2.4K
ಕಾರವಾರ : ನಿನ್ನೆ ಬೆಳಿಗ್ಗೆಯಿಂದ ತುಸು ಬಿಡುವು ನೀಡಿದ್ದ ಮಳೆ ರಾತ್ರಿಯಿಂದ ವ್ಯಾಪಕವಾಗಿ ಸುರಿಯುತ್ತಿದೆ ಆರೆಂಜ್ ಅಲರ್ಟ ಘೋಷಣೆ ಮಾಡಲಾಗಿತ್ತಾದರೂ ಇದೀಗ ಎಲ್ಲೆಡೆ ಪ್ರವಾಹದ ಭೀತಿ ಎದುರಾಗಿದೆ.
ಮಳೆ ಹಿನ್ನಲೆಯಲ್ಲಿ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ರಜೆ ನೀಡಿ ಅಲ್ಲಿನ ಬಿಇಓ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಕರಾವಳಿ ಸೇರಿದಂತೆ ಬಹುತೇಕ ಭಾಗದಲ್ಲಿ ರಾತ್ರಿಯಿಂದ ಎಡಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. ಭಾರಿ ಮಳೆಗೆ ವಾಹನ ಸವಾರರು ಕೂಡ ಸಂಚರಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದನ್ನು ಗಮನಿಸಿದರೆ ರೆಡ್ ಅಲರ್ಟ್‌ಗೆ ತಿರುಗಿರುವಂತೆ ಕಾಣುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ.