Home ಮಾಹಿತಿಶ್ರೀ ಬ್ರಹ್ಮಾನಂದ ಸ್ವಾಮೀಜಿ ಚಾತುರ್ಮಾಸ್ಯಕ್ಕೆ ಸಜ್ಜಾದ ಕೊನಳ್ಳಿ

ಶ್ರೀ ಬ್ರಹ್ಮಾನಂದ ಸ್ವಾಮೀಜಿ ಚಾತುರ್ಮಾಸ್ಯಕ್ಕೆ ಸಜ್ಜಾದ ಕೊನಳ್ಳಿ

by News Desk
0 comments

ಕುಮಟಾ:ತಾಲೂಕಿನ ಕೋನಳ್ಳಿಯ ವನದುರ್ಗಾ ದೇವಾಲಯದ ಪರಿಸರದಲ್ಲಿ ಜುಲೈ ೧೦ ರಂದು ಪ್ರಾರಂಭಗೊಳ್ಳಲಿರುವ ಚಾತುರ್ಮಾಸ್ಯ ವೃತಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು ಎಲ್ಲಾ ಔಪಚಾರಿಕತೆ ಕೊನೆ ಹಂತದಲ್ಲಿವೆ.

ಜುಲೈ ೧೦ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಬ್ರಹ್ಮಾನಂದ ಸ್ವಾಮಿಜೀಗಳು ಪಟ್ಟಣದ ನಾಮಧಾರಿ ಸಭಾಭವನದ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ ರಥದ ಮೂಲಕ ಚಾತುರ್ಮಾಸ್ಯ ವೃತಾಚರಣೆಯ ಸ್ಥಳಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಕುಮಟಾದಿಂದ ಮುಕ್ತ ರಥದಲ್ಲಿ ಸಂಚರಿಸುವ ಅವರನ್ನು ನೂರಾರು ಬೈಕ್ ಮತ್ತು ಲಘು ವಾಹನಗಳು ಹಿಂಬಲಾಸಲಿವೆ. ಸುಮಾರು ೧೦,೦೦೦ ಜನರು ಆಸೀನರಾಗಬಹುದಾದ ಬೃಹತ್ ಪೆಂಡಾಲನ್ನು ಕಟ್ಟಲಾಗಿದೆ. ಪ್ರತಿನಿತ್ಯ ಮೂರು ಹೊತ್ತು ಅನ್ನ ಸಂತರ್ಪಣೆ ನಡೆಯಲಿದೆ. ಶುಚಿ ರುಚಿ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ. ಕುಮಟಾ, ಹೊನ್ನಾವರ ಹಾಗೂ ರಾಜ್ಯ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ಚಾತುರ್ಮಾಸ್ಯದ ಮಹತ್ವವನ್ನು ಅರಿತು ಪುಣ್ಯಕ್ಕೆ ಪಾತ್ರರಾಗಲಿದ್ದಾರೆ.

ಪ್ರತಿನಿತ್ಯ ಫಲ ಮಂತ್ರಾಕ್ಷತೆ, ಭಜನೆ, ಹವನ, ಗುರುಪೂಜೆ ನಡೆಯಲಿದೆ. ಅಮವಾಸೆ, ಹುಣ್ಣಿಮೆ ಮತ್ತು ಏಕಾದಶಿಯಂದು ಸ್ವಾಮಿಜೀಗಳು ಮೌನಾಚರಣೆ ವಹಿಸಲಿದ್ದಾರೆ. ಭಕ್ತಾದಿಗಳು ಪ್ರವಾಹೋಪಾದಿಯಲ್ಲಿ ಆಗಮಿಸಲಿದ್ದು ಅವರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವೃತಾಚರಣಾ ಸಮಿತಿಯ ಎಚ್ ಆರ್ ನಾಯ್ಕ ತಿಳಿಸಿದ್ದಾರೆ. ಎಲ್ಲೆಡೆ ತಳಿರು-ತೋರಣ, ಅಲಂಕಾರ ಕಂಗೊಳಿಸುತ್ತಿದ್ದು ೪೨ ದಿನಗಳ ಕಾಲ ವೈಭವ ವಿಜೃಂಭಿಸಲಿದೆ. ಅಲ್ಲದೇ ಲೌಕಿಕ, ಆಧ್ಯಾತ್ಮಿಕ, ಪಾರಮಾರ್ಥಿಕ ವಚನಗಳು ಮೊಳಗಲಿವೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".