Home ಅಂಕಣಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರ ವರ್ಗಾವಣೆ..?

ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರ ವರ್ಗಾವಣೆ..?

ತಾತ್ಕಾಲಿಕ ಪಟ್ಟಿಯಲ್ಲಿ ಐವರ ಹೆಸರು : ಅಂತಿಮವಾದರೆ ಜನರಿಗೆ ಎದುರಾಗಲಿದೆ ಸಮಸ್ಯೆ

by News Desk
0 comments

ಕುಮಟಾ : ಜನರ ಜೀವ ರಕ್ಷಣೆಗೆ ಹಾಗೂ ಬಡಜನರ ಆಶಾಕಿರಣವಾಗಿರುವ ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರ ವರ್ಗಾವಣೆಯ ಬಗ್ಗೆ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದ್ದು, ಒಮ್ಮೆಗೇ ಐವರು ವೈದ್ಯರು ವರ್ಗಾವಣೆಗೊಂಡರೆ ಮುಂದಿನ ಪರಿಸ್ಥಿತಿ ಏನು ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ.

ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ಕೂಗು ಕೇಳಿಬರುತ್ತಲಿರುವ ಸಂದರ್ಭದಲ್ಲಿಯೇ ಗಾಯದ ಮೇಲೆ ಬರೆ ಎರೆದಂತೆ ಪ್ರಕ್ರಿಯೆ ನಡೆಯುತ್ತಲಿದೆ. ಈಗಾಗಲೇ ಸರ್ಕಾರದ ಆರೋಗ್ಯ ಇಲಾಖೆ ವರ್ಗಾವಣೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರನ್ನು ವರ್ಗಾವಣೆ ಮಾಡಲು ಕೌನ್ಸಿಲಿಂಗಿಗೆ ತಯಾರಿ ನಡೆಸಿದೆ. ಕುಮಟಾ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಣೇಶ ನಾಯ್ಕ, ಎಲುಬು ತಜ್ಞ ಡಾ. ಸದಾನಂದ ಪೈ, ಚರ್ಮ ರೋಗ ತಜ್ಞೆ ಡಾ. ಸುಮಲತಾ, ಶಸ್ತ್ರ ಚಿಕಿತ್ಸಾ ತಜ್ಞ ಡಾ. ಪಾಂಡುರಂಗ ದೇವಾಡಿಗ ಹಾಗೂ ದಂತ ವೈದ್ಯ ಡಾ. ಕೇಶವ ಭಟ್ ಇವರು ಸರ್ಕಾರದ ವರ್ಗಾವಣೆ ಪಟ್ಟಿಯಲ್ಲಿದ್ದಾರೆ.

ಕುಮಟಾಕ್ಕೆ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಂತೂ ಕೊಡಲಿಲ್ಲ. ಆದರೆ ಕನಿಷ್ಟ ಇಲ್ಲಿರುವ ತಾಲೂಕಾಸ್ಪತ್ರೆಗಾದರೂ ಒಂದಿಷ್ಟು ಹೆಚ್ಚುವರಿ ವೈದ್ಯರ ಸೇವೆ ಕಲ್ಪಿಸಬೇಕಿತ್ತಲ್ಲವೇ? ಆದರೆ ಸರ್ಕಾರ ಬೇರೆಯೇ ಹೆಜ್ಜೆಯಿಟ್ಟಿದ್ದು, ಇಲ್ಲಿರುವ ವೈದ್ಯರನ್ನೇ ವರ್ಗಾವಣೆ ಮಾಡಲು ಸಜ್ಜಾಗಿದೆ ಎಂದು ಸಾರ್ವಜನಿಕರು ಗೋಗರೆಯುತ್ತಿದ್ದಾರೆ.

