284
ಕುಮಟಾ : 2025-26ನೇ ಸಾಲಿನ ಕುಮಟಾ ವಕೀಲರ ಸಂಘದ ಚುನಾವಣೆ ನಡೆದಿದ್ದು, ಸಂಘದ ಪ್ರಮುಖ ಐದು ಹುದ್ದೆಗಳಿಗೂ ಮಹಿಳಾ ವಕೀಲರು ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದುದು ಕುಮಟಾ ವಕೀಲರ ಸಂಘದಲ್ಲಿ ಇತಿಹಾಸ ಸೃಷ್ಟಿಯಾಗಿದೆ.
ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಮಮತಾ ಆರ್. ನಾಯ್ಕ, ಉಪಾಧ್ಯಕ್ಷರಾಗಿ ವಸುಧಾ ಶಾಸ್ತ್ರಿ, ಕಾರ್ಯದರ್ಶಿಯಾಗಿ ಮೀನಾಕ್ಷಿ ನಾಯ್ಕ, ಖಜಾಂಚಿಯಾಗಿ ಶಾಂತಿಕಾ ನಾಯ್ಕ, ಹಾಗೂ ಸಹಕಾರ್ಯದರ್ಶಿಯಾಗಿ ಚಂದ್ರಿಕಾ ಪಟಗಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹುದ್ದೆಗೆ ಆಯ್ಕೆಯಾಗಿರುವವರು ನಮ್ಮ ಮೇಲೆ ವಿಶ್ವಾಸವಿಟ್ಟು ಒಗ್ಗಟ್ಟಿನಿಂದ ಬೆಂಬಲಿಸಿದ ವಕೀಲರ ಸ್ನೇಹಿತರಿಗೆ ಕೃತಜ್ಞರು. ಸಂಘದ ಅಭಿವೃದ್ಧಿ, ವಕೀಲರ ಕಲ್ಯಾಣ ಮತ್ತು ಸೇವೆ ಕಾರ್ಯಗಳಿಗೆ ಆದ್ಯತೆ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಹಿಳಾ ವಕೀಲರ ಸಮೂಹ ನಾಯಕತ್ವ ಕುಮಟಾ ವಕೀಲರ ಸಂಘದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ್ದು, ಕುಮಟಾ ವಕೀಲರ ಸಂಘದ ಈ ನಿರ್ಣಯಕ್ಕೆ ಜಿಲ್ಲೆಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.