Home ಜಿಲ್ಲೆಅಂತರರಾಷ್ಟ್ರೀಯ ಮಟ್ಟದ ನ್ಯೂರೋಲೊಜಿಸ್ಟ್ ಆಗಿ ಮಾನ್ಯತೆಯ ‘ಪದವಿ’ ಪಡೆದ ಡಾ.ಸುಮಂತ್ ಬಳಗಂಡಿ

ಅಂತರರಾಷ್ಟ್ರೀಯ ಮಟ್ಟದ ನ್ಯೂರೋಲೊಜಿಸ್ಟ್ ಆಗಿ ಮಾನ್ಯತೆಯ ‘ಪದವಿ’ ಪಡೆದ ಡಾ.ಸುಮಂತ್ ಬಳಗಂಡಿ

ಮೆದುಳು ಮತ್ತು ನರ ರೋಗ ತಜ್ಙ ಡಾ. ಸುಮಂತ್ ಜಯದೇವ ಬಳಗಂಡಿ

by News Desk
0 comments

ಕುಮಟಾ : ಮೆದುಳು ಮತ್ತು ನರ ರೋಗ ತಜ್ಙ ಡಾ. ಸುಮಂತ್ ಜಯದೇವ ಬಳಗಂಡಿ ಅವರು ಯುನೈಟೆಡ್ ಕಿಂಗ್‌ಡಂ(ಲಂಡನ್) ನ Royal Colleges of Physicians ಮತ್ತು Association of British Neurologists ವತಿಯಿಂದ ನಡೆಸಲಾಗುವ ಅಂತರರಾಷ್ಟ್ರೀಯ ಮಟ್ಟದ MRCP (Specialty Certificate Examination in Neurology) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ವೈದ್ಯಕೀಯ ಕ್ಷೇತ್ರದ ಮತ್ತೊಂದು ‘ಪದವಿ’ ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ.

ಕಳೆದ 2025 ರ ಮೇ ತಿಂಗಳಲ್ಲಿ ನಡೆದ ಈ ಪ್ರಮುಖ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕ ಗಳಿಸಿ ಯಶಸ್ವಿಯಾಗಿದ್ದಾರೆ. ಜೂನ್ 11 ರಂದು ಪ್ರಕಟವಾದ ಈ ಫಲಿತಾಂಶದೊಂದಿಗೆ ನ್ಯೂರೋಲಾಜಿ ವಿಭಾಗದಲ್ಲಿ “ಅಂತರರಾಷ್ಟ್ರೀಯ ಮಾನ್ಯತೆ ಹೊಂದಿದ ತಜ್ಞ”ರಾಗಿ ಡಾ.ಸುಮಂತ್ ಬಳಗಂಡಿ ಸ್ಥಾನ ಪಡೆದಿರುತ್ತಾರೆ.

ಡಾ.ಸುಮಂತ್ ಬಳಗಂಡಿ ಅವರು ತಮ್ಮ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೂ ಉನ್ನತ ಶ್ರೇಣಿಯಲ್ಲಿ ಮುಂದುವರೆಸಿಕೊಂಡು ಬಂದಿದ್ದು, ಕುಮಟಾದ ಗುಡಿಗಾರಗಲ್ಲಿಯ ಸರಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು,ಕಾರವಾರದ ಹಿಂದೂ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದರು. ನಂತರ ಶ್ರೀ ಸತ್ಯ ಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಅಳಿಕೆ (ದ.ಕ.)ಯಲ್ಲಿ ಪಿಯುಸಿ ಪೂರ್ಣಗೊಳಿಸಿ, ಹುಬ್ಬಳ್ಳಿಯ ಕಿಮ್ಸ್‌ (KIMS) ನಲ್ಲಿ ವೈದ್ಯಕೀಯ ಎಮ್.ಬಿ.ಬಿ.ಎಸ್.ಪದವಿ ಹಾಗೂ ನಂತರ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಎಮ್.ಡಿ.ಪದವಿ ಗಳಿಸಿದರು.ಮೂರು ವರ್ಷ ಅವಧಿಯ ಕೋರ್ಸ್ ನ ರಾಷ್ಟ್ರ ಮಟ್ಟದ ಪರೀಕ್ಷೆ ಬರೆದು ಉತ್ತೀರ್ಣರಾಗಿ ಜನರಲ್ ಮೆಡಿಸಿನ್ ನಲ್ಲಿ ಡಿ.ಎನ್.ಬಿ.ಪದವಿಯನ್ನೂ ಪಡೆದರು.

