Home ಅಂಕಣಧನಾತ್ಮಕತೆ, ಜವಾಬ್ದಾರಿ ಅರಿವು ಮೂಡಿಸಲು ಏನು ಮಾಡಬೇಕು.

ಧನಾತ್ಮಕತೆ, ಜವಾಬ್ದಾರಿ ಅರಿವು ಮೂಡಿಸಲು ಏನು ಮಾಡಬೇಕು.

by Editor
0 comments
ಪಾಲಕರು ಮಕ್ಕಳಲ್ಲಿ ಧನಾತ್ಮಕ ಭಾವನೆ ಒಡಮೂಡಿಸಲು, ಜವಾಬ್ದಾರಿ ಅರಿಯುವ ಬಗ್ಗೆ ಕಲಿಸಲು ಪ್ರಯತ್ನಿಸುವುದು ಸರ್ವೆ ಸಾಮಾನ್ಯ. ಆದರೆ ಅದರಲ್ಲಿ ಎಲ್ಲಾ ಪಾಲಕರು ಯಶಸ್ವಿಯಾಗುತ್ತಾರೆಂದು ಹೇಳಲು ಸಾಧ್ಯವಿಲ್ಲ. ಹಲವರು ಅದರಲ್ಲಿ ಎಡವುದುಂಟು. ಕೆಲವೇ ಕೆಲವರು ಆ ರೀತಿಯ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ಹಾಗಾದರೆ ಮಕ್ಕಳಲ್ಲಿ ಧನಾತ್ಮಕ ಭಾವನೆ ಬೆಳೆಸುವುದು ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಸುವುದು ಹೇಗೆ ಎಂಬುದರ ಬಗ್ಗೆ ಹಲವು ಅಭಿಪ್ರಾಯ ಹಾಗೂ ಮಾಹಿತಿ ಈ ಲೇಖನದಲ್ಲಿದೆ.
ಸಕಾರಾತ್ಮಕ ರೋಲ್ ಮಾಡೆಲ್ ಆಗಿರಿ.
ಮಕ್ಕಳು ಯಾವಾಗಲೂ ಉದಾಹರಣೆಯ ಮೂಲಕ ಉತ್ತಮವಾಗಿ ಕಲಿಯುತ್ತಾರೆ, ಆದ್ದರಿಂದ ನೀವು ಅವರಲ್ಲಿ ನೋಡಲು ಬಯಸುವ ಉತ್ತಮ ನಡವಳಿಕೆಯ ಉದಾಹರಣೆಯನ್ನು ನೀವೂ ಪಾಲಿಸುವುದು  ಪೋಷಕರಾದವರಿಗೆ ಅವಶ್ಯಕ. ಕಷ್ಟಕರವಾದ ಸಮಸ್ಯೆಯನ್ನು ಸಮೀಪಿಸುವಾಗ ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯವನ್ನು ಪ್ರದರ್ಶಿಸುವುದು ಹಾಗೂ ಇತರ ನಡವಳಿಕೆಗಳಿಂದಲೂ ಮಕ್ಕಳು ಹೆಚ್ಚು ಹೆಚ್ಚು ಕಲಿಯುತ್ತಾರೆ.
ಹಣದ ಕಡೆಗೆ ಜವಾಬ್ದಾರಿಯನ್ನು ಬೆಳೆಸಿಕೊಳ್ಳಲಿ.
ನಿಮ್ಮ ಮಗು ಹಣ ಮತ್ತು ಖರ್ಚಿನ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಹಣವಿಲ್ಲದಿರುವಾಗ ಉಂಟಾಗುವ ಅಪಾಯಗಳ ಬಗ್ಗೆ ಮತ್ತು ಭವಿಷ್ಯಕ್ಕಾಗಿ ಅದನ್ನು ಉಳಿಸುವ ಮಹತ್ವದ ಬಗ್ಗೆ ಅವರಿಗೆ ತಿಳಿಸಿ.
