Home ಜಿಲ್ಲೆಹೊನ್ನಾವರದಲ್ಲಿ ಭಕ್ತಿಪೂರ್ಣವಾಗಿ ನಡೆದ ಐತಿಹಾಸಿಕ ಶ್ರೀ ಜಗನ್ನಾಥ ರಥಯಾತ್ರೆ

ಹೊನ್ನಾವರದಲ್ಲಿ ಭಕ್ತಿಪೂರ್ಣವಾಗಿ ನಡೆದ ಐತಿಹಾಸಿಕ ಶ್ರೀ ಜಗನ್ನಾಥ ರಥಯಾತ್ರೆ

by News Desk
0 comments

ಹೊನ್ನಾವರ : ನಗರದಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್), ಭಕ್ತಿ ಯೋಗ ಕೇಂದ್ರ, ತೊಪ್ಪಲಕೇರಿ ಭಕ್ತರು ಆಯೋಜಿಸಿದ್ದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ಮೊದಲ ಬಾರಿಗೆ ಹೊನ್ನಾವರದ ಅತಿ ವಿಜೃಂಭಣೆಯಿಂದ ನಡೆಯಿತು.

ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ತೊಪ್ಪಲಕೇರಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕರ್ಕಿ ಮಠದವರೆಗೆ, ಮರಳಿ ಶಾಖೆಯವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ರಥದ ಮುಂದೆ ‘ಹರೇ ಕೃಷ್ಣ’ ಸಂಕೀರ್ತನೆಯೊಂದಿಗೆ ೨೦೦ ಕ್ಕಿಂತ ಹೆಚ್ಚು ಭಕ್ತರು ನೃತ್ಯಮಾಡುತ್ತಾ ಅತ್ಯಾನಂದದಿಂದ ರಥವನ್ನು ಎಳೆದು ಭಗವಂತನ ದರ್ಶನ ಪಡೆದು ಪುನೀತರಾದರು.

ಆಸಮಯದಲ್ಲಿ ಮೋಡಗಳಿಂದ ತುಂಬಿದ ಬಾನಂಗಳ ಸಂಪೂರ್ಣ ರಥಯಾತ್ರೆ ಮುಗಿಯುವ ತನಕ ವರ್ಷಧಾರೆಯನ್ನು ತಡೆದು, ರಥಯಾತ್ರೆಗೆ ಸಹಕಾರ ನೀಡಿದ ಕ್ಷಣ, ನೆರೆದ ಭಕ್ತರಿಗೆ ಭಗವಂತನ ಆಶೀರ್ವಾದದ ಅನುಭವವನ್ನು ಮೂಡಿಸಿತು. ಹಲವರು ಇದು ದೇವರ ಕೃಪೆಯ ಲಕ್ಷಣವೆಂದು ಭಾವಿಸಿ ಭಕ್ತಿ ಉಲ್ಲಾಸದಲ್ಲಿ ತೇಲಿದರು.

ರಥೋತ್ಸವದ ನಂತರದಲ್ಲಿ ಶಾಖೆಯಲ್ಲಿ ಭಗವಂತನಿಗೆ ವಿವಿಧ ಭೋಗಗಳನ್ನು ಅರ್ಪಣೆ ಮಾಡಲಾಯಿತು. ಮುಖ್ಯಸ್ಥರಾದ ಶ್ರೀಮಾನ್ ಗೌರ ಹರಿಪ್ರಭುಜಿಯವರು ಪ್ರವಚನ ನೀಡಿದರು. ಮಹಾ ಆರತಿಯ ನಂತರ ಮಹಾಪ್ರಸಾದ (ಭೋಜನ)ದೊಂದಿಗೆ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಮುಕ್ತಾಯವಾಯಿತು.

ಈ ಕಾರ್ಯಕ್ರಮದಲ್ಲಿ ಕುಮಟಾ, ಸಿದ್ದಾಪುರ, ಭಟ್ಕಳ, ಕುಂದಾಪುರ, ಮರವಂತೆ, ಧಾರವಾಡ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಸೇರಿ ಭಕ್ತಿ ಹಾಗೂ ಸಂಸ್ಕೃತಿಯ ಸಂರಕ್ಷಣೆಯ ಮಹತ್ವವನ್ನು ಪುನಃ ಜಾಗೃತಗೊಳಿಸಿದರು.

ಭಕ್ತರ ಸಂತೋಷ, ಮಕ್ಕಳ ನಗುವು, ಹರಿಕೀರ್ತನೆಯ ನಾದದ ಜೊತೆ ಸಮುದ್ರದ ಗಾಳಿಯು, ಮೋಡದ ನೆರಳು ರಥೋತ್ಸವವನ್ನು ಮತ್ತಷ್ಟು ಪುಣ್ಯಮಯವಾಗಿಸಿತು.

ನಾಡಿನಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಭಕ್ತಿಯ ಶಕ್ತಿ ಬೆಳೆಸಬೇಕೆಂಬ ಆಶಯ ನೆರೆದ ಭಕ್ತರಲ್ಲಿ ವ್ಯಕ್ತವಾಗಿದ್ದು ವಿಶೇಷವಾಗಿತ್ತು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".