ನ್ಯೂರೋ ಸೈನ್ಸ್ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆ ಪಡೆದಿರುವ ನಿಮ್ಹ್ಯಾನ್ಸ್‌ ಸಂಸ್ಥೆಯಲ್ಲಿ ಅವರು ಮೂರು ವರ್ಷಗಳ ವಿಶೇಷ ಅಧ್ಯಯನದ ಮೂಲಕ ಡಿ.ಎಮ್. (ನ್ಯೂರೋಲೊಜಿ) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಮೆದುಳು ಮತ್ತು ನರರೋಗಗಳ ಅಧ್ಯಯನ-ಚಿಕಿತ್ಸೆಯಲ್ಲಿ ನಿಮ್ಹ್ಯಾನ್ಸ್‌ ಸಂಸ್ಥೆ ಅಗ್ರಸ್ಥಾನ ಪಡೆದಿದ್ದು, ಅಲ್ಲಿ ಪಡೆದುಕೊಂಡ ತರಬೇತಿಯು ಡಾ. ಸುಮಂತ್ ಅವರಿಗೆ ಮತ್ತಷ್ಟು ಉನ್ನತಮಟ್ಟದ ಅನುಭವ ನೀಡಿದ್ದು, ಈಗ ಅಂತರರಾಷ್ಟ್ರೀಯ ಮಟ್ಟದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಮ್.ಆರ.ಸಿ.ಪಿ.ಪದವಿ ಗಳಿಸಿದ್ದಾರೆ.

2024 ರ ಆಗಸ್ಟ್‌ನಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಸಿದ್ಧ ಭಾಗವತ್ ಆಸ್ಪತ್ರೆಯಲ್ಲಿ ಮೆದುಳು ಮತ್ತು ನರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮಂತ್, ತಮ್ಮ ಪರಿಣತಿ ಮತ್ತು ಸಮರ್ಪಿತ ಸೇವೆಯ ಮೂಲಕ ಶಿವಮೊಗ್ಗಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನತೆಯ ಮೆಚ್ಚುಗೆ ಪಡೆಯುವ ಮೂಲಕ ಹೆಸರು ಗಳಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರ ಪತ್ನಿ ಡಾ. ಶ್ರೀಯಾ ಸುಮಂತ್ ಕೂಡ ವೈದ್ಯಕೀಯ ಕ್ಷೇತ್ರದಲ್ಲಿದ್ದು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿ ಸಾಗರದ ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತ ಜನಪ್ರಿಯತೆ ಗಳಿಸಿದ್ದಾರೆ.

ಡಾ. ಸುಮಂತ್ ಜಯದೇವ ಬಳಗಂಡಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಮುಂಡಿಗೇಸರ ಗ್ರಾಮೀಣ ಪ್ರದೇಶದ ಕೃಷಿ ಕುಟುಂಬದ ಹಿನ್ನೆಲೆಯವರಾಗಿದ್ದಾರೆ.ಅವರ ತಾಯಿ ಸ್ವಾತಿ ಬಳಗಂಡಿ ಮತ್ತು ತಂದೆ ಜಯದೇವ ಬಳಗಂಡಿ ಕಳೆದ ಮೂರು ದಶಕಗಳಿಂದ ಕುಮಟಾ ನಗರ ನಿವಾಸಿಗಳಾಗಿ ವೈಯಕ್ತಿಕ ಜೀವನದ ಜೊತೆಗೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ತಮ್ಮ ನಡೆ-ನುಡಿಗಳ ಮೂಲಕ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಡಾ. ಸುಮಂತ್ ಬಳಗಂಡಿ ಅವರ ಈ ಸಾಧನೆಗೆ ಕುಟುಂಬದವರು,ಗುರುವೃಂದದವರು,ವೈದ್ಯಕೀಯ ಕ್ಷೇತ್ರದ ಹಿರಿ ಕಿರಿಯ ಹಿತೈಷಿಗಳು, ಸ್ನೇಹಿತರು,ಅಭಿನಂದಿಸಿ ಹಾರ್ದಿಕ ಶುಭ ಕೋರಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".