852
ಕುಮಟಾ : ಗುರುವಾರ ನಸುಕಿನಲ್ಲಿ ಚಿತ್ರದುರ್ಗ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಸಿಲುಕಿಕೊಂಡಿದ್ದ ಕುಮಟಾದ ಇಬ್ಬರು ಯುವಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಮನೆ ಸೇರಿದ್ದು ತಾಲೂಕಿನಲ್ಲಿ ಸಂತಸ ತಂದಿದೆ.
ತಾಲೂಕಿನ ವಿಜಯ ಹಾಗೂ ಮೇಘರಾಜ ಎಂಬ ಈರ್ವರೂ ಯುವಕರು ಬೆಂಗಳೂರಿನಿಂದ ಕುಮಟಾಕ್ಕೆ ಆಗಮಿಸುತ್ತಿದ್ದರು. ಬಸ್ ಗೆ ಬೆಂಕಿ ಹೊತ್ತಿಕೊಂಡಾಗ ಬಸ್‌ನ ಗ್ಲಾಸ್ ಒಡೆದು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಗ್ಲಾಸ್ ಒಡೆದು ಹೊರಬರುವ ಸಂದರ್ಭದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕುಮಟಾದ ಚಿತ್ರಗಿಯ ಮಿಡ್ಲ್ ಗುಂದ ನಿವಾಸಿ ವಿಜಯ ದತ್ತ ಭಂಡಾರಿ (೨೭) ಹಾಗೂ ಕುಮಟಾ ಅಳ್ವೆದಂಡೆ ನಿವಾಸಿ ಮೇಘರಾಜ ಪಾರಾದ ಯುವಕರಾಗಿದ್ದಾರೆ. ಅವರು ಗುರುವಾರ ಮನೆಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಹಿರಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಇವರು ಮರಳಿದ್ದಾರೆ.
ಸಾಗರ ಮೂಲದ ಆದಿತ್ಯ ಎಂಬುವರನ್ನೂ ಸೇರಿಸಿಕೊಂಡು, ಬದುಕುಳಿದ ಮೂವರನ್ನೂ ವಿಜಯ ಅವರ ಅಣ್ಣ ಗಜೇಂದ್ರ ಅವರು ಊರಿಗೆ ಕರೆತಂದಿದ್ದಾರೆ.