Home ಜಿಲ್ಲೆಜೀವನಕ್ಕೆ ಭೈರವಿ ಹಾಡಿದ ಡಾ. ಅಶೋಕ ಹುಗ್ಗಣ್ಣ

ಜೀವನಕ್ಕೆ ಭೈರವಿ ಹಾಡಿದ ಡಾ. ಅಶೋಕ ಹುಗ್ಗಣ್ಣ

ಇಹಲೋಕ ತ್ಯಜಿಸಿದ ಸಂಗೀತ ಗುರು - ಗಣ್ಯರ ಕಂಬನಿ

by News Desk
0 comments

ಖ್ಯಾತ ಹಿಂದುಸ್ತಾನಿ ಸಂಗೀತ ಗಾಯಕರು, ಸಂಗೀತ ಗುರುಗಳೂ ಆಗಿದ್ದ “ಡಾ. ಅಶೋಕ್ ಹುಗ್ಗಣ್ಣ” ಅವರು ತಮ್ಮ ಸಂಗೀತ ಸೇವೆ ನಿಲ್ಲಿಸಿ ಇಂದು ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ 64 ನೇ ವಯಸ್ಸಿನಲ್ಲಿ ಪತ್ನಿ, ಪುತ್ರ ಮತ್ತು ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ.

ಅಶೋಕ ಹುಗ್ಗಣ್ಣ ಅವರು ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಬಹುಕಾಲ ಕೆಲಸ ಮಾಡಿದ್ದು, ಜಿಲ್ಲೆಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಿದ್ದರು. ಹಲವಾರು ಪ್ರಸಿದ್ಧ ಶಿಷ್ಯರನ್ನು ತರಬೇತಿಗೊಳಿಸಿದ್ದರು. ಸಂಗೀತದಲ್ಲಿ ಎಂ.ಎ, ಸಂಗೀತ ರತ್ನ ಮತ್ತು ಸಸ್ಯ ಶಾಸ್ತ್ರದಲ್ಲಿ ಎಂಎಸ್‌ಸಿ ಪದವಿದರರಾದ ಹುಗ್ಗಣ್ಣ ಅವರು ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಕುಟುಂಬದವರಾದ ಯರಗುಪ್ಪಿ ಕುಟುಂಬದಿಂದ ಬಂದವರು.

ರಾಜಗುರು ಅವರ ಶಿಷ್ಯರಾಗಿ ಸಂಗಮೇಶ ಗುರವ ಬಳಿ ಅಧ್ಯಯನ ಮಾಡಿದ ಹುಗ್ಗಣ್ಣವರು ಪಿಎಚ್‌ಡಿ ಪದವಿದರರು. ಆಕಾಶವಾಣಿ, ದೂರದರ್ಶನ ಕಲಾವಿದರು. ದೇಶದ ಪ್ರತಿಷ್ಠ ವೇದಿಕೆಯಲ್ಲಿ ಹಾಡಿದವರಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಹಂಪಿ ವಿವಿ ಸಂಗೀತ ವಿದ್ಯಾರ್ಥಿಗಳಿಗೆ ಸಂಗೀತ ಮಾರ್ಗದರ್ಶಕರಾಗಿ ಕೆಲಸ ಮಾಡಿದ ಇವರು ನಿವೃತ್ತಿಯ ನಂತರ ಧಾರವಾಡದಲ್ಲಿ ನೆಲೆಸಿದ್ದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".