Home ವಿಶೇಷಸೆ.18 ರಿಂದ ಕುಮಟಾದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ

ಸೆ.18 ರಿಂದ ಕುಮಟಾದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ

ಐದು ದಿನಗಳ ಕಾಲ‌ ವಿಶೇಷ ಮಳಿಗೆಗಳು ಲಭ್ಯ : ಹತ್ತಾರು ವೈವಿದ್ಯ

by News Desk
0 comments

ಕುಮಟಾ : ಸಣ್ಣ ಉದ್ಯಮಿದಾರರಿಗೆ ಹಾಗೂ ಗೃಹೋತ್ಪನ್ನಗಳಿಗೆ ಪ್ರೋತ್ಸಾಹನೀಡುವ ದಿಶೆಯಲ್ಲಿ ಹಾಗೂ ವಿವಿಧೆಡೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕುಮಟಾ ಮತ್ತು ಬೆನಕ ಇವೆಂಟ್ಸ್ ಕುಂದಾಪುರ ಜಂಟಿಯಾಗಿ ಕುಮಟಾ ಮಣಕಿ ಮೈದಾನದಲ್ಲಿ ಸೆ.18 ರಿಂದ 22ರ ವರೆಗೆ ಐದು ದಿನಗಳ ಕಾಲ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಆಯೋಜಿಸಿದೆ. ಕಮಟಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೋಟರಿ ಉಪಾಧ್ಯಕ್ಷ ಗುರುರಾಜ ಶೆಟ್ಟಿ ವಿನಂತಿಸಿದರು.

ಕುಮಟಾದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದಸರಾ ಹಬ್ಬದ ಪ್ರಯುಕ್ತ ಈ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಆಯೋಜಿಸಲಾಗಿದೆ. ದೇಶೀಯತೆಯನ್ನು ಮರುಕಟ್ಟೆ ಹೆಸರಿನಲ್ಲಿ ಬಿಟ್ಟುಕೊಡಬಾರದು. ದೇಸಿ ತಿಂಡಿ, ತಿನಿಸು, ಉಡುಗೆಗಳು ಪ್ರದರ್ಶನಕ್ಕೆ ಸೀಮಿತವಾಗದೆ ಜೀವನದ ಭಾಗಬೇಕು ಎಂಬ ದೃಷ್ಟಿಯಿಂದ ಕುಮಟಾದಲ್ಲಿ ಐದು ದಿನಗಳ ಕಾಲ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಉಚಿತ ಪ್ರವೇಶವಿದ್ದು, ಐದು ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಸ್ಟಾಲ್‌ಗಳು ತೆರೆದಿರುತ್ತವೆ ಎಂದು ಅವರು ವಿವರಿಸಿದರು.

ರೋಟರಿ ಖಜಾಂಚಿ ಗುರುಪ್ರಸಾದ ಕಾಮತ್ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ನೈಸರ್ಗಿಕ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು, ದೇಶೀಯ ಆಹಾರ, ಸಾವಯವ ಉತ್ಪನ್ನಗಳು, ಸಿರಿ ಧಾನ್ಯಗಳು, ಇಳಕಲ್ ಸೀರೆಗಳು, ಮಕ್ಕಳ ಉಡುಪುಗಳು, ಹಪ್ಪಳ ಮತ್ತು ಸಂಡಿಗೆ, ಜಿಲೇಬಿ ಮತ್ತು ವಿವಿಧ ಹೋಳಿಗೆಯ ಹಲವು ಸ್ಟಾಲ್‌ಗಳು ಆಯುರ್ವೇದ ಉತ್ಪನ್ನಗಳು, ಚೆನ್ನಪಟ್ಟಣದ ಬೊಂಬೆಗಳು ಸೇರಿ ನಮ್ಮ ಉತ್ತಮ ಬದುಕಿನ ಆಹಾರ, ಜೀವನ ಶೈಲಿಗೆ ಅನುಗುಣವಾಗುವ ಎಲ್ಲಾ ವಿಧದ ದೇಶಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಅದಲ್ಲದೆ ಜಿಲೇಬಿ ಮತ್ತು ಹೋಳಿಗೆಯ ಹಲವು ಸ್ಟಾಲ್ ಗಳು ಲಭ್ಯವಾಗಲಿದೆ. ರುಚಿರುಚಿಯಾದ ತಿಂಡಿ ತಿನಿಸುಗಳು ಮತ್ತು ಸಾವಯವ ಪದಾರ್ಥಗಳು ವಿವಿಧ ಮಾರಾಟ ಮಳಿಗೆಗಳಲ್ಲಿ ಸಿಗಲಿದೆ. ಹಲಸು ಮತ್ತು ಮಾವಿನಹಣ್ಣಿನ ಗಿಡಗಳು, ಹೂವಿನ ಗಿಡಗಳು, ಗಡ್ಡೆಗಳು ತರಕಾರಿ ಬೀಜಗಳು ವಿಶೇಷ ಆಕರ್ಷಣೆಯಾಗಿ ಲಭ್ಯವಾಗಲಿದೆ ಎಂದು ವಿವರಿಸಿದರು.

ಬೆನಕ ಇವೆಂಟ್ಸ್ನ ಗಣೇಶ ಶೆಟ್ಟಿ ಮಾತನಾಡಿ, ಕುಮಟಾದಲ್ಲಿ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳ ಆಯೋಜಿಸಿದ್ದು, ಈ ಮೇಳವು ಸ್ವಾವಲಂಬನೆಯ ಭವ್ಯ ಆಚರಣೆಯಾಗಿದೆ. ನಮ್ಮ ಸಂಪ್ರದಾಯಿಕ ತಿನಿಸುಗಳ ಸವಿ ಉಣಬಡಿಸುವ ಯತ್ನವಾಗಿದೆ. ನಮ್ಮತನ ಉಳಿಸಿಕೊಳ್ಳುವ ಕಾರ್ಯವೂ ಇಲ್ಲಿದೆ. ನಮ್ಮ ದೇಶದಲ್ಲೇ ಹೆಮ್ಮೆಯಿಂದ ತಯಾರಿಸಲಾದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ವಿವಿಧ ಮಳಿಗೆಗಳು ಮೇಳದಲ್ಲಿ ಸಾರ್ವಜನಿಕರ ಗಮನ ಸೆಳೆಯಲಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ನ ಅತುಲ್ ಕಾಮತ್ ಇದ್ದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".