ಅಂಕೋಲಾ : ವಿಧಾತ್ರಿ ಅಕಾಡೆಮಿ ಮಂಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇವೆ ಆರಂಭಿಸಿ ಯಶಸ್ವಿ ಐದು ವರ್ಷಗಳು ಪೂರೈಸಿದ್ದು ಜಿಲ್ಲೆಯ ಜನರ ಸಹಕಾರಕ್ಕೆ ಋಣಿಯಾಗಿ ಜಿಲ್ಲೆಗಾಗಿ ಏನಾದರೂ ಮಾಡಬೇಕು ಎಂಬ ಆಕಾಂಕ್ಷೆಯಿಂದ ಜನರು ಉತ್ತರ ಕನ್ನಡ ಜಿಲ್ಲೆಯತ್ತ ತಿರುಗಿ ನೋಡುವಂತಾಗಬೇಕು ಎಂದು ಜಿಲ್ಲೆಯ ವಿಶೇಷತೆಯನ್ನು ಪರಿಚಯಿಸುವ ಕೆಲಸವನ್ನು
ಮಾಡುತ್ತಿದೆ. ಕಳೆದ ವರ್ಷ ಕುಮಟಾ, ಹೊನ್ನಾವರ ತಾಲೂಕುಗಳ ಮೇಲೆ ಬೆಳಕು ಚೆಲ್ಲಿರುವ ಸಂಸ್ಥೆ ಈ ವರ್ಷ ಅಂಕೋಲೆಯನ್ನು ಪರಿಚಯಿಸುವ ದಿಶೆಯಲ್ಲಿ ಕಾರ್ಯಪೃವೃತ್ತರಾಗಿದ್ದು
ಡಿಸೆಂಬರ್ 14 ರಂದು ಸಂಜೆ 4 ಗಂಟೆಗೆ ಅಂಕೋಲೆಯ ಐತಿಹಾಸಿಕ, ಪ್ರಾಕೃತಿಕ, ಭೌಗೋಳಿಕ ವಿಶೇಷತೆ ಹೊಂದಿರುವ ವಿಡಿಯೋ ಅನಾವರಣ, ಅಂಕೋಲೆಯ ಅಂತರ್ಯದ ಅನಾವರಣ ಅರಳು ಕಾರ್ಯಕ್ರಮ ಮತ್ತು ಖ್ಯಾತ ವಾಗ್ಮಿಗಳ ಮಥನ ಮಂಜರಿ ಕಾರ್ಯಕ್ರಮ ನಡೆಯಲಿದೆ.

ತಹಸೀಲ್ದಾರ ಡಾ.ಚಿಕ್ಕಪ್ನ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ಭಟ್ಟ ವೀಡಿಯೊ ಅನಾವರಣ ಮಾಡಲಿದ್ದಾರೆ, ಕೊಂಕಣ ಎಜ್ಯಕೇಶನ್ ಟ್ರಸ್ಟಿನ ಕಾರ್ಯದರ್ಶಿ ಮುರಳೀಧರ ಪ್ರಭು ಅಧ್ಯಕ್ಷತೆ
ವಹಿಸಲಿದ್ದಾರೆ.
ವಿಡಿಯೋ ಅನಾವರಣದ ನಂತರ ಬಾಂಧವ್ಯದ ಬಂಧ ಕಳಚಲು ಕಾರಣರು ಯಾರು ಕಿರಿಯರೋ? ಹಿರಿಯರೋ? ಎನ್ನುವ ಕುರಿತಂತೆ ಜಿಲ್ಲೆಯ ವಾಗ್ಮಿಗಳಿಂದ ಚರ್ಚೆ ನಡೆಯಲಿದ್ದು ಮಥನ ಮಂಜರಿಯಲ್ಲಿ ರವೀಂದ್ರ ಭಟ್ಟ ಸೂರಿ, ವಕೀಲ ನಾಗರಾಜ ನಾಯಕ, ಶಿಕ್ಷಕ ಮಂಜುನಾಥ ಬರ್ಗಿ, ರಾಜೇಶ ನಾಯಕ ಸೂರ್ವೆ, ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ, ಉಪನ್ಯಾಸಕ ಪ್ರಶಾಂತ ಹೆಗಡೆ, ಸಾಹಿತಿ ತಿಗಣೇಶ ಮೊದಲಾದವರು ಚರ್ಚೆ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಜರಿರುವಂತೆ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಸತ್ವಾಧಾರ ಫೌಂಡೇಶನ್ ನ ಗಣೇಶ ಜೋಶಿ, ರಂಗ ಸಾರಸ್ವತದ ಚಿದಾನಂದ ಭಂಡಾರಿ ವಿನಂತಿಸಿದ್ದಾರೆ.