ಕುಮಟಾ : ಮೊದಲ ಯತ್ನದಲ್ಲಿಯೇ ಪ್ರತಿಷ್ಠಿತ ಸಿ.ಎ ಪರೀಕ್ಷೆ ತೇರ್ಗಡೆ ಹೊಂದುವ ಮೂಲಕ ಕಡತೋಕಾದ ಎಚ್. ಎಸ್ ವಿಶಾಲ ಸಾಧನೆ ಮಾಡಿದ್ದಾರೆ.
ಇವರು ದಿ. ಸೂರ್ಯನಾರಾಯಣ ಹೆಗ್ಡೆ ಮತ್ತು ಶ್ರಿಮತಿ ಸವಿತಾ ಹೆಗ್ಡೆರವರ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಡತೋಕದಲ್ಲಿ ಕನ್ನಡ ಮಾಧ್ಯಮದಲ್ಲಿ ಪಡೆದಿದ್ದು, ನಂತರ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭಾಸ ಮುಗಿಸಿದ್ದು ಪರೀಕ್ಷೆಯಲ್ಲಿ 97.6 ಶೇ ಅಂಕಗಳೊಂದಿಗೆ ಉತ್ತೀರ್ಣನಾಗಿ, ಮುಂದೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪಿ. ಯು ಕಾಲೇಜ್ನಲ್ಲಿ ಪಿಯುಸಿ ಕಲಿತು ಪರೀಕ್ಷೆಯಲ್ಲಿ 97.5 ಶೇ ಅಂಕಗಳನ್ನು ಗಳಿಸಿ ಶ್ರೇಷ್ಠ ಶೈಕ್ಷಣಿಕ ಸಾಧನೆ ಮಾಡಿದ್ದ.

ನಂತರದ ವರ್ಷಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪದವಿಗಾಗಿ ಓದಿ, ಮೊದಲ ಪ್ರಯತ್ನದಲ್ಲೇ ಸಿ.ಎ ಫೈನಲ್ ಪರೀಕ್ಷೆ ಉತ್ತೀರ್ಣವಾಗುವಲ್ಲಿ ಯಶಸ್ವಿಯಾಗಿದ್ದಾನೆ. ಪ್ರಸ್ತುತ ಮಂಗಳೂರಿನ ಪ್ರಸನ್ನ ಶೆಣೈ ಮತ್ತು ಕಂಪನಿ, ಚಾರ್ಟರ್ಡ್ ಅಕೌಂಟೆಂಟ್‌ಸ್ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ನಡೆಸುತ್ತಿದ್ದಾರೆ. ವಿಶಾಲ ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ಇವರ ಅಣ್ಣನ ಮಗನಾಗಿದ್ದಾರೆ.