರೋ ಆಗಬಾರದು. ಪ್ರತಿಯೊಬ್ಬ ಸೈನಿಕರು ಮಕ್ಕಳ ಪಾಲಿನ ಹೀರೋಗಳಾಗಬೇಕು.

1971 ರ ಗಾಂಧಿ ತಾತನ ಫೋಟೋ ತೋರಿಸಿ ಪಾಕಿಸ್ತಾನದ ಮೀಡಿಯಾ ಕಿಂಗ್ ಆಗುವ ಕೆಲವರಿದ್ದಾರೆ. ಯುದ್ಧಕ್ಕೆ ಹೋರಾಟಾಗ ಗಾಂಧಿ ಫೋಟೋ ತೋರಿಸುವವರು ಗೆದ್ದು ಬಂದಾಗ ಇನ್ನೊಂದು ಫೋಟೋ ತೋರಿಸುವವರು ಇದ್ದಾರೆ. ಇಡೀ ಜಗತ್ತಿನ ಯುದ್ಧಭೂಮಿಯ ಇತಿಹಾಸದಲ್ಲಿ 93,000 ಸೈನಿಕರನ್ನು ಸೆರೆಹಿಡಿದ ದೇಶ ನಮ್ಮದು ಆದರೆ, ಸಹಸ್ರ ಸಹಸ್ರ ಸೈನಿಕರನ್ನು ಹಿಡಿದ ಸಂದರ್ಭದಲ್ಲಿ ಅವರನ್ನು ಮತ್ತೆ ಪುನಃ ವಾಪಸ್ ಕಳುಹಿಸಿದ ಸರಕಾರವನ್ನು ನಾವು ಕಂಡಿದ್ದೇವೆ. ಭಾರತೀಯ ಸೈನಿಕರು ಎಂದು ಸೋಲು ಕಂಡಿಲ್ಲ ಸರಕಾರ ಸೋತಿತ್ತು, ಆದರೆ ಸೈನಿಕರು ಗೆದ್ದಿದ್ದ ಉದಾರಣೆಗಳನ್ನು ಅವರು ವಿವರಿಸಿದರು.

ಈಗ ಭಾರತ ಅಜೇಯ ಭಾರತವಾಗಿ, ನರಸಿಂಹ ಭಾರತವಾಗಿ ನರೇಂದ್ರ ಮೋದಿಯವರಿಂದ ಮುನ್ನಡೆಯುತ್ತಿದೆ. ಕಾಶ್ಮೀರ ಫೈಲ್ಸ್ ಎನ್ನುವ ಚಿತ್ರ ಬಂದಿತ್ತು. ಅದೇ ರೀತಿಯಲ್ಲೇ ಎಲ್ಲ ಸ್ಥಳಗಳಲ್ಲಿಯೂ ಚಲನಚಿತ್ರಗಳನ್ನು ರೂಪಿಸುವ ಕಾಲ ಬರಬಹುದು ಹಾಗಾಗಿ ನಾವು ಎಚ್ಚರಿಕೆ ವಹಿಸಬೇಕು. ನಮ್ಮ ಅತಿಯಾದ ಒಳ್ಳೆಯತನವನ್ನು ಬಿಟ್ಟು ದೇಶಕ್ಕಾಗಿ ಕಾರ್ಯ ಮಾಡಲು ನಾವು ಮುಂದಾಗಬೇಕು ದೇಶದ ಸೈನಿಕರನ್ನು ನಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಬೇಕು ಎಂದರು. ರಫೇಲ್ ಡೀಲ್ ಅನ್ನು ಕೊನೆಯ ಕ್ಷಣದಲ್ಲಿಯೂ ಮುಗಿಸಿದ ಮನೋಹರ್ ಪರಿಕ್ಕರ್ ಅವರ ಕಾರ್ಯವನ್ನು ಅವರು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಪರೇಷನ್ ಸಿಂದೂರ ಕಾರ್ಯಚರಣೆಯನ್ನು ಯಶಸ್ವಿಗೊಳಿಸಿದ ಸೈನಿಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಜಗತ್ತಿನ ನಿರೀಕ್ಷೆಯನ್ನು ಮೀರಿ ಪಾಕಿಸ್ತಾನದಲ್ಲಿರುವ ಉಗ್ರಗಾಮಿ ತರಬೇತಿ ಕೇಂದ್ರಗಳನ್ನು ಧ್ವಂಸುಗೊಳಿಸುವ ಮೂಲಕ ಪರೋಕ್ಷವಾಗಿ ಭಯೋತ್ಪಾದಕತೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಇಂತಹ ಕೃತ್ಯವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ. ಇದು ಹಿಂದಿನ ಭಾರತ ಅಲ್ಲ ಎನ್ನುವುದನ್ನು ತಿಳಿಸಿಕೊಡಲಾಗಿದೆ. ಇದು ಹೊಸ ಭಾರತ ಶಶಕ್ತ ಭಾರತ ಸಮೃದ್ಧ ಭಾರತ ಎನ್ನುವುದನ್ನು ಜಗತ್ತಿಗೆ ನಾವು ತೋರಿಸಿದಂತಾಗಿದೆ. ಆಪರೇಷನ್ಸ್ ಸಿಂಧೂರದ ಯಶಸ್ಸಿಗೆ ಜಗತ್ತು ಬೆರಗಾಗಿದೆ ಭಾರತದ ಶಕ್ತಿ ಏನು ಎನ್ನುವುದು ಗೊತ್ತಾಗಿದೆ. ವಿದೇಶಗಳಿಂದ ಶಸ್ತ್ರ ಸೈನಿಕ ಉಪಕರಣಗಳನ್ನು ತರಿಸಲು ನಾವು ಅವರ ಮೇಲೆ ಅವಲಂಬಿಸಿಲ್ಲ. ನಾವು ಸ್ವದೇಶಿಗಳಾಗಿದ್ದೇವೆ, ನಾವು ಸ್ವಾವಲಂಬಿಗಳಾಗಿದ್ದೇವೆ. ಹೀಗಾಗಿ ಸೈನಿಕರಿಗೆ ಹೆಚ್ಚು ಬಲ ಬಂದಿದೆ.

