Home ವಿಶೇಷಮೊದಲ ಯತ್ನದಲ್ಲಿಯೇ ಸಿ.ಎ ಉತ್ತೀರ್ಣ

ಮೊದಲ ಯತ್ನದಲ್ಲಿಯೇ ಸಿ.ಎ ಉತ್ತೀರ್ಣ

ಯಾಣದ ಭಾಸ್ಕರ ಈಶ್ವರ ಮರಾಠಿ ಸಾಧನೆ

by News Desk
0 comments

ಕುಮಟಾ : ಪ್ರಥಮ ಪ್ರಯತ್ನದಲ್ಲಿಯೇ ಸಿಎ ಪರೀಕ್ಷೆ ಉತ್ತೀರ್ಣನಾಗುವ ಮೂಲಕ ತಾಲೂಕಿನ ಯಾಣದ ಭಾಸ್ಕರ ಈಶ್ವರ ಮರಾಠಿ ಸಾಧನೆ ಮಾಡಿದ್ದಾರೆ.

ಕುಮಟಾ ತಾಲೂಕಿನ ಯಾಣ ಎಂಬ ಪುಟ್ಟ ಗ್ರಾಮದದಲ್ಲಿ ಜನಿಸಿದ ಇವರ ತಂದೆ ಈಶ್ವರ ಮರಾಠಿ ಹಾಗೂ ತಾಯಿ ಗೌರಿ ಈಶ್ವರ ಮರಾಠಿ. ಇವರು ಪ್ರಾಥಮಿಕ ಶಿಕ್ಷಣವನ್ನು ಯಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಎಸ್ ಕೆ ಪಿ ಹೈ ಸ್ಕೂಲ್ ಕತಗಾಲದಲ್ಲಿ ಮುಗಿಸಿದ್ದು, ಹತ್ತನೇ ತರಗತಿಯಲ್ಲಿ ಹೈಸ್ಕೂಲಿಗೆ ಎರಡನೇ ಸ್ಥಾನ ಬರುವುದರ ಮೂಲಕ ಕೀರ್ತಿ ತಂದಿರುತ್ತಾರೆ.

ತದನಂತರ ಕುಮಟಾದ ಸರ್ಕಾರಿ ಪಿಯು ಕಾಲೇಜ ನೆಲ್ಲಿಕೇರಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿರುತ್ತಾನೆ. ತದನಂತರದಲ್ಲಿ ಬಿಕಾಂ ಪದವಿ ಶಿಕ್ಷಣವನ್ನು ಪ್ರಾರಂಭಿಸಿ 2018 ರಲ್ಲಿ ಸರ್ವೋತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿಯೊಂದಿಗೆ ಡಾ. ಎ. ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಿಂದ ಬಿಕಾಂ ಪದವಿ ಪಡೆದರು.

ಚಾರ್ಟೆಡ್ ಅಕೌಂಟೆಂಟ್ ಮಾಡಬೇಕೆಂಬ ಕನಸನ್ನು ಹೊತ್ತು ಬೆಂಗಳೂರಿನಲ್ಲಿ ಕಲಿಕೆ ಪ್ರಾರಂಭಿಸಿ, ಪ್ರಥಮ ಪ್ರಯತ್ನದಲ್ಲಿಯೇ ಸಿಎ ಇಂಟರ್ ಪರೀಕ್ಷೆಯನ್ನು ಉತ್ತೀರ್ಣಗೊಂಡು, ಸತತ ಪ್ರಯತ್ನ ಪರಿಶ್ರಮದ ಫಲವಾಗಿ ಮೇ-2025 ರಲ್ಲಿ ನಡೆದ ಸಿಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿರುತ್ತಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".