Home ರಾಜ್ಯ“ಭಕ್ತಿಯ ಮೂಲಕವೇ ಭಗವಂತನ ಅನುಭೂತಿ”: ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್

“ಭಕ್ತಿಯ ಮೂಲಕವೇ ಭಗವಂತನ ಅನುಭೂತಿ”: ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್

ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್

by News Desk
0 comments

ಕುಮಟಾ: . ಭಕ್ತಿಯ ಮೂಲಕವೇ ಭಗವಂತನಿರುವ ಬಗ್ಗೆ ಅನುಭೂತಿ ನಮಗಾಗುತ್ತದೆ. ಚಾತುರ್ಮಾಸ್ಯದಲ್ಲಿ ಸಲ್ಲಿಕೆಯಾಗುವ ಸೇವೆ ಹರಿಹರನಿಗೆ ಸಮರ್ಪಿತವಾಗುತ್ತದೆ ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ೮ನೇ ದಿನದ ಕಾರ್ಯಕ್ರಮದಲ್ಲಿ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು. ಕಷ್ಟ ಬಂದಾಗ ಮಾತ್ರ ದೇವರ ನೆನಪಾಗತ್ತದೆ. ಸುಖವಿದ್ದಾಗ ದೇವರ ನೆನಪೇ ನಮಗಾಗಲ್ಲ. ಬದುಕಿನಲ್ಲಿ ಸಂಕಷ್ಟಗಳು ಎದುರಾಗುತ್ತಲೇ ಇರಬೇಕು. ಆಗ ಮಾತ್ರ ಭಗವಂತನ ಶಕ್ತಿ ಅರಿವಾಗತ್ತದೆ. ಜೀವನದಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಮುಂದಿನ ಜೀವನ ನೆಮ್ಮದಿಯಿಂದ ಕೂಡಿರತ್ತದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇದ್ದಾಗ ಅಲ್ಲಿ ಸಂಶಯಕ್ಕೆ ಅವಕಾಶವಿರುವುದಿಲ್ಲ. ಸಂಸಾರ ಸುಖಮಯವಾಗಿರುತ್ತದೆ. ಅಂತೆಯೇ ಭಗವಂತನದಲ್ಲಿ ಭಕ್ತಿ ಇಲ್ಲದಿದ್ದರೆ ಏನು ಅರ್ಥವಾಗಲ್ಲ. ಭಕ್ತಿಯ ಮೂಲಕವೇ ಭಗವಂತನಿರುವ ಬಗ್ಗೆ ಅನುಭೂತಿ ನಮಗಾಗುತ್ತದೆ. ಚಾತುರ್ಮಾಸ್ಯದಲ್ಲಿ ಸಲ್ಲಿಕೆಯಾಗುವ ಸೇವೆ ಹರಿಹರನಿಗೆ ಸಮರ್ಪಿತವಾಗುತ್ತದೆ. ಈ ಪುಣ್ಯದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು ಧನ್ಯತೆ ಪಡೆಯುವಂತೆ ಹಲವು ದೃಷ್ಟಾಂತಗಳ ಮೂಲಕ ಶ್ರೀಗಳು ಭಕ್ತಿಯ ಬಗ್ಗೆ ಮನೋಜ್ಞವಾಗಿ ವಿವರಿಸಿದರು.

ಚಾತುರ್ಮಾಸ್ಯದ ೮ನೇ ದಿನದ ಕಾರ್ಯಕ್ರಮದಲ್ಲಿ ಮೂರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರು, ಕರ್ಕಿಮಕ್ಕಿ, ತಾರಿಮಕ್ಕಿ ಮತ್ತು ಅಳವಳ್ಳಿ ಹಾಗೂ ಕಲ್ಲಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲ್ ಗ್ರಾಮದ ಸಮಸ್ತ ಊರ ನಾಗರಿಕರು ಗುರು ಪಾದುಕಾ ಪೂಜೆ ಸಲ್ಲಿಸಿದರು. ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮತ್ತು ಸುನೀಲ್ ನಾಯ್ಕ ಸೋನಿ ಕುಟುಂಬದವರು ಶ್ರೀಗಳಿಗೆ ವಿಶೇಷ ಪೂಜಾ ಸೇವೆ ಸಲ್ಲಿಸಿದರು. ಗುರುಗಳು ಫಲಮಂತ್ರಾಕ್ಷತೆ ನೀಡಿ, ಗೌರವಿಸಿದರು. ಕುಮಟಾದ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ವಿನಾಯಕ.ಎಸ್.ನಾಯ್ಕ್ ಸಂಗಡಿಗರು ಅಳವಳ್ಳಿಯಿಂದ ಗುರುಗಳ ಪಾದ ಪೂಜೆ ಸಲ್ಲಿಸಿದರು. ಗುತ್ತಿಗೆದಾರ ಗೋಪಾಲ ಗೋವಿಂದ ನಾಯ್ಕ್ ದಂಪತಿಗಳು ಬೊಗ್ರಿಬೈಲ್ ಅವರು ವೈಯಕ್ತಿಕವಾಗಿ ಗುರುಗಳ ಪಾದ ಪೂಜೆ ನೆರವೇರಿಸಿ, ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು. ಡಾ. ಜಿ. ಜಿ.ಹೆಗಡೆ, ಎಲ್. ಪಿ. ನಾಯ್ಕ್ ಕಾರವಾರ, ಸತ್ಯನಾರಾಯಣ ಮಡಿವಾಳ ಮೂರೂರು, ಚಂದ್ರಶೇಖರ ದೇಶ ಭಂಡಾರಿ ಚಿಪ್ಪಿಹಕ್ಕಲ, ಕೆ. ಜಿ. ಗೌಡ-ಗೌಡ ಸಮಾಜದ ಮುಖ್ಯಸ್ಥರು ಆಗಮಿಸಿದ್ದರು.

 

ಗಜಾನನ ಗೋವಿಂದ ನಾಯ್ಕ್ ಅಳವಳ್ಳಿ, ಜಯಂತ್ ಜಟ್ಟಿ ನಾಯ್ಕ್,,ಸೋಮೇಶ್ವರ್ ನಾಗಪ್ಪ ನಾಯ್ಕ್, ಗಣೇಶ್ ಜಟ್ಟಪ್ಪ ನಾಯ್ಕ್ ಕುಮಟಾ ಇವರು ಗುರು ಸೇವೆಯನ್ನು ಸಲ್ಲಿಸಿದರು. ಮೂರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಉದಯ್ ನಾಯ್ಕ್ ಅವರು ಭಕ್ತರಿಗೆ ಸಿಹಿ ವಿತರಿಸಿ, ಗುರು ಸೇವೆ ಸಲ್ಲಿಸಿದರು. ಮಧ್ಯಾಹ್ನ ಪ್ರಸಾದ ಭೋಜನದಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪುನೀತರಾದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".