ಕುಮಟಾ : ೨೦೨೫ನೇ ಸಾಲಿನ ಜಿಲ್ಲಾಮಟ್ಟದ `ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಕುಮಟಾದ ಮೂವರು ಆಯ್ಕೆಯಾಗಿದ್ದಾರೆ. ಸೆ. ೫ ರಂದು ನಡೆಯುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
೨೭ ವರ್ಷಗಳಿಂದ ಗೋಕರ್ಣ ಶ್ರೀ ಭದ್ರಕಾಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಜನಮೆಚ್ಚುಗೆ ಪಡೆದಿರುವ ಗೋಕರ್ಣ ಶ್ರೀ ಭದ್ರಕಾಳಿ ಪ್ರೌಡಶಾಲೆಯ ಮುಖ್ಯಾಧ್ಯಾಪಕ ಚಂದ್ರಶೇಖರ್ ಗೌಡಣ್ಣ ನಾಯಕ್ ದೊರೆ, ಉಪ್ಪಿನಪಟ್ಟಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ೩೨ ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ಯಾಮಲಾ ಸುಬ್ರಾಯ ಹೆಗಡೆ, ಸುಮಾರು ೨೯ ವರ್ಷಗಳ ಕಾಲ ಕುಮಟಾ ಹೆಬ್ಬೈಲದ ಹುಣಸೆಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಕುಮಟಾ ತಾರಿಬಾಗಿಲ ಸ.ಕಿ.ಪ್ರಾ ಶಾಲೆ ಶಿಕ್ಷಕರಾಗಿ ವರ್ಷಗಳಿಂದ ೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಷಾಬಾಯಿ ಜಿ. ನಾಯ್ಕ ಇವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾಗಿದ್ದಾರೆ.

ಚಂದ್ರಶೇಖರ್ ಗೌಡಣ್ಣ ನಾಯಕ್ ದೊರೆ ಅವರು ಕುಮಟಾ ತಾಲೂಕಾ ಗಣಿತ ಸಂಘದ ಅಧ್ಯಕ್ಷರಾಗಿ, ಕುಮಟಾ ತಾಲೂಕಿನ ಕರ್ನಾಟಕ ಮಾಧ್ಯಮಿಕ ಶಾಲಾ ಶಿಕ್ಷರ ಸಂಘದ ಉಪಾಧ್ಯಕ್ಷರಾಗಿ, ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾಗಿ, ಉತ್ತರ ಜಿಲ್ಲಾ ಮಾಧ್ಯಮಿಕ ನೌಕರರ ಪತ್ತಿನ ಸಹಕಾರ ಸಂಘ ಬ್ಯಾಂಕ್ ಹೊನ್ನಾವರ ಇದರ ಉಪಾಧ್ಯಕ್ಷರಾಗಿ, ಉತ್ತರ ಕನ್ನಡ ಜಿಲ್ಲಾ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾ ಘಟಕದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರೆ, ಶ್ಯಾಮಲಾ ಸುಬ್ರಾಯ ಹೆಗಡೆಯವರು ಸಾಂಸ್ಕೃತಿಕವಾಗಿ ಆಸಕ್ತಿ ಹೊಂದಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ತಮ್ಮ ಶಾಲಾ ಮಕ್ಕಳಿಗೂ ಧಾರೆಯೆರೆದಿದ್ದಾರೆ. `ವಿನಯ ಸ್ಮೃತಿ’ ಪ್ರಶಸ್ತಿ, ಯುವಜನ ಮೇಳ ಸೇರಿ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಉಷಾಬಾಯಿ ಜಿ. ನಾಯ್ಕ ಕುಮಟಾ ತಾರಿಬಾಗಿಲ ಸ.ಕಿ.ಪ್ರಾ ಶಾಲೆ ಶಿಕ್ಷಕರಾಗಿ ವರ್ಷಗಳಿಂದ ೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ತರಗತಿಯಲ್ಲಿ ನಾವಿನ್ಯತೆ ಚಟುವಟಿಕೆ ಆಧಾರಿತ ಪಾಠ ಬೋಧನೆಯಲ್ಲಿ ಹೆಸರಾಗಿದ್ದಾರೆ. ಸಾಂಸ್ಕೃತಿಕ ವಿಭಾಗದಲ್ಲಿಯೂ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಶಾಲೆಗೆ ಕೀರ್ತಿ ತರುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಎಲ್ಲರಿಗೂ ಕುಮಟಾ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.