ಪ್ರಮುಖ ಚರ್ಚೆಗೆ ಸೇರಿಸಿಕೊಳ್ಳಿ
ನಿಮ್ಮ ಮಗುವನ್ನು ಪ್ರಮುಖ ಚರ್ಚೆಯಿಂದ ಹೊರಗಿಡುವುದು ಸೂಕ್ತವಲ್ಲ. ಇದರಿಂದಾಗಿ ಅವರು ಕೆಲವು ವಿಷಯಗಳನ್ನು ತಿಳಿಯಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಪ್ರಮುಖ ಅಂಶಗಳನ್ನು ಚರ್ಚಿಸುವಾಗ ಮಕ್ಕಳನ್ನು ಸೇರಿಸಿಕೊಂಡು ಅವರಿಗೂ ಅರ್ಥವಾಗುವಂತೆ ವರ್ತಿಸುವುದು ಪಾಲಕರ ಜವಾಬ್ದಾರಿಯಾಗಿದೆ.
ಕೆಲವು ತಪ್ಪನ್ನು ಒಪ್ಪಿಕೊಳ್ಳಿ.
ಪಾಲಕರು ಮಕ್ಕಳ ಕೆಲವು ತಪ್ಪುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡು ಬಿಡಬೇಕು ಎನ್ನುವುದು ಇದರ ಅರ್ಥವಲ್ಲ. ಕೆಲವು ತಪ್ಪುಗಳು ಮಕ್ಕಳ ಅರಿವಿಗೆ ಬಾರದಂತೆ ನಡೆದಿರುತ್ತದೆ. ಅವುಗಳನ್ನು ತಿಳಿಸಿ ಹೇಳುವ ಮತ್ತು ಅದನ್ನು ಒಪ್ಪಿ ಇನ್ನು ಹಾಗೆ ಆಗದಂತೆ ನೋಡಿಕೊಳ್ಳುವುದು ಪಾಲಕರ ಗುರುತರ ಜವಾಬ್ದಾರಿಗಳಲ್ಲಿ ಒಂದು.
ಇವಿಷ್ಟು ಅಂಶಗಳು ಮಕ್ಕಳಲ್ಲಿ ಸಕಾರಾತ್ಮಕ ಭಾವವನ್ನು ಮೂಡಿಸಲು ಹಾಗೂ ಜವಾಬ್ದಾರಿಗಳನ್ನು ಅರಿಯಲು ಕಾರಣವಾದರೆ, ಪಾಲಕರು ಮಾಡುವ ಕೆಲವು ತಪ್ಪುಗಳು ಮಕ್ಕಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಏನು ಮಾಡಬಾರದು? ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ನಡೆಸಬೇಕು.
ಮಕ್ಕಳಲ್ಲಿ ಋಣಾತ್ಮಕತೆ ತುಂಬುವುದು ತರವಲ್ಲ.
ಇದು ನಿಜವಾಗಿಯೂ ಮಕ್ಕಳಲ್ಲಿ ಭಾವನಾತ್ಮಕ, ಮಾನಸಿಕ ಮತ್ತು ಶಾರೀರಿಕ ಸಮಸ್ಯೆಗಳನ್ನು ತಂದೊಡ್ಡಬಹುದು. ನೀನು ಯಾವುದಕ್ಕೂ ಪ್ರಯೋಜನವಿಲ್ಲ, ಮೂರ್ಖ, ಯಾವುದಕ್ಕೂ ಲಾಯಕ್ಕು ಇಲ್ಲ ಎಂದು ಹೇಳುತ್ತಿದ್ದರೆ ಮಕ್ಕಳಲ್ಲಿ ಅವರ ಆತ್ಮವಿಶ್ವಾಸ, ಭರವಸೆ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ನಕಾರಾತ್ಮಕ ಭಾವನೆಗಳನ್ನು ತುಂಬಿಸುತ್ತಾ ಹೋದರೆ ದೊಡ್ಡವರಾದ ಮೇಲೆ ಅದೇ ಭಾವನೆ ಬೆಳೆಯುತ್ತದೆ. ಪ್ರೀತಿ ಮತ್ತು ಹೊಗಳಿಕೆಯಿಂದ ಮಕ್ಕಳಲ್ಲಿ ಧನಾತ್ಮಕ ಭಾವನೆ ಮೂಡಿಸಬೇಕು.
ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯದಿರುವುದು.