ಐವರು ವೈದ್ಯರನ್ನು ಒಮ್ಮೆಲೇ ಬೇರೆಡೆಗೆ ವರ್ಗಾವಣೆ ಮಾಡಿದರೆ ಜನಸಾಮಾನ್ಯರಿಗೆ ಖಂಡಿತ ಸಮಸ್ಯೆ ಆಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಚಿಂತನೆ ನಡೆಸಿ ಕಾರ್ಯಯೋಜನೆ ರೂಪಿಸಬೇಕು. ತಾತ್ಕಾಲಿಕ ಪಟ್ಟಿಯಲ್ಲಿ ಪ್ರಕಟಗೊಂಡ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಬಂದರೆ ಖಂಡಿತವಾಗಿಯೂ ಕುಮಟಾದ ಜನರು ತಮ್ಮ ಸಮಾಧಾನವನ್ನು ಹೊರ ಹಾಕುವುದರಲ್ಲಿ ಸಂದೇಹವಿಲ್ಲ ಎನ್ನಲಾಗಿದೆ.

೧೦ ವರ್ಷ ಮೇಲ್ಪಟ್ಟವರಿಗೆ ಮಾಡುತ್ತಿದ್ದರು.

ವೈದ್ಯರ ವರ್ಗಾವಣೆಯ ಸಂದರ್ಭದಲ್ಲಿ ಕನಿಷ್ಠ 10 ವರ್ಷಗಳ ಸೇವಾವಧಿಯ ನಂತರದಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ಇದೀಗ ವರ್ಗಾವಣೆ ಪಟ್ಟಿ ಪ್ರಕಟಗೊಂಡಿದೆ ಎಂಬ ಮಾತುಗಳು ವೈದ್ಯಲೋಕದಲ್ಲಿಯೇ ಕೇಳಿಬರುತ್ತದೆ.

ನಂಬಿಕೆ ಗಳಿಸಲಾಗದು.

ಒಬ್ಬ ವೈದ್ಯರನ್ನು ರೋಗಿ ನಂಬಬೇಕು ಎಂದರೆ ಆತನಿಂದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಅವರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. ಜೀವದ ಹಂಗು ತೊರೆದು ಯಾರೂ ವೈದ್ಯರನ್ನು ಸಂಪರ್ಕ ಮಾಡುವುದಿಲ್ಲ. ವೈದ್ಯರ ಮೇಲೆ ನಂಬಿಕೆ ಬರಲು ಕನಿಷ್ಠ ಕಾಲಾವಧಿಯಾದರೂ ಬೇಕು. ಇದೀಗ ಜನರು ಮೆಚ್ಚಿಕೊಂಡ ವೈದ್ಯರನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ ಒಮ್ಮೆಲೇ ಇಷ್ಟು ವೈದ್ಯರನ್ನು ಜನರು ಹೇಗೆ ಒಪ್ಪಿಕೊಳ್ಳುತ್ತಾರೆ? ಇದರಿಂದಾಗಿ ಆಸ್ಪತ್ರೆಯ ಸ್ಥಿತಿ ಎತ್ತಣ ಸಾಗಲಿದೆ ಎಂಬ ಚಿತ್ರಣವೆ ಅರಿವಿಲ್ಲದಂತೆ ವರ್ತನೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಂಭೀರ ಚಿಂತನೆ ನಡೆಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

 

ನಮ್ಮ ಜಿಲ್ಲೆಗೆ ವೈದ್ಯರೇ ಬರುವುದು ಕಡಿಮೆ. ಮೊದಲೇ ವೈದ್ಯರ ಕೊರತೆ ಇದೆ. ಶಿಕ್ಷಕರು ಹಾಗೂ ಇತರ ಇಲಾಖೆಯಲ್ಲಿ ವರ್ಗಾವಣೆ ನಾಡಸಿದಂತೆ ಈ ರೀತಿಯ ಕೌಂನ್ಸಿಲಿಂಗ್ ನಡೆಸಿದರೆ, ಮುಂದೆ ಸರಕಾರಿ ಆಸ್ಪತ್ರೆ ಮುಚ್ಚಬೇಕಾಗುತ್ತದೆ. ಇದರಿಂದ ಬಡವರಿಗೆ ಸಮಸ್ಯೆಯಾಗಲಿದೆ. ಸರಕಾರ ಕೈಗೊಂಡ ಇಂತಹ ಪ್ರಕ್ರಿಯೆಯ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರೂ ಒಂದಾಗಿ, ಪಕ್ಷ ಬೇಧ ಮರೆತು ಹೊರಾಟ ಮಾಡಬೇಕು. – ದಿನಕರ ಶೆಟ್ಟಿ, ಶಾಸಕ

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".