Home ಮಾಹಿತಿಡಿ. 27 ಹಾಗೂ 28 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ 

ಡಿ. 27 ಹಾಗೂ 28 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ 

by News Desk
0 comments

ಬಡವರ ಪಾಲಿಗೆ ಸಂಜೀವಿನಿಯಾಗಿರುವ ಕೆ.
ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರು ದಿನಾಂಕ 27.12.2025 ಮತ್ತು 28.12.2025 ರಂದು ಕ್ರಮವಾಗಿ ಕೋನಳ್ಳಿ ಮತ್ತು ಹಳಕಾರ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುತ್ತಾರೆ. ಆಸ್ಪತ್ರೆಯ
ಕಿವಿ ಮೂಗು ಗಂಟಲು ತಜ್ಞರಾದ ಡಾ/ವಾಧೀಶ್ ಭಟ್,ಡಾ/ ಶ್ರೀ ಚರಿತಶೆಟ್ಟಿ ಚರ್ಮರೋಗ ತಜ್ಞರು,ಡಾ/ಧನಂಜಯ್ ಕುಮಾರ್, ಶಸ್ತ್ರಚಿಕಿತ್ಸಾ ತಜ್ಞರು, ಎಲುಬು ಮತ್ತು ಕೀಲು ತಜ್ಞರಾದ ಡಾ/ ಶ್ರೀಧೀಶ್ ಕೆ. ಹಾಗೂ ವೈದ್ಯಕೀಯ ತಜ್ಞರಾದ ಡಾ/ಸಂತೋಷ ಹೆಗ್ಡೆ ಇವರುಗಳು ಭಾಗವಹಿಸಲಿರುವರು. ವೈದ್ಯರು ಸೂಚಿಸಿದವರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ, ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಶಿಬಿರದಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಹೃದಯ ರೋಗ, ಕಿವಿ ಮೂಗು ಗಂಟಲು ಪರೀಕ್ಷೆ, ಎಲುಬು ಮತ್ತು ಕೀಲು ಪರೀಕ್ಷೆ, ಬೆನ್ನು ಮೂಳೆ ಪರೀಕ್ಷೆ, ಕ್ಯಾನ್ಸರ್ ಚಿಕಿತ್ಸೆ, ಅಪೆಂಡಿಕ್ಸ್, ಉದುರ ಸಂಬಂಧಿ ಕಾಯಿಲೆಗಳು, ಹರ್ನಿಯಾ, ನರ ಸಂಬಂಧಿ ಕಾಯಿಲೆಗಳ ತಪಾಸಣೆ ನಡೆಸಲಾಗುವುದು.
ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಕುಮಟಾದ ನಾಗರಿಕರು ತೆಗೆದುಕೊಳ್ಳಬೇಕೆಂದು ಶಿಬಿರ ಸಂಘಟಕರಾದ ಕೋನಳ್ಳಿಯ ಹಾಗೂ ಹಳಕಾರ, ಮದ್ಗುಣಿ ಚಿತ್ರಗಿಯ ಸಮಸ್ತ ಗ್ರಾಮಸ್ಥರು, ಸೇವಾ ಭಾರತಿ ಟ್ರಸ್ಟ್ ಕುಮಟಾ, ಶ್ರೀ ಗ್ರಾಮದೇವ ಕಮಿಟಿ, ಕೋನಳ್ಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,
ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಳಕಾರ ಕುಮಟ ಇವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".