ಮಕ್ಕಳಿಗೆ ಪೋಷಕರು ಹೆಚ್ಚಿನ ಸಮಯದಲ್ಲಿ ಬೇಕಾಗುತ್ತದೆ, ನಂತರ ಮನೆಕೆಲಸದವರು, ಸಹಾಯಕರು, ಕೆಲಸದವರನ್ನು ಇಟ್ಟುಕೊಂಡು ಮಕ್ಕಳು ಕೇಳಿದ್ದನ್ನು ಕೇಳಿ ಕೊಡಿಸಿದರೆ ಮಕ್ಕಳಿಗೆ ಸಾಕಷ್ಟು ಹಣ ಖರ್ಚು ಮಾಡಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಬಹುತೇಕ ಪೋಷಕರು ಅಂದುಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ಬೇಕಾಗಿರುವುದು ಅದಲ್ಲ. ಮಕ್ಕಳಿಗೆ ಷರತ್ತುರಹಿತ ಪ್ರೀತಿ, ಭದ್ರತೆ, ಹೊಗಳಿಕೆ, ಶಿಸ್ತು, ಕಾಳಜಿ ಬೇಕು. ಪ್ರೀತಿ, ವಿಶ್ವಾ, ಕಾಳಜಿಯನ್ನು ಬೇರೆ ಯಾವುದರಿಂದಲೂ ಕೊಡಲು ಸಾಧ್ಯವಿಲ್ಲ. ಗಿಫ್ಟ್, ಐಪ್ಯಾಡ್, ಗೇಮ್, ಪಿಜ್ಜಾ, ಬರ್ಗರ್ ಮೊದಲಾದವುಗಳಿಂದ ಮಕ್ಕಳನ್ನು ಸಂತೋಷಪಡಿಸಬಹುದು ಎಂಬುದೆಲ್ಲ ಸುಳ್ಳು, ಅವೆಲ್ಲ ಕ್ಷಣಿಕ ಸುಖಗಳಷ್ಟೆ. ಮಗುವಿನ ಹೃದಯ ತಟ್ಟುವುದು ಪೋಷಕರ ನಿಜವಾದ ಪ್ರೀತಿ ಮತ್ತು ಕಾಳಜಿ.
ಮಕ್ಕಳನ್ನು ಅತಿಯಾಗಿ ಕಾಳಜಿವಹಿಸುವುದು ಸರಿಯಲ್ಲ.
ಹಾಗೆಂದು ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡುವುದು ಸಹ ಸರಿಯಲ್ಲ, ಅದರಿಂದ ಅವರು ಮಾಡಿದ್ದೇ ಸರಿ, ತಮ್ಮದೇನೂ ತಪ್ಪಿಲ್ಲ ಎಂದು ಅಂದುಕೊಳ್ಳುತ್ತಾರೆ. ಮಕ್ಕಳಲ್ಲಿ ಅವರ ವಯಸ್ಸಿಗೆ ತಕ್ಕಂತೆ ತುಂಟತನ, ಸಿಟ್ಟು, ಕೋಪ, ಬೇಸರ, ಗೊಂದಲ ಎಲ್ಲವೂ ಸಿಗಬೇಕು, ಬದುಕಿನ ವಾಸ್ತವ ಮತ್ತು ಸತ್ಯಗಳನ್ನು ಎದುರಿಸಲು ಬಿಡಬೇಕು. ನಮ್ಮ ಕೈಯಿಂದಾದಷ್ಟು ಉತ್ತಮ ಜೀವನ ಮಕ್ಕಳಿಗೆ ಕೊಡಿಸಬೇಕು ಎಂದು ಪೋಷಕರು ಹೇಳುವುದನ್ನು ಕೇಳುತ್ತೇವೆ. ಆದರೆ ಅದರ ಜೊತೆಗೆ ಮಕ್ಕಳಿಗೆ ಜೀವನದ ಪಾಠ, ಭಾವನಾತ್ಮಕ ಪಾಠ, ಪ್ರೀತಿ, ಕಾಳಜಿ, ಸಮಯ, ಮೌಲ್ಯದ ಪಾಠ ಕಲಿಸಬೇಕು.
ಒಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಯೊಂದು ಹಂತವನ್ನು ಗಮನಿಸುತ್ತಾ ಅವರ ಬದುಕನ್ನು ಬೆಳಗಿಸಲು ಪಾಲಕರು ಕೊಡಗಿಕೊಳ್ಳುವುದು ಅಗತ್ಯ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".