Home ವಿಶೇಷಪ್ರವಾಹದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಪ್ರವಾಹದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಅಪಾಯದ ಸ್ಥಳಗಳಿಗೆ ತೆರಳುವ ಮುನ್ನ ಇರಲಿ ಎಚ್ಚರ

by News Desk
0 comments

ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಕಾಡಿನ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದು, ಅಂತೂ-ಇಂತೂ ಸಾಹಸ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಅರಬೈಲ್ ಘಟ್ಟದ ಬಳಿಯಿರುವ ಜಲಪಾತದಲ್ಲಿ ಸಿಕ್ಕಿಬಿದ್ದವರನ್ನು ಸ್ಥಳಿಯರು ಹಾಗೂ ಇನ್ನಿತರ ಪ್ರವಾಸಿಗರು ರಕ್ಷಿಸಿದ್ದಾರೆ.

ಸೋಮವಾರ ಹುಬ್ಬಳ್ಳಿಯ ಖಾಸಗಿ ಮೇಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸೇರಿ ಕೆಲ ಪ್ರವಾಸಿಗರು ಯಲ್ಲಾಪುರಕ್ಕೆ ಬಂದಿದ್ದರು. ಅವರೆಲ್ಲರೂ ಅರಬೈಲ್ ಕಡೆ ಹೊರಟಿದ್ದು, ಅಲ್ಲಿದ್ದ ಜಲಪಾತದ ಕಡೆ ಹೋಗಿದ್ದರು. ಅಪಾಯದ ಬಗ್ಗೆ ಅರಿವಿದ್ದರೂ ಆ ಪ್ರವಾಸಿಗರು ಜಲಪಾತದ ಹತ್ತಿರ ಹೋಗಿದ್ದು, ಮಳೆ ರಭಸಕ್ಕೆ ಏಕಾಏಕಿ ಜಲಪಾತದ ನೀರು ಹೆಚ್ಚಾಯಿತು. ಇದರಿಂದ ಪ್ರವಾಹ ಸೃಷ್ಠಿಯಾಗಿದ್ದು, ಪ್ರವಾಸಿಗರು ನೀರಿನಲ್ಲಿ ಕೊಚ್ಚಿ ಹೋದರು. ಆ ವೇಳೆ ಅವರಿಗೆ ಮರವೊಂದು ಅಡ್ಡಲಾಗಿ ಸಿಕ್ಕಿದ್ದು, ಅದನ್ನು ಹಿಡಿದು ಜೀವ ಉಳಿಸಿಕೊಂಡರು. ಆದರೆ, ಪ್ರವಾಸಿಗರ ಸುತ್ತಲು ನೀರು ಆವರಿಸಿದ್ದರಿಂದ ಆ ಕ್ಷಣಕ್ಕೆ ಇನ್ನೊಂದು ದಡಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಜಲಪಾತದ ಮೇಲ್ಬಾಗದ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಏಕಾಏಕಿ ನೀರು ಹೆಚ್ಚಳವಾಗಿದೆ. ಮಳೆ ಹಾಗೂ ಪ್ರವಾಹದ ಬಗ್ಗೆ ಅರಿವಿಲ್ಲದೇ ಜಲಪಾತ ವೀಕ್ಷಣೆಗೆ ಹೋದ ಪ್ರವಾಸಿಗರು ಪೇಚಿಗೆ ಸಿಲುಕಿದ್ದಾರೆ. ಈ ದಿನ ಅನೇಕ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸಿದ್ದು, ಅವರೆಲ್ಲರೂ ಅಪಾಯದ ಸನ್ನಿವೇಶವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿಕೊಂಡರು. ಕೆಲ ಗಂಟೆಗಳ ಬಳಿಕ ಜಲಪಾತದ ನೀರು ಕಡಿಮೆಯಾಗಿದ್ದು, ಆಗ ನೀರಿನಲ್ಲಿ ಸಿಲುಕಿದ್ದ ಜನ ದಡ ಸೇರಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".