Home ಜಿಲ್ಲೆದಿನಕರ ಶೆಟ್ಟಿಯವರ ಗೆಲುವನ್ನು ಎತ್ತಿಹಿಡಿದ ಹೈಕೋರ್ಟ

ದಿನಕರ ಶೆಟ್ಟಿಯವರ ಗೆಲುವನ್ನು ಎತ್ತಿಹಿಡಿದ ಹೈಕೋರ್ಟ

ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣ ಖುಲಾಸೆ : ಶಾಸಕರಿಂದ ಮಾಹಿತಿ.

by News Desk
0 comments

ಕುಮಟಾ : 2023 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 673 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ, ಶಾಸಕರಾಗಿದ್ದ ದಿನಕರ ಶೆಟ್ಟಿಯವರು ಕ್ಷೇತ್ರದ ಅಭಿವೃದ್ಧಿಗೆ ಮೂರನೇ ಬಾರಿಗೆ ಟೊಂಕ ಕಟ್ಟಿ ನಿಂತಿದ್ದರು.

ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ 59,966 ಮತಗಳನ್ನು ಪಡೆದು 673 ಮತಗಳಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ (59,293 ಮತ ) ವಿರುದ್ಧ ಗೆಲುವು ಸಾಧಿಸಿದರು.

ಆದರೆ ಚುನಾವಣಾ ಮತ ಎಣಿಕೆಯಲ್ಲಿಯಲ್ಲಿ ಅಕ್ರಮ ನಡೆದಿದೆ ಎಂಬುದಾಗಿ ಕೋರ್ಟ ಮೆಟ್ಟಿಲೇರಿದ್ದ ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕಾನೂನಿನ ಹೋರಾಟಕ್ಕೆ ಮುಂದಾಗಿದ್ದರು. ಇದೀಗ ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಶಾಸಕ ದಿನಕರ ಶೆಟ್ಟಿಯವರ ಗೆಲುವನ್ನು ಎತ್ತಿ ಹಿಡಿದಿದೆ. ಚುನಾವಣಾ ಮತ ಎಣಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುದಾಗಿ ತೀರ್ಮಾನಿಸಿರುವ ಹೈಕೋರ್ಟ ಸೂರಜ್ ನಾಯ್ಕ ಸೋನಿಯವರು ದಾಖಲಿಸಿದ್ದ ಪ್ರಕರಣವನ್ನು ಖುಲಾಸೆಗೊಳಿಸಿದೆ.

ಈ ತೀರ್ಪಿನಿಂದಾಗಿ ಶಾಸಕ ದಿನಕರ ಶೆಟ್ಟಿಯವರು ಜನಾನುರಾಗಿ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. 2023 ರ ಚುನಾವಣಾ ಮತ ಎಣಿಕೆ ನಂತರ ಇಲ್ಲ ಸಲ್ಲದ ಊಹಾಪೋಹಗಳನ್ನು ಕ್ಷೇತ್ರದಲ್ಲಿ ಹರಿಬಿಟ್ಟು, ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುವ ಕಾರ್ಯವೂ ನಡೆದಿತ್ತಾದರೂ, ಇದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಂತಾಗಿದೆ ಎಂದು ಶಾಸಕರು ಪತ್ರಿಕೆಗೆ ತಿಳಿಸಿದ್ದಾರೆ.

ಶಾಸಕ ದಿನಕರ ಶೆಟ್ಟಿ ಎರಡು ಸಲ ಬಿಜೆಪಿಯಿಂದ, ಒಮ್ಮೆ ಜೆಡಿಎಸ್‌ನಿಂದ, ಒಟ್ಟೂ ಮೂರು ಬಾರಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ಶಾಸಕರಾಗಿ ಗೆಲುವು ಸಾಧಿಸಿದವರಾಗಿದ್ದಾರೆ.

ಏನಿದು ಪ್ರಕರಣ..?

2023 ರಲ್ಲಿ ಆರಂಭಿಕ ಹಂತದ ಮತ ಎಣಿಕೆಯಲ್ಲಿ ಜೆಡಿಎಸ್-ಬಿಜೆಪಿ ಸಮಬಲದ ಮುನ್ನಡೆ ಸಾಧಿಸುತ್ತಾ ನಡೆದು 14 ಹಾಗೂ 15ನೇ ಸುತ್ತಿನ ಎಣಿಕೆಯಲ್ಲಿ ಜೆಡಿಎಸ್ ಕೊಂಚ ಮುನ್ನಡೆ ಕಂಡಿತ್ತು. ಜೆಡಿಎಸ್ ಕಾರ್ಯಕರ್ತರು ಇನ್ನೇನು ಸಂಭ್ರಮಾಚರಣೆಗೆ ತಯಾರಿ ನಡೆಸುತ್ತಿರುವಾಗ, ಎರಡು ಮತ ಯಂತ್ರಗಳ ತಾಂತ್ರಿಕ ತೊಂದರೆಯಿಂದಾಗಿ ವೋಟಿಂಗ್ ಸ್ಲಿಪ್ ಮರು ಎಣಿಕೆ ಮಾಡ ಬೇಕಿದೆ ಎಂಬ ಮಾಹಿತಿ ಬಂದಿದ್ದು, ಅದು ಕೊಂಚ ಸಮಯ ತೆಗೆದುಕೊಂಡಿದ್ದರಿಂದ ಫಲಿತಾಂಶ ಘೋಷಣೆ ವಿಳಂಬವಾಗಿತ್ತು.

ಮತ ಎಣಿಕೆಯಲ್ಲಿ ಅನ್ಯಾಯವಾಗಿದೆ ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕೋರ್ಟ ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಕರ್ನಾಟಕ ಉಚ್ಚನ್ಯಾಯಾಲಯ ಅವರ ಪ್ರಕರಣವನ್ನು ಖುಲಾಸೆಗೊಳಿಸಿದೆ. ಶಾಸಕ ದಿನಕರ ಶೆಟ್ಟಿಯವರಿಗೆ ಅದೃಷ್ಟ ಮತ್ತೊಮ್ಮೆ ಕೈಹಿಡಿದಿದೆ.

ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ದಿ. ಮೋಹನ ಶೆಟ್ಟಿ ವಿರುದ್ಧ ದಿನಕರ ಶೆಟ್ಟಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾಗ ಕೇವಲ 20 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಆ ಸಂದರ್ಭದಲ್ಲಿಯೂ ಮೋಹನ ಶೆಟ್ಟಿಯವರು ಕೋರ್ಟ ಮೆಟ್ಟಿಲೇರಿದ್ದರಾದರೂ ದಿನಕರ ಶೆಟ್ಟಿಯವರಿಗೆ ಗೆಲುವು ಲಭಿಸಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಕೋರ್ಟಿನ ಈ ತೀರ್ಮಾನದಿಂದಾಗಿ, ಕಳೆದ ಎರಡುವರೆ ವರ್ಷಗಳಿಂದ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದ್ದು, ಶಾಸಕ ದಿನಕರ ಶೆಟ್ಟಿ ಅವರ ಗೆಲುವಿಗೆ ಮತ್ತೊಮ್ಮೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

 

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".