Home ಮಾಹಿತಿಉಚಿತ ಪಿ.ಯು ಶಿಕ್ಷಣಕ್ಕಾಗಿ ‘ಪ್ರತಿಭಾ ಸ್ಪಂದನ’ ಪರೀಕ್ಷೆ

ಉಚಿತ ಪಿ.ಯು ಶಿಕ್ಷಣಕ್ಕಾಗಿ ‘ಪ್ರತಿಭಾ ಸ್ಪಂದನ’ ಪರೀಕ್ಷೆ

ವಿಧಾತ್ರಿ ಅಕಾಡೆಮಿಯ ಸರಸ್ವತಿ ಪಿ.ಯು ಕಾಲೇಜಿನಲ್ಲಿ ನ.9 ಕ್ಕೆ ಪರೀಕ್ಷೆ

by News Desk
0 comments

ಕುಮಟಾ : ಉತ್ತರಕನ್ನಡದ ಪ್ರತಿಭೆಗಳನ್ನು ಉತ್ತರಕನ್ನಡದಲ್ಲಿಯೇ ಉಳಿಸುವ ಪ್ರಯತ್ನದಲ್ಲಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನವರು, ವಿಧಾತ್ರಿ ಅಕಾಡೆಮಿ ಮಂಗಳೂರಿನವರ ಜೊತೆಗೆ ಸೇರಿ ಕುಮಟಾದಲ್ಲಿ ಸರಸ್ವತಿ ಪಿ.ಯು ಕಾಲೇಜನ್ನು ನಡೆಸುತ್ತಾ ಬಂದಿದ್ದು ಭಾರತೀಯ ಸಂಸ್ಕೃತಿಯನ್ನು ಉಳಿಸುವ, ಸಂಸ್ಕಾರಯುತ ಶಿಕ್ಷಣದ ಮೂಲಕ ಜನಮನ್ನಣೆ ಗಳಿಸುವ ಜೊತೆಗೆ ಈಗಾಗಲೇ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಮ್ಮೆ ಸರಸ್ವತಿ ಪಿ.ಯು ಕಾಲೇಜಿನದ್ದು.

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗೆ ಮಂಗಳೂರಿನ ವಿಧಾತ್ರಿ ಅಕಾಡೆಮಿ ಜೊತೆಯಾಗಿ ಐದು ವಸಂತಗಳು ಸಂದಿವೆ. ಯಶಸ್ವಿ ಐದನೇ ವರ್ಷದ ಸಫಲತೆಯ ಸಂತಸದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ಕಲ್ಪಿಸುವ ದೃಷ್ಟಿಯಿಂದ ‘ಪ್ರತಿಭಾ ಸ್ಪಂದನ’ ಪರೀಕ್ಷೆಯನ್ನು ನ.‌೯ ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾತ್ರಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಗೆ ನೋಂದಾವಣಿಗೆ ಈ ಲಿಂಕ್ ಒತ್ತಿ. https://docs.google.com/forms/d/18DdYlAEZrOnRRIu5FK2JqupojT34iWG2D-dZ3nT7eEs/viewform?edit_requested=true

ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಸಮರ್ಥರಾಗಿದ್ದು, ಕಲಿಯುವ ಉತ್ಕಟ ಇಚ್ಛೆ ಹೊಂದಿರುವ ಆರ್ಥಿಕವಾಗಿ ಸಬಲರಲ್ಲದ 10 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ವಿಧಾತ್ರಿ ಅಕಾಡೆಮಿ ಯೋಜನೆ ರೂಪಿಸಿದೆ. ಶೈಕ್ಷಣಿಕವಾಗಿ ಸಾಧನೆ ಮಾಡಿದ 6 ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಸಾಧನೆ ಮಾಡಿದ ೨ ಕ್ರೀಡಾ ಸಾಧಕರು ೨ ಹೀಗೆ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಜೊತೆಯಲ್ಲಿ ಪ್ರತಿಭಾವಂತ ಅರ್ಹ ಮೊದಲ 25 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ನಿರ್ಭಂಧವಿಲ್ಲದಂತೆ, ಅವರ ಪರೀಕ್ಷಾ ಫಲಿತಾಂಶ ಆಧರಿಸಿ ವಿವಿಧ ಹಂತದ ಶಿಷ್ಯವೇತನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸ್ಥರದ ಹಾಗೂ ಎಲ್ಲಾ ವರ್ಗದವರೂ ಈ ಸೌಲಭ್ಯಕ್ಕಾಗಿ ನೊಂದಾವಣೆ ಮಾಡಿಕೊಂಡು ಪರೀಕ್ಷೆ ಎದುರಿಸಬಹುದು ಎಂದು ಅವರು ವಿವರಿಸಿದ್ದಾರೆ.

ನ. 9 ರಂದು ಬೆಳಗ್ಗೆ 11:00 ಕ್ಕೆ ಕುಮಟಾದ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಲಿಖಿತ ಪರೀಕ್ಷೆ ಏರ್ಪಡಿಸಲಾಗಿದೆ. ಪರೀಕ್ಷೆಗೆ ಹಾಜರಾಗುವವರು ಬೆಳಗ್ಗೆ 10:00 ಗಂಟೆಗೆ ಪರೀಕ್ಷಾ ಕೇಂದ್ರ ತಲುಪುವುದು. ಈ ಸಮಯಕ್ಕೆ ಹೊಂದಿಕೊಂಡು ಹೊನ್ನಾವರ, ಅಂಕೋಲಾ, ಕುಮಟಾ ಬಸ್ ನಿಲ್ದಾಣದಿಂದ ಕಾಲೇಜಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಂಡು ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿಷ್ಯವೇತನ ಪಡೆಯಲು ಬಯಸುವ ಎಲ್ಲಾ ವಿದ್ಯಾರ್ಥಿಗಳೂ ಪ್ರತಿಭಾ ಸ್ಪಂದನದ ಲಿಖಿತ ಪರೀಕ್ಷೆ ಎದುರಿಸಲೇಬೇಕು. ಆ ಬಗ್ಗೆ ಗೂಗಲ್ ಫಾರಂ ಹಂಚಲಾಗಿದೆ. ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುವುದು.

ಆರ್ಥಿಕವಾಗಿ ಸಬಲರಲ್ಲದವರು ಪೂರಕ ದಾಖಲೆಗಳನ್ನು ಒದಗಿಸಬೇಕು. ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳು ಅಗತ್ಯ ಸರ್ಟಿಫಿಕೇಟ್ ಗಳನ್ನು ಸಂದರ್ಶನದ ಸಂದರ್ಭದಲ್ಲಿ ಒದಗಿಸಬೇಕು. ಈ ಅವಕಾಶ ಪಡೆಯಲು ಯಾವುದೇ ಶಿಪಾರಸ್ಸುಗಳಿಗೆ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದ ಅವರು, ಹೆಚ್ಚಿನ ಮಾಹಿತಿಗಾಗಿ 9972663855, 9972664155 ಗೆ ಸಂಪರ್ಕಿಸಲು ತಿಳಿಸಿದ್ದಾರೆ.

ಪರೀಕ್ಷೆಗೆ ನೋಂದಾವಣಿಗೆ ಈ ಲಿಂಕ್ ಒತ್ತಿ. https://docs.google.com/forms/d/18DdYlAEZrOnRRIu5FK2JqupojT34iWG2D-dZ3nT7eEs/viewform?edit_requested=true

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".