ಪಾಕಿಸ್ತಾನ ನಮ್ಮ ಮೇಲೆ ಈ ಹಿಂದೆ ಆಕ್ರಮಣ ಮಾಡಿದಾಗ ಸೈನಿಕರು ಸಿದ್ಧರಿದ್ದರು ಆಗಿನ ಕಾಲದ ಸರಕಾರ ಸಿದ್ಧವಿರಲಿಲ್ಲ. ಆದರೆ ಮೋದಿಜಿಯವರು ಸೈನ್ಯಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಸಂಪೂರ್ಣ ಅವಕಾಶ ನೀಡಿದರು. ಇದರಿಂದಾಗಿ ಭಾರತದ ಏಕತೆ ಮತ್ತು ಸಮಗ್ರತೆಯ ರಕ್ಷಣೆಯನ್ನು ನರೇಂದ್ರ ಮೋದಿಯವರು ವಹಿಸಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪಾಕಿಸ್ತಾನ ಇದೇ ಮೊದಲ ಬಾರಿಗೆ ಇಂತಹ ಕೃತ್ಯವನ್ನು ಮಾಡಿರುವುದಲ್ಲ. ನಾಯಿಯ ಬಾಲ ಎಂದಿದ್ದರೂ ಡೊಂಕೇ. ಅವರು ಮುಂದೆಯೂ ಸಹ ಇಂತಹದೇ ಕೃತ್ಯ ಮಾಡಬಹುದು. ದೇಶದ ರಕ್ಷಣೆ ಮತ್ತು ಅಖಂಡತೆಯ ದೃಷ್ಟಿಯಿಂದ ನಾವೆಲ್ಲರೂ ಒಂದಾಗಿರಬೇಕು ಸೈನಿಕರು ತೆಗೆದುಕೊಳ್ಳುವ ನಿರ್ಣಯವನ್ನು ನಾವು ಬೆಂಬಲಿಸಬೇಕು. ಕೇಂದ್ರ ಸರ್ಕಾರದ ನಿರ್ಣಯವನ್ನು ನಾವು ಬೆಂಬಲಿಸಬೇಕು.

ಶಾಸಕ ದಿನಕರ ಶೆಟ್ಟಿ ಮಾತನಾಡಿ ಕಾಶ್ಮೀರದಲ್ಲಿ ಜಾತಿ ಧರ್ಮವನ್ನು ಕೇಳಿ ಅವರ ಪತ್ನಿಯರ ಎದುರಲ್ಲಿ ಜನರನ್ನು ಕೊಲ್ಲಲಾಗಿದೆ. ಪಾಕಿಸ್ತಾನಿಗಳ ಮನಸ್ಥಿತಿ ಇದರಲ್ಲಿ ಅರ್ಥವಾಗುತ್ತದೆ. ಮೋದಿಯವರು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರವನ್ನು ನೀಡಿದ ನಂತರ ವೀರ ಯೋಧರು ಯಾವೆಲ್ಲ ರೀತಿಯಲ್ಲಿ ಹೋರಾಟ ಮಾಡಿದರು ಎನ್ನುವುದು ತಮ್ಮೆಲ್ಲರಿಗೆ ಗೊತ್ತಿದೆ. ಆದರೆ ಅನೇಕರು ಯುದ್ಧ ಬೇಡ ಎನ್ನುವ ಮಾತುಗಳನ್ನು ಹಾಡಿದ್ದನ್ನು ಪತ್ರಿಕೆಯಲ್ಲಿ ನಾವು ನೋಡಿದ್ದೇವೆ. ಎಷ್ಟು ಜನ ಸತ್ತಿದ್ದಾರೆ ಯಾವುದರಿಂದ ಸತ್ತಿದ್ದಾರೆ ಎನ್ನುವುದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸೈನಿಕರು ಉತ್ತರ ನೀಡಿದ್ದಾರೆ. ಮೋದಿಯವರ ದಿಟ್ಟ ನಿರ್ಧಾರದಿಂದ ಪಾಕಿಸ್ತಾನದ ಬಾಯಿ ಮುಚ್ಚಿಸುವ ಕೆಲಸ ನಡೆದಿದೆ. ಈ ಕಾರ್ಯದಲ್ಲಿ ಸೈನಿಕರ ಪಾತ್ರ ಬಹುದೊಡ್ಡದು ಅವರನ್ನು ಅಭಿನಂದಿಸುತ್ತೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಸೈನಿಕರುಗಳು, ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ರಿಕ್ಷಾ ಯೂನಿಯನ್, ಟ್ಯಾಕ್ಸಿ ಯೂನಿಯನ್, ಪರಿವಾರ ಸಂಘಟನೆಯ ಪ್ರಮುಖರು ಇದ್ದರು. ಬಿಜೆಪಿ ಪ್ರಮುಖರಾದ ಸುನೀಲ್ ಹೆಗಡೆ, ಡಾ. ಜಿ.ಜಿ ಹೆಗಡೆ, ಎಂ.ಜಿ ಭಟ್ಟ, ತಾಲೂಕಾಧ್ಯಕ್ಷ ಜಿ.ಐ.ಹೆಗಡೆ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಹೇಮಂತಕುಮಾರ ಗೌಂವ್ಕರ್, ತಿಮ್ಮಪ್ಪ ಮುಕ್ರಿ ಇತರರು ಇದ್ದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".